ಚೀಲಗಳಲ್ಲಿ ಕಲ್ಲು ತುಂಬಿಕೊಂಡು ಬಂದು ಹಿಂಸಾಚಾರ ನಡೆಸಿದ್ರು: CCTV ಸಾಕ್ಷ್ಯ ಬಿಡುಗಡೆ

|

Updated on: Dec 24, 2019 | 11:30 AM

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ 2019 ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ತಾರಕಕ್ಕೇರಿತ್ತು. ಗೋಲಿಬಾರ್, ಕಲ್ಲು ತೂರಾಟ ಹೀಗೆ ಹಿಂಸಾಚಾರ ಮಿತಿ ಮೀರಿತ್ತು. ಇಂದು ಇದರ ಸಾಕ್ಷ್ಯವಾಗಿ ಕಲ್ಲು ತೂರಾಟದ ದೃಶ್ಯ ಬಿಡುಗಡೆ ಮಾಡಲಾಗಿದೆ. ದೃಶ್ಯಾವಳಿಗಳಲ್ಲಿ ಕೆಲ ಕಿಡಿಗೇಡಿಗಳು ಚೀಲಗಳಲ್ಲಿ ಕಲ್ಲುಗಳನ್ನು ತುಂಬಿಕೊಂಡು ಆಕ್ರಮಣ ಮಾಡಿದ್ದಾರೆ. ಹಾಗೂ ಮನೆ ಮುಂದೆ ಇದ್ದಂತಹ ಸಿಸಿ ಕ್ಯಾಮಾರಗಳನ್ನು ಧ್ವಂಸ ಮಾಡಿದ್ದಾರೆ. ಪ್ರತಿಭಟನೆಯನ್ನು ತಾರಕಕ್ಕೇರುವಂತೆ ಹೊರ ರಾಜ್ಯದ ಹಾಗೂ ಕೆಲ ಸಂಘಟನೆಗಳ ಯುವಕರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಧರಣಿಯನ್ನು ಹಿಂಸಾಚಾರಕ್ಕೆ ತಿರುಗುವಂತೆ ಪ್ರೆರೇಪಿಸಿದ್ದಾರೆ. […]

ಚೀಲಗಳಲ್ಲಿ ಕಲ್ಲು ತುಂಬಿಕೊಂಡು ಬಂದು ಹಿಂಸಾಚಾರ ನಡೆಸಿದ್ರು: CCTV ಸಾಕ್ಷ್ಯ ಬಿಡುಗಡೆ
Follow us on

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ 2019 ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ತಾರಕಕ್ಕೇರಿತ್ತು. ಗೋಲಿಬಾರ್, ಕಲ್ಲು ತೂರಾಟ ಹೀಗೆ ಹಿಂಸಾಚಾರ ಮಿತಿ ಮೀರಿತ್ತು. ಇಂದು ಇದರ ಸಾಕ್ಷ್ಯವಾಗಿ ಕಲ್ಲು ತೂರಾಟದ ದೃಶ್ಯ ಬಿಡುಗಡೆ ಮಾಡಲಾಗಿದೆ.

ದೃಶ್ಯಾವಳಿಗಳಲ್ಲಿ ಕೆಲ ಕಿಡಿಗೇಡಿಗಳು ಚೀಲಗಳಲ್ಲಿ ಕಲ್ಲುಗಳನ್ನು ತುಂಬಿಕೊಂಡು ಆಕ್ರಮಣ ಮಾಡಿದ್ದಾರೆ. ಹಾಗೂ ಮನೆ ಮುಂದೆ ಇದ್ದಂತಹ ಸಿಸಿ ಕ್ಯಾಮಾರಗಳನ್ನು ಧ್ವಂಸ ಮಾಡಿದ್ದಾರೆ. ಪ್ರತಿಭಟನೆಯನ್ನು ತಾರಕಕ್ಕೇರುವಂತೆ ಹೊರ ರಾಜ್ಯದ ಹಾಗೂ ಕೆಲ ಸಂಘಟನೆಗಳ ಯುವಕರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಧರಣಿಯನ್ನು ಹಿಂಸಾಚಾರಕ್ಕೆ ತಿರುಗುವಂತೆ ಪ್ರೆರೇಪಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಫೈರಿಂಗ್​ಗೆ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದರು. ಆದರೆ ಕೆಲ ನಾಯಕರು ಈ ಹಿಂಸಾಚಾರಕ್ಕೆ ಬಿಜೆಪಿ, ಪೊಲೀಸರೇ ಕಾರಣ ಎಂದು ದೋಷಿಸಿತ್ತು. ಅಲ್ಲದೆ ಗುಂಡು ಹಾರಿಸಿ ಪ್ರಾಣ ತೆಗೆಯುವ ಅನುಮತಿ ಕೊಟ್ಟವರ್ಯಾರು ಎಂಬ ಟೀಕೆಗಳು ಹೆಚ್ಚಾಗಿದ್ವು.

ಇದರ ಜೊತೆಗೆ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆದಿಲ್ಲವೆಂದು ಸಿದ್ದರಾಮಯ್ಯ ಹಾಗೂ ಕೆಲ ನಾಯಕರು ಹೇಳಿಕೆ ನೀಡಿದ್ದರು. ಸಾಕ್ಷ್ಯ ತೋರಿಸಲೆಂದೇ ಮಂಗಳೂರು ಪೊಲೀಸರು ಇದೀಗ ಸಿಸಿ ಕ್ಯಾಮರಾದ ದೃಶ್ಯಾವಳಿ ರಿಲೀಸ್ ಮಾಡಿದ್ದಾರೆ.

Published On - 10:52 am, Tue, 24 December 19