AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಚಿಂಚೋಳಿ: ಎಣ್ಣೆ ಪಾರ್ಟಿ ಮಾಡಿದ ಬಳಿಕ ಹೆಣ್ಣು ಕೊಟ್ಟ ಮಾವನನ್ನು ಕೊಂದು, ತಾನು ಸುಸೈಡ್ ಮಾಡಿಕೊಂಡ ಅಳಿಯ! ಕಾರಣವೇನು?

ರಾಜು ಪತ್ನಿಯನ್ನ ಕಳಿಸುವಂತೆ ಮಾವನಿಗೆ ಹೇಳಿದ್ದಾನೆ.‌ ಅದ್ರೆ ನೀನು ಮಗಳ ಮೇಲೆ ಹಲ್ಲೆ ಮಾಡ್ತಿಯಾ ಅಂತ ಹೇಳಿದ್ದಾನೆ.ಅಷ್ಟೆ ಇಬ್ಬರ ಮಧ್ಯೆ ಜಗಳ ಶುರುವಾಗಿ,ಅಲ್ಲೇ ಇದ್ದ ಕಲ್ಲನ್ನ ಎತ್ತಿ ಹಾಕಿ ಮಾವನನ್ನ ಕೊಂದೇ ಬಿಟ್ಟಿದ್ದಾನೆ. ಮಾವ ಅಳಿಯ ಇಬ್ಬರು ಮಸಣ ಸೇರಿದ್ದಾರೆ.

 ಚಿಂಚೋಳಿ: ಎಣ್ಣೆ ಪಾರ್ಟಿ ಮಾಡಿದ ಬಳಿಕ ಹೆಣ್ಣು ಕೊಟ್ಟ ಮಾವನನ್ನು ಕೊಂದು, ತಾನು ಸುಸೈಡ್ ಮಾಡಿಕೊಂಡ ಅಳಿಯ! ಕಾರಣವೇನು?
ಹೆಣ್ಣು ಕೊಟ್ಟ ಮಾವನನ್ನ ಕೊಂದು ತಾನು ಸುಸೈಡ್ ಮಾಡಿಕೊಂಡ ಅಳಿಯ!
ದತ್ತಾತ್ರೇಯ ಪಾಟೀಲ್​
| Edited By: ಸಾಧು ಶ್ರೀನಾಥ್​|

Updated on:Nov 01, 2023 | 4:28 PM

Share

ಆತ ಹಬ್ಬಕ್ಕೆಂದು ಹೆಂಡತಿ ಮನೆಗೆ ಬಂದಿದ್ದ. ಹೆಂಡತಿ ತವರು ಮನೆಯಲ್ಲೆ ದಸರಾ ಹಬ್ಬವನ್ನ ಕೂಡಾ ಮಾಡಿದ್ದ.ಇನ್ನೇನು ಹಬ್ಬ ಮುಗಿದು ಹೆಂಡತಿ ಕರೆದುಕೊಂಡು ಹೋಗಬೇಕೆಂದಿದ್ದ ಆತ, ಮಾವನನ್ನೆ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಹಾಗಿದ್ರೆ ಅಲ್ಲಾಗಿದ್ದೇನು ಅಂತೀರಾ ನೀವೆ ನೋಡಿ. ತಂದೆಯನ್ನು ಕಳೆದುಕೊಂಡು ಕಣ್ಣೀರಿಡುತ್ತಿರೋ ಮಕ್ಕಳು.. ಭೀಕರ ಕೊಲೆಯಿಂದ ಬೆಚ್ಚಿ ಬಿದ್ದಿರೋ ಗ್ರಾಮಸ್ಥರು. ಮಾವ ಮತ್ತು ಅಳಿಯನ ದಾರುಣ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ…ಯಸ್ ಇಂತದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಂತಪಳ್ಳಿ ಗ್ರಾಮದಲ್ಲಿ.

ಇಲ್ಲಿ ಅಳಿನಿಂದಲೇ ಕೊಲೆಯಾಗಿರೋ ಮಾವನ ಹೆಸರು ಈರಪ್ಪ ಕೊಡ್ಲಿ ಅಂತ. ಈ ಈರಪ್ಪನಿಗೆ ನಾಲ್ಕು ಜನ ಗಂಡು ಮಕ್ಕಳಿದ್ದು, ಒಬ್ಬಳೇ ಮಗಳಿದ್ದಳು.ಕಳೆದ ಆರು ತಿಂಗಳ ಹಿಂದೆ ಸೋಲಾಪುರ ಮೂಲದ ರಾಜು ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದ. ಮದುವೆಯಾದ ಹೊತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಮದುವೆಯಾಗಿ ಎರಡೂ ತಿಂಗಳು ಪತ್ನಿಯೊಂದಿಗೆ ಚೆನ್ನಾಗಿದ್ದ ರಾಜು. ಆಮೇಲೆ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡೋಕೆ ಶುರು ಮಾಡಿದ್ದ. ಅಲ್ಲದೇ ಪತ್ನಿಯ‌ ಮೇಲೆ ದೈಹಿಕ ಹಲ್ಲೆ ಮಾಡಿ ಕಿರುಕುಳ ನೀಡ್ತಿದ್ದ.

ಇದ್ರಿಂದ ಬೇಸತ್ತ ಪತ್ನಿ ಕಳೆದು ಹಲವು ದಿನಗಳ ಹಿಂದೆ ತವರು ಮನೆಗೆ ಬಂದಿದ್ದಳು. ಪತ್ನಿಯನ್ನ ತನ್ನ ಮನೆಗೆ ಕಳಿಸಿಕೊಡಿ ಅಂತ ರಾಜು ಹಲವು ಭಾರಿ ಹೇಳಿದ್ರು, ಮಾವ ಈರಪ್ಪ ಮಾತ್ರ ಮಗಳನ್ನ ಕಳಿಸಿರಲಿಲ್ಲ.ಹಿಗಾಗೇ ದಸಾರ ಹಬ್ಬದ ನೆಪ ಮಾಡಿಕೊಂಡು ಚಿಂಚೋಳಿ ಚಿಂತಪಳ್ಳಿ ಗ್ರಾಮಕ್ಕೆ ಬಂದಿದ್ದ. ಪತ್ನಿ ಕುಟುಂಬದೊಂದಿಗೆ ಹಬ್ಬವೂ ಮಾಡಿದ್ದ.

ಆದ್ರೆ ನಿನ್ನೆ ಮಾವನ ಜೊತೆ ಜಮೀನಿಗೆ ಹೋಗಿದ್ದ,ಆದ್ರೆ ಅಲ್ಲಾನೇಯ್ತೋ ಗೊತ್ತಿಲ್ಲ.ಹೆಣ್ಣು ಕೊಟ್ಟ ಮಾವನನ್ನೆ ಕಲ್ಲನಿಂದ ಜಜ್ಜಿಕೊಲೆ ಮಾಡಿ ಬಿಟ್ಟಿದ್ದ. ಬಳಿಕ ಎಲ್ಲಿ ಗ್ರಾಮಸ್ಥರು ಇನ್ನು ತನ್ನನ್ನ ಸುಮ್ಮನೆ ಬಿಡೋದಿಲ್ಲ ಅಂತ ತಾನು ವಿದ್ಯುತ್ ಕಂಬವೇರಿ ಹೈಟೆನ್ಯನ್ ವೈರ್ ಹಿಡಿದು ತಾನು ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ:ಇಬ್ಬರು ಮಕ್ಕಳು ಸೇರಿದಂತೆ ಐವರ ಮೇಲೆ ಹುಚ್ಚು ನಾಯಿ ದಾಳಿ: 6 ವರ್ಷದ ಬಾಲಕಿಗೆ ಗಂಭೀರ ಗಾಯ

ಇನ್ನು ಮೊದಲು ಮನೆಯಲ್ಲಿ ಪತ್ನಿಯನ್ನ ಊರಿಗೆ ಹೋಗೊಣ ಬಾ ಅಂತ ಕರೆದಿದ್ದಾನೆ. ಪತ್ನಿ ಮಾತ್ರ ಸುತಾರಂ ಒಪ್ಪಿಲ್ಲ. ಹೀಗಾಗೇ ಪತ್ನಿಯ ಮೇಲೆ ಹಲ್ಲೆ ಮಾಡಿ, ಜಮೀನಿಗೆ ತೆರಳಿದ್ದ. ಅಲ್ಲಿ ಮಾವನ ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದ, ರಾಜು ಭರ್ತಿ ಕುಡಿದ್ದ ಅನ್ನಿಸುತ್ತೆ. ಈ ವೇಳೆ ಪತ್ನಿ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

ರಾಜು ಪತ್ನಿಯನ್ನ ಕಳಿಸುವಂತೆ ಮಾವನಿಗೆ ಹೇಳಿದ್ದಾನೆ.‌ ಅದ್ರೆ ನೀನು ಮಗಳ ಮೇಲೆ ಹಲ್ಲೆ ಮಾಡ್ತಿಯಾ ಅಂತ ಹೇಳಿದ್ದಾನೆ.ಅಷ್ಟೆ ಇಬ್ಬರ ಮಧ್ಯೆ ಜಗಳ ಶುರುವಾಗಿ, ಅಲ್ಲೇ ಇದ್ದ ಕಲ್ಲನ್ನ ಎತ್ತಿ ಹಾಕಿ ಮಾವನನ್ನ ಕೊಂದೇ ಬಿಟ್ಟಿದ್ದಾನೆ. ಸಧ್ಯ ಮಾವ ಅಳಿಯ ಇಬ್ಬರೂ ಮಸಣ ಸೇರಿದ್ದಾರೆ. ಅತ್ತ ಅಳಿಯ ಉಪಟಳಕ್ಕೆ ಮನೆಯ ಯಜಮಾನನ್ನು ಕಳೆದುಕೊಂಡಿದ್ದಲ್ಲದೇ, ಸಹೋದರಿಯ ಬದುಕು ಹಾಳಾಗಿ ಹೋಯ್ತಿಲ್ಲ ಎನ್ನೋ ನೋವು ಮನೆಯವರದ್ದು.

ಒಟ್ನಲ್ಲಿ ಕೂಲಿ ನಾಲಿ ಮಕ್ಕಳನ್ನ ಸಾಕಿದ್ದ, ಈರಪ್ಪ ಈಗಲೂ ಬೇರೊಬ್ಬರ ಜಮೀನು ಕಾಯೋ ಕೆಲಸ‌ ಮಾಡ್ತಿದ್ದ, ಕಡುಬಡತನದಲ್ಲೇ ಮಕ್ಕಳ ಸಾಕಿದ್ದ ಈರಪ್ಪ ಅಳಿಯನಿಂದಲೇ ಕೊಲೆಯಾಗಿ ಹೋಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರೋ ಸುಲೇಪೇಟ್ ಪೊಲೀಸರು ತನಿಖೆ ಶುರು ಮಾಡಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೆ ಕೊಲೆಗೆ ಹೆಂಡತಿ ಮನೆಗೆ ಬರದೇ ಇರೋದು ಕಾರಣವೋ ಅಥವಾ ಬೇರೆ ಏನಾದ್ರು ಕಾರಣವಿತ್ತಾ ಎನ್ನೋ ಸತ್ಯ ಬಯಲಾಗಲಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Wed, 1 November 23

Follow Us
ದತ್ತಾತ್ರೇಯ ಪಾಟೀಲ್​
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು