ಇಂದಿನಿಂದ ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​​ ಪ್ರಕ್ರಿಯೆ: ಕೆಆರ್​ಎಸ್​​​ನಲ್ಲಿ ಇಂದು ರೈತರ ಪ್ರತಿಭಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 25, 2022 | 3:06 PM

ಟ್ರಯಲ್ ಬ್ಲಾಸ್ಟ್ ಪ್ರಕ್ರಿಯೆಗೆ ರೈತಪರ ಸಂಘಟನೆಗಳ ವಿರೋಧವಿದ್ದು, ಕೆಆರ್​ಎಸ್​​​ನಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ರೈತರಿಂದ ಪ್ರತಿಭಟನೆ ಮಾಡಲಾಗುತ್ತಿದೆ.

ಇಂದಿನಿಂದ ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​​ ಪ್ರಕ್ರಿಯೆ: ಕೆಆರ್​ಎಸ್​​​ನಲ್ಲಿ ಇಂದು ರೈತರ ಪ್ರತಿಭಟನೆ
ಕೆಆರ್​ಎಸ್​ ಜಲಾಶಯ
Follow us on

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೇಬಿ ಬೆಟ್ಟದಲ್ಲಿ ಇಂದಿನಿಂದ ಜುಲೈ 31ರವರೆಗೆ ನಡೆಯುವ ಟ್ರಯಲ್ ಬ್ಲಾಸ್ಟ್ (Trail Blast) ಪ್ರಕ್ರಿಯೆ ನಡೆಯಲಿದೆ. ಕೆಆರ್​ಎಸ್​ ಜಲಾಶಯದ ಸಮೀಪ ಇರುವ ಬೇಬಿ ಬೆಟ್ಟ, ಗಣಿಗಾರಿಕೆಯಿಂದ ಕೆಆರ್​ಎಸ್ ಡ್ಯಾಂಗೆ​ ಅಪಾಯ ಆರೋಪ ಮಾಡಲಾಗಿದೆ. ಇದರ ಪರೀಕ್ಷೆಗಾಗಿ ತಜ್ಞರಿಂದ ಟ್ರಯಲ್ ಬ್ಲಾಸ್ಟ್​​ ಪ್ರಕ್ರಿಯೆ ನಡೆಯುತ್ತಿದೆ. ಟ್ರಯಲ್ ಬ್ಲಾಸ್ಟ್​​ಗೆ ರೈತರು, ಹಲವು ಸಂಘಟನೆಗಳ ಪರ, ವಿರೋಧದ ನಡುವೆ ಸರ್ಕಾರದಿಂದ ಟ್ರಯಲ್ ಬ್ಲಾಸ್ಟ್​​ ಪ್ರಕ್ರಿಯೆ ಅನುಮತಿ ನೀಡಲಾಗಿದೆ. ಜಾರ್ಖಂಡ್​​​ನ ಧನಾಬಾದ್​ನಿಂದ ಆಗಮಿಸಿರುವ ವೈಜ್ಞಾನಿಕ ಮತ್ತು ಸಂಶೋಧನಾ ಕೇಂದ್ರದ ತಜ್ಞರಿಂದ ಬ್ಲಾಸ್ಟ್ ಪ್ರಕ್ರಿಯೆ ನಡೆಯಲಿದೆ. ವಿರೋಧದ ನಡುವೆಯೂ ಟ್ರಯಲ್ ಬ್ಲಾಸ್ಟ್​​ಗೆ ಸಿದ್ಧತೆ ನಡೆದಿದ್ದು, 2019ರಲ್ಲೂ ಟ್ರಯಲ್ ಬ್ಲಾಸ್ಟ್​​ಗೆ ತಜ್ಞರು ಆಗಮಿಸಿದ್ದರು. ಆ ವೇಳೆ ಪರ-ವಿರೋಧ ಪ್ರತಿಭಟನೆಯಿಂದ ಟ್ರಯಲ್ ಬ್ಲ್ಯಾಸ್ಟ್ ನಡೆದಿರಲಿಲ್ಲ. ಇದೀಗ ಟ್ರಯಲ್ ಬ್ಲಾಸ್ಟ್​ಗೆ  ಸರ್ಕಾರ ಅನುಮತಿ ನೀಡಿದೆ.

ಇದನ್ನೂ ಓದಿ: ಗಣಿಗಾರಿಕೆಯಿಂದ ಕೆಆರ್​ಎಸ್​​ಗೆ ಅಪಾಯ ಆರೋಪ: ಮುಂದಿನ ವಾರ ಟ್ರಯಲ್ ಬ್ಲಾಸ್ಟ್​ಗೆ ಸರ್ಕಾರ ನಿರ್ಧಾರ

ವೈಜ್ಞಾನಿಕವಾಗಿ ತಿಳಿಯಲು ಟ್ರಯಲ್ಸ್ ಬ್ಲಾಸ್ಟ್​ ಮಾಡುತ್ತಿದ್ದೇವೆ: ಸಚಿವ ಹಾಲಪ್ಪ

ವೈಜ್ಞಾನಿಕವಾಗಿ ತಿಳಿಯಲು ಟ್ರಯಲ್ಸ್ ಬ್ಲಾಸ್ಟ್​ ಮಾಡುತ್ತಿದ್ದೇವೆ ಎಂದು ಧಾರವಾಡದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಹೇಳಿಕೆ ನೀಡಿದರು. ಗಣಿಗಾರಿಕೆಯಿಂದ ಕೆಆರ್​ಎಸ್​ ಡ್ಯಾಂಗೆ ಹಾನಿ ಎಂದು ದೂರು ನೀಡಲಾಗಿದೆ. ದೂರು ಬಂದ ಹಿನ್ನೆಲೆಯಲ್ಲಿ ಟ್ರಯಲ್ ಬ್ಲಾಸ್ಟ್​​ ಮಾಡುತ್ತಿದ್ದೇವೆ. KRS ಸುತ್ತಮುತ್ತ ಸದ್ಯ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ. ತಜ್ಞರು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತಾರೆ. ತಜ್ಞರು ನೀಡುವ ವರದಿ ಆಧರಿಸಿ ಸರ್ಕಾರದಿಂದ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಹಾಲಪ್ಪ ಹೇಳಿದರು.

ನಾಳೆಯಿಂದ ಟ್ರಯಲ್ ಬ್ಲಾಸ್ಟ್ ಆರಂಭ; ಗಣಿ ಅಧಿಕಾರಿ ಪದ್ಮಜಾ

ಮಂಡ್ಯ ಗಣಿ ಅಧಿಕಾರಿ ಪದ್ಮಜಾ ಹೇಳಿಕೆ ನೀಡಿದ್ದು, ಕೆಆರ್​​ಎಸ್ ಡ್ಯಾಂಗೆ ಅಪಾಯ ಇದೆ ಅಂತಾ ಆರೋಪಿಸಲಾಗುತ್ತಿದೆ. ಹಾಗಾಗಿ ಟ್ರಯಲ್ ಬ್ಲಾಸ್ಟ್​​​ಗಾಗಿ ತಜ್ಞರು ಬಂದಿದ್ದಾರೆ. ಇವತ್ತು ಎಲ್ಲಾ ಗುರುತಿಸಿದ ಜಾಗಗಳ ಪರಿಶೀಲನೆ ನಡೆಸಲಾಗ್ತಿದೆ. ಒಟ್ಟು ಐದು ಜಾಗಗಳನ್ನು ಗುರುತಿಸಲಾಗಿದೆ. ನಾಳೆಯಿಂದ ಟ್ರಯಲ್ ಬ್ಲಾಸ್ಟ್ ಆರಂಭವಾಗಲಿದೆ. ವಿಜ್ಙಾನಿಗಳು ರಿಪೋರ್ಟ್ ಏನು ಕೊಡ್ತಾರೆ ನೋಡ್ಬೇಕು. ನಂತರ ಗಣಿಗಾರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತೆ. ಗಣಿಗಾರಿಕೆ ವಿರುದ್ಧ ಹಾಗೂ ಪರವಾಗಿಯೂ ಇದ್ದಾರೆ
ಟ್ರಯಲ್ ಬ್ಲಾಸ್ಟ್​ನಿಂದಾ ಎಲ್ಲವೂ ಗೊತ್ತಾಗುತ್ತೆ ಎಂದು ಹೇಳಿದರು.

ಬೆಳಗ್ಗೆ 10 ಗಂಟೆಗೆ ರೈತರಿಂದ ಪ್ರತಿಭಟನೆ

ಟ್ರಯಲ್ ಬ್ಲಾಸ್ಟ್ ಪ್ರಕ್ರಿಯೆಗೆ ರೈತಪರ ಸಂಘಟನೆಗಳ ವಿರೋಧವಿದ್ದು, ಕೆಆರ್​ಎಸ್​​​ನಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ರೈತರಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಟ್ರಯಲ್ ಬ್ಲ್ಯಾಸ್ಟ್ ಮಾಡಬಾರದು. ಹೀಗಾಗಲೇ ಸ್ಥಳೀಯ ತಜ್ಞರು ಈ ಬಗ್ಗೆ ವರದಿಗಳನ್ನು ನೀಡಿದ್ದಾರೆ. ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್​ಎಸ್​ಗೆ ಅಪಾಯವಿದೆ ಎಂದು. ಆದ್ದರಿಂದ ಟ್ರಯಲ್ ಬ್ಲ್ಯಾಸ್ಟ್ ಕೈ ಬಿಡುವಂತೆ ಪ್ರತಿಭಟನೆ ಮಾಡಲಿದ್ದು, ನಂತರ ಬೇಬಿ ಬೆಟ್ಟಕ್ಕೆ ರೈತರು ತೆರಳಲಿದ್ದಾರೆ.

ಇದನ್ನೂ ಓದಿ: KRS ಡ್ಯಾಂ ಬಳಿ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿ ತಡೆದು ಪ್ರತಿಭಟನೆ; ಸರ್ಕಾರದ ವಿರುದ್ಧ ಆಕ್ರೋಶ

ಟ್ರಯಲ್ ಬ್ಲಾಸ್ಟ್​ಗೆ ತೀವ್ರ ವಿರೋಧ

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ಮುಹೂರ್ತ ಫಿಕ್ಸ್ ಹಿನ್ನಲೆ ಗಣಿಗಾರಿಕೆಯನ್ನ ವಿರೋಧಿಸಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಮುಖ್ಯಮಂತ್ರಿಗಳಿಗೆ ಟ್ವಿಟ್ ಮೂಲಕ ಗಣಿಗಾರಿಕೆ ನಡೆಸದಂತೆ ಸ್ವತಃ ಬಿಜೆಪಿ ಮುಖಂಡನಿಂದಲೇ ಟ್ವೀಟ್ ಮಾಡಲಾಗಿದೆ. ಕನ್ನಾಂಬಾಡಿ ಸುತ್ತಾ ಮುತ್ತಾ 25 ಕಿಲೋ ಮೀಟರ್ ಗಣಿಗಾರಿಕೆ ನಡೆಸದಂತೆ ಮನವಿ ಮಾಡಿದ್ದು, ಜೀವನಾಡಿ ಕೆ.ಆರ್.ಎಸ್ ಡ್ಯಾಂ ಸುತ್ತಾ ಬ್ಲಾಸ್ಟಿಂಗ್ ನಡೆಸದಂತೆ ಟ್ವಿಟ್ ಮಾಡಲಾಗಿದೆ. ಗಣಿಗಾರಿಕೆಗೆ ಅವಕಾಶ ಮಾಡಿ ಕೊಟ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಬೇಬಿ ಬೆಟ್ಟದಲ್ಲಿ ಈಗಾಗ್ಲೆ ಜುಲೈ 25 ರಿಂದ ಟ್ರಯಲ್ ಬ್ಲಾಸ್ಟಿಂಗ್ ನಡೆಸಲು ಸಿದ್ದತೆ ನಡೆದಿದ್ದು, ಜಾರ್ಖಂಡ್​ನಿಂದ ವಿಶೇಷ ಭೂ ವಿಜ್ಞಾನಿಗಳ ತಂಡ ಬರಲಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

Published On - 7:58 am, Mon, 25 July 22