ಪಕ್ಷಕ್ಕೆ ದುಡಿದವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್: ಸಚಿವ ಎನ್​ ಚಲುವರಾಯಸ್ವಾಮಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 07, 2023 | 3:57 PM

ಪಕ್ಷಕ್ಕೆ ದುಡಿದವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗಲಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್​.ಚಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಂದು ಲೈನ್ ರೆಸ್ಯೂಲೇಷನ್ ಕೊಟ್ಟಿದ್ದಾರೆ. ಮುಖಂಡರ ಅಭಿಪ್ರಾಯವನ್ನು ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ಅಧ್ಯಕ್ಷರಿಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ. 

ಪಕ್ಷಕ್ಕೆ ದುಡಿದವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್: ಸಚಿವ ಎನ್​ ಚಲುವರಾಯಸ್ವಾಮಿ
ಸಚಿವ ಎನ್​.ಚಲುವರಾಯಸ್ವಾಮಿ
Follow us on

ಮಂಡ್ಯ, ಅಕ್ಟೋಬರ್​ 07: ಪಕ್ಷಕ್ಕೆ ದುಡಿದವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗಲಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್​.ಚಲುವರಾಯಸ್ವಾಮಿ (N chaluvaraya swamy) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಂದು ಲೈನ್ ರೆಸ್ಯೂಲೇಷನ್ ಕೊಟ್ಟಿದ್ದಾರೆ. ಮುಖಂಡರ ಅಭಿಪ್ರಾಯವನ್ನು ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ಅಧ್ಯಕ್ಷರಿಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಯಾವತ್ತೂ ಚುನಾವಣಾ ಪೂರ್ವ ಮೈತ್ರಿಗೆ ಹೋಗಿಲ್ಲ. ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಹೀನಾಯವಾಗಿದೆ. ಹೀಗಾಗಿ ಜೆಡಿಎಸ್ ಜೊತೆ ಬಿಜೆಪಿಯವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ನಮ್ಮ ಆಡಳಿತ ನೋಡಿ ಜೆಡಿಎಸ್​, ಬಿಜೆಪಿಯವರಿಗೆ ಭಯ ಬಂದಿದೆ. ಕಾವೇರಿ ಸಮಸ್ಯೆ ಇದ್ರೂ ಪ್ರಧಾನಿ  ಮೋದಿ ಭೇಟಿಗೆ ಅವಕಾಶ ಕೊಟ್ಟಿಲ್ಲ. ಬರಗಾಲದ ಬಗ್ಗೆ ಚರ್ಚೆ ಮಾಡುವುದಕ್ಕೂ ಕೇಂದ್ರ ಅವಕಾಶ ಕೊಡುತ್ತಿಲ್ಲ. ಮೋದಿ ಬಳಿ ಮಾಜಿ ಸಿಎಂ ಗಳಾದ ಹೆಚ್​ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮತ್ತು ಬಿಎಸ್​ ಯಡಿಯೂರಪ್ಪ ಹೋಗಬಹುದಿತ್ತು. ಕಾವೇರಿ ಸಮಸ್ಯೆ ಕುರಿತು ಕೇಂದ್ರ ಸರ್ಕಾರದ ಬಳಿ ಚರ್ಚಿಸಬಹುದಿತ್ತು. ಆದರೆ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹಿಷ ದಸರಾ ಮುಗಿಯುವವರೆಗೆ ಸಂಸದ ಪ್ರತಾಪ್ ಸಿಂಹರನ್ನ ಬಂಧಿಸಿ: ಮಾಜಿ ಮೇಯರ್ ಪುರುಷೋತ್ತಮ

ಮೇಕೆದಾಟು ಮಾಡುವುದರಿಂದ ಏನು ತೊಂದರೆ ಎಂದು ತಮಿಳುನಾಡಿಗೆ ನ್ಯಾಯಧೀಶರು ಹೇಳಿದ್ದಾರೆ. ನಾಳೆ ಕೇಂದ್ರ ಅನುಮತಿ ಕೊಟ್ಟರೆ ನಾಡಿದ್ದೆ ಕಾಮಗಾರಿ ಆರಂಭಿಸುತ್ತೇವೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತರಿಗೆ ಅನ್ಯಾಯವಾಗ್ತಿದೆ ಎಂದ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು: ಪ್ರಲ್ಹಾದ್ ಜೋಶಿ

ರಾಹುಲ್ ಗಾಂಧಿ ಬಗ್ಗೆ ಮಾತನಾಡುವ ಬಿಜೆಪಿ ಅವರಿಗೆ ದೇಶದ ಜನ ಉತ್ತರ ಕೊಡುತ್ತಾರೆ. ಬಿಜೆಪಿ ಅವರಿಗೆ ಗೌರವ ಇದ್ದರೇ ಗೌರವವಾಗಿ ನಡೆದುಕೊಳ್ಳಲು ಹೇಳಿ. ರಾಹುಲ್ ಗಾಂಧಿಗೆ ಅಧಿಕಾರದ ಆಸೆಯಿಲ್ಲ. ಅಡ್ವಾಣಿ ಅವರನ್ನ ಮಾತನಾಡಿಸುವ ಪ್ರಧಾನಿ ಇದ್ದಾರೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ-ಜೆಡಿಎಸ್​ಗೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದ ಬಗ್ಗೆ ಪಾದಯಾತ್ರೆ ಯಾರು ಮಾಡಿಲ್ಲ. ರಾಹುಲ್ ಗಾಂಧಿ ಮಾಡಿದ್ದಾರೆ. ಜೆಡಿಎಸ್ ಅಧಿಕಾರದಲ್ಲಿ ಇದ್ದಾಗ ಐದು ವರ್ಷ ಪೂರೈಸುತ್ತೆ ಎಂದು ಜೆಡಿಎಸ್ ನಾಯಕರೇ ಹೇಳಿಲ್ಲ. ಚುನಾವಣೆಗಾಗಿ ಗ್ಯಾರಂಟಿ ಕೊಟ್ಟಿಲ್ಲ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ಎಂಟು ಸಾವಿರ ಕೋಟಿ ರೂ. ಹುಡುಕುತ್ತಿದ್ದೇನೆ ಎಲ್ಲೂ ಸಿಗುತ್ತಿಲ್ಲ. ಆ ಕಡತ ಎಲ್ಲದರೂ ಸಿಕ್ಕಿದರೇ ಕೊಡಿ. ಸರ್ಕಾರ ಕೆಡವಲು ಹೋದರೇ ನಾವೇನೂ ಕಡಲೇಕಾಯಿ ತಿನ್ನುತ್ತಿರುತ್ತೇವಾ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.