ಕೆಆರ್‌ಎಸ್‌ ಡ್ಯಾಂನಿಂದ ನಾಳೆ ಕಾವೇರಿ ನದಿ ಹಾಗೂ ನಾಲೆಗಳಿಗೆ ನೀರು ಬಿಡುಗಡೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 21, 2023 | 10:47 PM

ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ನದಿ ಹಾಗೂ ನಾಲೆಗಳಿಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮ ಮುಂದಾಗಿದ್ದು, ನಾಳೆಯೇ ನಾಲೆಗಳಿಗೆ ನೀರು ಬಿಡಲು ತೀರ್ಮಾನಿಸಲಾಗಿದೆ.

ಕೆಆರ್‌ಎಸ್‌ ಡ್ಯಾಂನಿಂದ ನಾಳೆ ಕಾವೇರಿ ನದಿ ಹಾಗೂ ನಾಲೆಗಳಿಗೆ ನೀರು ಬಿಡುಗಡೆ
ಕೆಆರ್‌ಎಸ್‌ ಡ್ಯಾಂ (ಸಂಗ್ರಹ ಚಿತ್ರ)
Follow us on

ಮಂಡ್ಯ, ಜುಲೈ 21: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ‌ಕೆಆರ್​ಎಸ್ ಜಲಾಶಯ (KRS dam) ದಿಂದ ನದಿ ಹಾಗೂ ನಾಲೆಗಳಿಗೆ ನೀರು ಬಿಡಲು ತೀರ್ಮಾನಿಸಿದ್ದು, ನಾಳೆ ಬೆಳಗ್ಗೆ ನೀರು ಹರಿಸುವುದಾಗಿ ಕಾವೇರಿ ನೀರಾವರಿ ನಿಗಮದಿ‌ಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲು ನಾಲೆ ಹಾಗೂ ನದಿಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.

ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ನದಿ ಹಾಗೂ ನಾಲೆಗಳಿಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮ ಮುಂದಾಗಿದೆ. ಜಲಾಶಯದಲ್ಲಿ ನೀರಿನ
ಸಂಗ್ರಹಣೆ ಶೇ 32.10 ರಷ್ಟು ಇದೆ. ಹೊಸದಾಗಿ ಯಾವುದೇ ಬೆಳೆಗಳನ್ನ ಹಾಕದಂತೆ ರೈತರಿಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಬತ್ತಿದ ಕಾವೇರಿ: ಧಾರ್ಮಿಕ ವಿಧಿ ವಿಧಾನ ನೆರವೇರಿಸಿ ನದಿಯಲ್ಲಿ ಮುಳುಗಲಾಗದೆ ತಲೆ ಮೇಲೆ ಚಂಬು ನೀರು ಹಾಕಿಕೊಳ್ಳುತ್ತಿರುವ ಜನ

ಮಳೆ ಬಾರದೇ ಇದ್ದರೆ ಹತ್ತು ದಿನಗಳ ಕಾಲ‌ ನೀರು ಹರಿಸಲು ತೀರ್ಮಾನಿಸಿದ್ದು, ಸದ್ಯ ಜಲಾಶಯದಲ್ಲಿ 90.80 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಸಾಮಾರ್ಥ್ಯ 124.62 ಅಡಿ. ಜಲಾಶಯಕ್ಕೆ 4336 ಕ್ಯೂಸೆಸ್ ನೀರು ಒಳ ಹರಿವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:46 pm, Fri, 21 July 23