ಕಾವೇರಿ ನದಿಯಲ್ಲಿ ಅನಧಿಕೃತ ಜಲ ಕ್ರೀಡೆ; ಪೊಲೀಸರಿಗೆ ದೂರು ನೀಡಿದ ನೀರಾವರಿ ಇಲಾಖೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 16, 2023 | 5:04 PM

ಮೈಸೂರಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಕರೆ ತಂದು ರಿವರ್ ರ್ಯಾಪ್ಟಿಂಗ್, ಕಯಾಕಿಂಗ್ ಸೇರಿದಂತೆ ಹಲವು ಜಲ ಕ್ರೀಡೆಗಳನ್ನು ಮೈಸೂರಿನ ಅಲ್ಮಾನಾಕ್, ಅಡ್ವೆಂಚರ್ ಸಾಹಸ ಕ್ರೀಡಾ ಸಂಸ್ಥೆಯವರು ನಡೆಸಿದ್ದರು. ಈ ಅಪಾಯಕಾರಿ ಸ್ಥಳದಲ್ಲಿ ಸಾಹಸ ಕ್ರೀಡೆ ಆಯೋಜನೆಗೆ ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಾವೇರಿ ನದಿಯಲ್ಲಿ ಅನಧಿಕೃತ ಜಲ ಕ್ರೀಡೆ; ಪೊಲೀಸರಿಗೆ ದೂರು ನೀಡಿದ ನೀರಾವರಿ ಇಲಾಖೆ
ಕಾವೇರಿ ನದಿಯಲ್ಲಿ ಜಲಕ್ರೀಡೆ ಆಯೋಜನೆ
Follow us on

ಮಂಡ್ಯ, ಸೆ.16: ಕೆಆರ್​ಎಸ್(KRS)​ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ಕುರಿತು ಈಗಾಗಲೇ ರಾಜ್ಯದಲ್ಲಿ ರೈತ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಇದರ ನಡುವೆ ಇದೀಗ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ಗ್ರಾಮದ ಬೋರೇದೇವರ ದೇಗುಲದ ಕಾವೇರಿ ನದಿಯಲ್ಲಿ ಖಾಸಗಿ ಸಂಸ್ಥೆಯೊಂದು ಯಾವುದೇ ಅನುಮತಿ ಪಡೆಯುದೇ ಜಲ ಕ್ರೀಡೆ ಆಯೋಜನೆ ಮಾಡಿತ್ತು. ಈ ಹಿನ್ನಲೆ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳು ಅರಕೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.

ಹೌದು, ಮೈಸೂರಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಕರೆ ತಂದು ರಿವರ್ ರ್ಯಾಪ್ಟಿಂಗ್, ಕಯಾಕಿಂಗ್ ಸೇರಿದಂತೆ ಹಲವು ಜಲ ಕ್ರೀಡೆಗಳನ್ನು ಮೈಸೂರಿನ ಅಲ್ಮಾನಾಕ್, ಅಡ್ವೆಂಚರ್ ಸಾಹಸ ಕ್ರೀಡಾ ಸಂಸ್ಥೆಯವರು ನಡೆಸಿದ್ದರು. ಈ ಅಪಾಯಕಾರಿ ಸ್ಥಳದಲ್ಲಿ ಸಾಹಸ ಕ್ರೀಡೆ ಆಯೋಜನೆಗೆ ಸ್ಥಳೀಯರ ವಿರೋಧ ವ್ಯಕ್ತಪಡಿಸಿ, ಕೂಡಲೇ ಅಪಾಯದ ಬಗ್ಗೆ ನೀರಾವರಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಆಯೋಜಕರ ವಿರುದ್ಧ ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಕಾವೇರಿ ನದಿ ನೀರು ಸಂಕಷ್ಟ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿರುವ ಸಿದ್ದರಾಮಯ್ಯ, ಹರಿಪ್ರಸಾದ್ ಬಗ್ಗೆ ಕಾಮೆಂಟ್ ಮಾಡಲ್ಲ ಎಂದರು!

ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನಲೆ 195 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ ಎಂದು ಈಗಾಗಳೆ ಸರ್ಕಾರ ತಿಳಿಸಿದೆ. ಈ ಹಿನ್ನಲೆ ಬಿತ್ತನೆಗೆ ನೀರಿಲ್ಲದೆ ರೈತರು ಪರದಾಡುತ್ತಿದ್ದಾರೆ. ಅದರಂತೆ ಕೆಆರ್​ಎಸ್​ ಜಲಾಶಯವನ್ನೇ ನಂಬಿಕೊಂಡ ರೈತರು ನೀರಿಲ್ಲದೇ ಕಂಗಾಲಾಗಿದ್ದಾರೆ. ಆದರೂ, ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್​ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ನೀಡಿದೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂಗಳಲ್ಲಿ ನೀರಿನ ಮಟ್ಟವು ಕೂಡ ಕುಸಿಯುತ್ತಲೇ ಇದೆ. ಹೀಗೆ ಮುಂದುವರೆದರೇ ಮುಂಬರುವ ವಾರಗಳಲ್ಲಿ ನೀರಿಲ್ಲದೆ ರೈತರು ಪರದಾಡುವಂತಾಗುತ್ತದೆ. ಇದರ ಮಧ್ಯೆ ಇದೀಗ ಜಲಕ್ರಿಡೆ ಆಯೋಜನೆ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ