ಮಂಡ್ಯ ಮಿಮ್ಸ್​ನಲ್ಲಿ ಅವ್ಯವಸ್ಥೆಯ ಆಗರ; ಕೊವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ಎರಡು ಬೆಡ್ ಜೋಡಿಸಿ ಮೂವರು ಬಾಣಂತಿಯರಿಗೆ ಚಿಕಿತ್ಸೆ

| Updated By: ಆಯೇಷಾ ಬಾನು

Updated on: Oct 25, 2021 | 2:20 PM

ಮಂಡ್ಯ ಮಿಮ್ಸ್ನಲ್ಲಿ ಕೊವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಬೆಡ್ ಜೋಡಿಸಿ ಮೂವರು ಬಾಣಂತಿಯರಿಗೆ ಇಬ್ಬರು ಚಿಕಿತ್ಸೆ ನೀಡಿದ್ದಾರೆ.

ಮಂಡ್ಯ ಮಿಮ್ಸ್​ನಲ್ಲಿ ಅವ್ಯವಸ್ಥೆಯ ಆಗರ; ಕೊವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ಎರಡು ಬೆಡ್ ಜೋಡಿಸಿ ಮೂವರು ಬಾಣಂತಿಯರಿಗೆ ಚಿಕಿತ್ಸೆ
ಮಂಡ್ಯ ಮಿಮ್ಸ್ನಲ್ಲಿ ಅವ್ಯವಸ್ಥೆಯ ಆಗರ; ಕೊವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ಎರಡು ಬೆಡ್ ಜೋಡಿಸಿ ಮೂವರು ಬಾಣಂತಿಯರಿಗೆ ಚಿಕಿತ್ಸೆ
Follow us on

ಮಂಡ್ಯ: ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಎರಡು ಬೆಡ್ ಜೋಡಿಸಿ ಮೂವರು ಬಾಣಂತಿಯರಿಗೆ ಒಟ್ಟಿಗೆ ಚಿಕಿತ್ಸೆ ನೀಡಲಾಗಿದೆ. ಬಾಣಂತಿಯರು, ಶಿಶುಗಳು ಇಕ್ಕಟ್ಟಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವ್ಯವಸ್ಥೆ ಎದ್ದು ಕಾಣಿಸುತ್ತಿದೆ. ಹೆರಿಗೆ ವಾರ್ಡ್ನಲ್ಲಿ ಬಾಣಂತಿಯರು, ಶಿಶುಗಳಿಗೆ ನರಕ ದರ್ಶನವಾಗುತ್ತಿದೆ.ಮಂಡ್ಯ ಮಿಮ್ಸ್ನಲ್ಲಿ ಕೊವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಬೆಡ್ ಜೋಡಿಸಿ ಮೂವರು ಬಾಣಂತಿಯರಿಗೆ ಇಬ್ಬರು ಚಿಕಿತ್ಸೆ ನೀಡಿದ್ದಾರೆ. ಮಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಹೇಳೋರೂ, ಕೇಳೋರೂ ಇಲ್ಲ. ಹೆರಿಗೆ ವಾರ್ಡ್ ಹೇಗಿರಬೇಕೆಂಬ ಕನಿಷ್ಠ ಜ್ಞಾನವೂ ಸಿಬ್ಬಂದಿಗಿಲ್ಲ ಎಂದು ಮಿಮ್ಸ್ ವಿರುದ್ಧ ಬಾಣಂತಿಯರು, ಗರ್ಭಿಣಿಯರು ಆಕ್ರೋಶ ಹೊರ ಹಾಕಿದ್ದಾರೆ. ಮಂಡ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಮುಖ್ಯಸ್ಥರಿಗೆ ಹಿಡಿಶಾಪ ಹಾಕಿದ್ದಾರೆ.

ಮಂಡ್ಯ ಮೆಡಿಕಲ್ ಕಾಲೇಜಿನ ಹೆರಿಗೆ ವಿಭಾಗ ತುಂಬಾ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದೆ. ಇಲ್ಲಿ ಹೆರಿಗಾಗಿ ದಾಖಲಾಗುವ ಮಹಿಳೆಯರನ್ನ ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತಹ ಸೌಲಭ್ಯ ನೀಡಿ ಜೋಪಾನ ಮಾಡಲಾಗ್ತಿದೆ ಎಂದೇ ಹೇಳಲಾಗುತ್ತಿತ್ತು. ಈ ರೀತಿಯ ಸೌಲಭ್ಯವೇ ಈಗ ತೊಡಕಾಗಿ ಪರಿಣಮಿಸಿದೆ. ಯಾಕಂದ್ರೆ ಆಸ್ಪತ್ರೆಯಲ್ಲಿ ಪ್ರತೀ ನಿತ್ಯ 30 ರಿಂದ 35 ಜನರಿಗೆ ಹೆರಿಗೆ ಮಾಡಲಾಗುತ್ತಿದ್ದು ಬೆಡ್ ಗಳ ಸಮಸ್ಯೆ ಎದುರಾಗಿದೆ. ಹೀಗಾಗಿಯೇ ಒಂದೊಂದು ಬೆಡ್ ನಲ್ಲಿ ಇಬ್ಬರು ಅಥವಾ ಎರಡು ಬೆಡ್ ಗಳನ್ನ ಜೋಡಿಸಿ ಮೂರು ಅಥವಾ ನಾಲ್ಕು ಜನ ಮಹಿಳೆಯರಿಗೆ ಚಿಕಿತ್ಸೆ ನೀಡಲಾಗ್ತಿದೆ.

ಮಂಡ್ಯ ಮೆಡಿಕಲ್ ಕಾಲೇಜು ಕಳೆದ 13 ವರ್ಷಗಳ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸ್ಥಾಪನೆಯಾದ ಈ ಕಾಲೇಜಿನಲ್ಲಿ ಈಗಾಗಲೇ ಸಾಕಷ್ಟು ಜನರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ನಡುವೆ ಒಂದಿಲ್ಲೊಂದು ಕಾರಣಕ್ಕಾಗಿ ಆರಂಭದ ದಿನಗಳಿಂದಲೂ ಸದ್ದು ಮಾಡುತ್ತಲೇ ಬಂದಿದ್ದು ಕಾಲೇಜಿನ ಹೆರಿಗೆ ವಾರ್ಡ್ ನ ವಿಚಾರಕ್ಕೆ ಸಂಬಂಧಿಸಿದಂತೆ ಸದ್ದು ಮಾಡಲಾರಂಭಿಸಿದೆ. ಯಾಕಂದ್ರೆ ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿನ ಹೆರಿಗೆ ವಾರ್ಡ್ ನಲ್ಲಿ ಒಂದು ಹಾಸಿಗೆಯ ಮೇಲೆ ಇಬ್ಬರು ಗರ್ಭಿಣಿ ಮಹಿಳೆಯರನ್ನ ಅಥವಾ 2 ಹಾಸಿಗೆಗಳನ್ನ ಜೋಡಿಸಿ ಮೂರು ಜನ ಅಥವಾ ನಾಲ್ಕು ಜನ ಭಾಣಂತಿಯರಿಗೆ ಚಿಕಿತ್ಸೆ ನೀಡಲಾಗ್ತಿದೆ. ಈಗಲೂ ಆಸ್ಪತ್ರೆಯೆ ಹೆರಿಗೆ ವಾರ್ಡ್ ನಲ್ಲಿ ಇದೇ ಸ್ಥಿತಿ ನಿರ್ಮಾಣವಾಗಿದೆ. ಎರಡು ಬೆಡ್​ಗಳನ್ನ ಜೋಡಿಸಿ ಮೂರು ಜನ ಬಾಣಂತಿರನ್ನ ಮಲಗಿಸಿರೊ ವಿಡಿಯೋ ವೈರಲ್ ಆಗಿದ್ದು ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನ ಮತ್ತೊಮ್ಮೆ ಸಾರಿ ಹೇಳಿದೆ.

ಚಿಕಿತ್ಸೆಗಾಗಿ ಬರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ
ಇನ್ನ ಎರಡು ಹಾಸಿಗೆ ಜೋಡಿಸಿ ಮೂವರು ಬಾಣಂತಿಯರಿಗೆ ಚಿಕಿತ್ಸೆ ನೀಡ್ತಿರೊದನ್ನ ಆಸ್ಪತ್ರೆಯ ಆಡಳಿತ ಮಂಡಳಿಯೇ ಪರೋಕ್ಷವಾಗಿ ಒಪ್ಪಿಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಟಿವಿ9 ಗೆ ಪ್ರತಿಕ್ರಿಯೆ ನೀಡಿರೊ ಆಸ್ಪತ್ರೆಯ ನಿರ್ದೇಶಕ ಡಾ ಹರೀಶ್ ನಮ್ಮ ಆಸ್ಪತ್ರೆಯಲ್ಲಿ ನಿಮಯದ ಅನುಸಾರ 90 ಜನ ಮಹಿಳೆಯರಿಗೆ ಚಿಕಿತ್ಸೆ ನೀಡಬಹುದು ಆದರೆ, ಹೆರಿಗೆ ಮತ್ತು ಇತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆಗಾಗಿ ಬರುವ ಮಹಿಳೆಯರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಹಾಸಿಗೆಗಳ ಪ್ರಮಾಣವನ್ನ 198 ಕ್ಕೆ ಹೆಚ್ಚಿಸಲಾಯ್ತು. ಇಷ್ಟಾದರೂ
ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು ಆಸ್ಪತ್ರೆಯಲ್ಲಿ ಇಂದು 258 ಜನ ಮಹಿಳೆಯರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಿತ್ಯವೂ 30 ರಿಂದ 35 ಜನ ಮಹಿಳೆಯರಿಗೆ ಹೆರಿಗೆ ಮಾಡಲಾಗ್ತಿದೆ. ಹೀಗಾಗಿ ಒಮ್ಮೊಮ್ಮೆ ಆ ರೀತಿಯ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದ್ದಾರೆ.

ಮಂಡ್ಯ ಮೆಡಿಕಲ್ ಕಾಲೇಜಿನ ಹೆರಿಗೆ ವಿಭಾಗದಲ್ಲಿ ಹೆರಿಗೆಗಾಗಿ ದಾಖಲಾಗುವ ಮಹಿಳೆಯರನ್ನ ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಈ ವಿಭಾಗದಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಗರ್ಭಿಣಿ ಮಹಿಳೆಯನ್ನ ಚೆನ್ನಾಗಿ ಆರೈಕೆ ಮಾಡಿ ಯಾವುದೇ ರೀತಿಯ ಸಮಸ್ಯೆ ಇಲ್ಲದಂತೆ ಸುಸೂತ್ರವಾಗಿ ಹೆರಿಗೆ ಮಾಡಿಸಲಾಗ್ತಿದೆ. ಹೀಗಾಗಿಯೇ ಆಸ್ಪತ್ರೆಗೆ ದಾಖಲಾಗುವ ಮಹಿಳೆಯರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಬಂದಿದೆ. ಯಾವಾಗ ಇಲ್ಲಿ ಸೌಲಭ್ಯ ಚೆನ್ನಾಗಿದೆ ಎಂಬುದು ಜನರಿಗೆ ಗೊತ್ತಾಯ್ತೊ ಆಗಲೇ ದೂರದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲಾರಂಭಿಸಿದರು ಇದರ ಪರಿಣಾಮ ಈಗ ದಿನ ನಿತ್ಯ 30 ರಿಂದ 35 ಜನ ಮಹಿಳೆಯರಿಗೆ ಹೆರಿಗೆ ಮಾಡಲಾಗ್ತಿದೆ. ಈ ಪೈಕಿ 10 ರಿಂದ 15 ಜನರಿಗೆ ಸಿಜೇರಿಯನ್ ಮಾಡಿ ಹೆರಿಗೆ ಮಾಡಲಾಗ್ತಿದೆ. ಹೆರಿಗೆ ಅಷ್ಟೇ ಅಲ್ಲದೆ ಇತರೇ ಸಮಸ್ಯೆಗಳನ್ನ ಹೊತ್ತು ಆಸ್ಪತ್ರೆಗೆ ಬರುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದ್ದರಿಂದ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಹಾಸಿಗೆಗಳ ಸಮಸ್ಯೆ ಎದುರಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಹೆರಿಗೆ ವಾರ್ಡ್ ಸೇರಿದಂತೆ ಬೇರೆ ಬೇರೆ ವಿಭಾಗದಲ್ಲಿ 258 ಜನ ಮಹಿಳೆಯರೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರೆ ಇಲ್ಲಿನ ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳಬೇಕು ಎಂದು ಸ್ಥಳೀಯರು ಸರ್ಕಾರ ಒಂದಷ್ಟು ಹಾಸಿಗೆಗಳನ್ನ ಹೆಚ್ಚಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದ ಮಿಮ್ಸ್‌ನಲ್ಲಿ ಕೊರೊನಾ ಸೋಂಕಿತರ ಪರದಾಟ; ಬೆಡ್ ಇಲ್ಲದೆ ಕುಳಿತಲ್ಲೇ ಆಕ್ಸಿಜನ್ ಪಡೆಯುವ ದುಃಸ್ಥಿತಿ ನಿರ್ಮಾಣ

Published On - 2:10 pm, Mon, 25 October 21