‘ಬಿಜೆಪಿಯವರು ಏನೇ ಕೊಟ್ರು ಕಿತ್ಕೊಳ್ಳಿ, ಆದ್ರೆ ವೋಟ್ ನನಗೇ ಹಾಕಿ’

|

Updated on: Nov 23, 2019 | 12:07 PM

ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆ ರಂಗೇರಿದ್ದು, ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ದುಡ್ಡು, ಸೀರೆ ಏನೇ ಕೊಟ್ರೂ ಕಿತ್ಕೊಳ್ಳಿ. ಆದ್ರೆ ವೋಟ್ ಮಾತ್ರ ನನಗೆ ಹಾಕಿ ಎಂದು ಪ್ರಚಾರದ ವೇಳೆ ಕಾಂಗ್ರೆಸ್​ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ. ನಾನು ಎರಡು ಚುನಾವಣೆಯಲ್ಲಿ ಸೋತಿದ್ದೇನೆ, ನನ್ನ ಹತ್ರ ಹಣ ಇಲ್ಲ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅವ್ರ ಹತ್ರ ಹಣ ಇದೆ. ಹೀಗಾಗಿ ಬಿಜೆಪಿಯವರು ಏನೇ ಕೊಟ್ರು ನೀವು ತೆಗೆದುಕೊಳ್ಳಿ ವೋಟ್ ಮಾತ್ರ ನನಗೆ ಹಾಕಿ […]

‘ಬಿಜೆಪಿಯವರು ಏನೇ ಕೊಟ್ರು ಕಿತ್ಕೊಳ್ಳಿ, ಆದ್ರೆ ವೋಟ್ ನನಗೇ ಹಾಕಿ’
Follow us on

ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆ ರಂಗೇರಿದ್ದು, ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ದುಡ್ಡು, ಸೀರೆ ಏನೇ ಕೊಟ್ರೂ ಕಿತ್ಕೊಳ್ಳಿ. ಆದ್ರೆ ವೋಟ್ ಮಾತ್ರ ನನಗೆ ಹಾಕಿ ಎಂದು ಪ್ರಚಾರದ ವೇಳೆ ಕಾಂಗ್ರೆಸ್​ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ.

ನಾನು ಎರಡು ಚುನಾವಣೆಯಲ್ಲಿ ಸೋತಿದ್ದೇನೆ, ನನ್ನ ಹತ್ರ ಹಣ ಇಲ್ಲ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅವ್ರ ಹತ್ರ ಹಣ ಇದೆ. ಹೀಗಾಗಿ ಬಿಜೆಪಿಯವರು ಏನೇ ಕೊಟ್ರು ನೀವು ತೆಗೆದುಕೊಳ್ಳಿ ವೋಟ್ ಮಾತ್ರ ನನಗೆ ಹಾಕಿ ಎಂದು ಮತದಾರರಲ್ಲಿ ಚಂದ್ರಶೇಖರ್ ಮನವಿ ಮಾಡಿದರು.

ನಿಖಿಲ್ ಹಣ ಪಡೆದು ಸುಮಲತಾಗೆ ಮತ ಹಾಕಿರಲಿಲ್ವಾ?
ಲೋಕಸಭೆ ಚುನಾವಣೆಯಲ್ಲೂ ಅಭ್ಯರ್ಥಿಗಳು ಹೀಗೇ ಮಾಡಿದ್ದರು. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನೀಡಿದ ಹಣವನ್ನ ಪಡೆದುಕೊಂಡು, ಮತವನ್ನ ಸುಮಲತಾ ಅಂಬರೀಶ್​ಗೆ ಹಾಕಿರಲಿಲ್ವಾ? ಹೀಗಾಗಿ ನಾನು ಈ ರೀತಿ ವೋಟ್ ಕೇಳೋದ್ರಲ್ಲಿ ತಪ್ಪೇನಿದೆ? ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಲ್ದೆ ಸಮಜಾಯಿಷಿ ಸಹ ಕೊಟ್ಟಿದ್ದಾರೆ.

Published On - 12:05 pm, Sat, 23 November 19