
ಕೊಡಗು: ಹೊಸವರ್ಷ ಮತ್ತು ಕ್ರಿಸ್ಮಸ್ ಹಿನ್ನಲೆ ಮಂಜಿನ ನಗರಿ ಮಡಿಕೇರಿ ಕಡೆ ಪ್ರವಾಸಿಗರ ದಂಡು ಬರುತ್ತಿದ್ದು, ಜಿಲ್ಲೆಯಲ್ಲಿರುವ ಶೇ.90 ರಷ್ಟು ರೆಸಾರ್ಟ್ಗಳು ಈಗಲೇ ಭರ್ತಿಯಾಗಿವೆ.
ಪ್ರಕೃತಿ ಸೌಂದರ್ಯವನ್ನು ಸವಿಯುವ ಜೊತೆಗೆ ಹೊಸವರ್ಷ ಆಚರಣೆಗಾಗಿ ಜನರು ಕೊಡಗಿನತ್ತ ಆಗಮಿಸುತ್ತಿದ್ದಾರೆ. ಮಡಿಕೇರಿಯ ತಾಜ್ ರೆಸಾರ್ಟ್ನ 60 ಹಾಗೂ ಕ್ಲಬ್ ಮಹೇಂದ್ರದ 200 ಕ್ಕೂ ಹೆಚ್ಚು ರೂಂಗಳು ಬುಕ್ ಆಗಿವೆ. ಇಬ್ಬನಿ ಮತ್ತು ಆರೆಂಜ್ ಕೌಂಟಿ ಸೇರಿದಂತೆ ಜಿಲ್ಲೆಯ ರೆಸಾರ್ಟ್ಗಳು ಎರಡು ತಿಂಗಳ ಮುಂಚೆಯೇ ಕಾಯ್ದಿರಿಸಲ್ಪಟ್ಟಿವೆ.
ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಬಿಟ್ಟು ಪ್ರಶಾಂತ ವಾತಾವರಣದ ಕಡೆಗೆ ಮುಖಮಾಡಿರುವ ಟೂರಿಸ್ಟ್ಗಳಿಂದ ಮಡಿಕೇರಿ ಹೋಂ ಸ್ಟೇಗಳು ಕೂಡ ಬಹುತೇಕ ಭರ್ತಿಯಾಗಿವೆ.
ಜನಸಾಗರ
Published On - 1:20 pm, Sat, 26 December 20