ಕನ್ನಡ ರಾಜ್ಯೋತ್ಸವ: ಎಂಇಎಸ್ ಸದಸ್ಯರು ಪ್ರತಿಭಟನೆ ಮಾಡಲಿ, ಆದರೆ ಸರ್ಕಾರದ ವಿರುದ್ಧ ಘೋಷಣೆ ಕೂಗಬಾರದು: ಸತೀಶ್ ಜಾರಕಿಹೊಳಿ

|

Updated on: Nov 01, 2023 | 4:35 PM

ಎಂಇಎಸ್ ನವರು ಪ್ರತಿಭಟನೆ ನಡೆಸೋದು ಹೊಸದೇನಲ್ಲ, ಪ್ರತಿವರ್ಷ ಅದನ್ನು ಮಾಡುತ್ತಾರೆ. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುವುದರಿಂದ ಪೊಲೀಸರು ಕೇಸ್ ಹಾಕುತ್ತಾರೆ, ಕೆಲವರ ಬಂಧನವಾಗುತ್ತದೆ ಮತ್ತು ಬೇಲ್ ಪಡೆದು ಹೊರಬರುತ್ತಾರೆ ಎಂದು ಸಚಿವ ಹೇಳಿದರು. ಇವರೆಲ್ಲ ಬೆಳಗಾವಿಯಲ್ಲೇ ಜೀವನ ನಡೆಸುವುದರಿಂದ ವಿಷಯ ಅರ್ಥಮಾಡಿಕೊಳ್ಳಬೇಕು, ಪುಂಡಾಟ ಸರಿಯಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ: ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (MES) ಪುಂಡರಿಗೆ ಕರಾಳ ದಿನ (Black Day) ಅಂತ ಪ್ರತಿಭಟನೆ ನಡೆಸದಿದ್ದರೆ, ಸರ್ಕಾರದ ವಿರುದ್ಧ ಘೋಷಣೆ ಕೂಗದಿದ್ದರೆ ತಿಂದ ಅನ್ನ ಜೀರ್ಣವಾಗದು ಮಾರಾಯ್ರೇ. ತಮ್ಮ ಪ್ರತಿಭಟನೆಯಿಂದ ಏನೂ ಆಗದು ಅಂತ ಗೊತ್ತಿದ್ದರೂ ವಿವೇಕಹೀನರು ಪ್ರತಿವರ್ಷ ಕರಾಳ ದಿನ ಆಚರಿಸುತ್ತಾರೆ. ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಎಂಇಎಸ್ ನವರು ಪ್ರತಿಭಟನೆ ನಡೆಸೋದು ಹೊಸದೇನಲ್ಲ, ಪ್ರತಿವರ್ಷ ಅದನ್ನು ಮಾಡುತ್ತಾರೆ. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುವುದರಿಂದ ಪೊಲೀಸರು ಕೇಸ್ ಹಾಕುತ್ತಾರೆ, ಕೆಲವರ ಬಂಧನವಾಗುತ್ತದೆ ಮತ್ತು ಬೇಲ್ ಪಡೆದು ಹೊರಬರುತ್ತಾರೆ ಎಂದು ಹೇಳಿದರು. ಇವರೆಲ್ಲ ಬೆಳಗಾವಿಯಲ್ಲೇ ಜೀವನ ನಡೆಸುವುದರಿಂದ ವಿಷಯ ಅರ್ಥಮಾಡಿಕೊಳ್ಳಬೇಕು. ಅವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ ಮಾಡಿಕೊಳ್ಳಲಿ ಅದರೆ ಸರ್ಕಾರದ ವಿರುದ್ಧ ಘೋಷಣೆ ಕೂಗುವುದನ್ನು ಮಾಡಬಾರದು. ಅವರ ವಿರುದ್ಧ ಯಾವ ಕ್ರಮ ಜರುಗಿಸಲಾಗುತ್ತದೆ ಅಂತ ಪೊಲೀಸ್ ಕಮೀಶನರ್ ಅವರಿಗೆ ಗೊತ್ತು ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ