AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವುಗೊಳಿಸಿ -ಮತ್ತೆ ಪುಂಡಾಟಿಕೆ ಮೆರೆಯಲು ಸಜ್ಜಾದ ಎಂ.ಇ.ಎಸ್

ಜಿಲ್ಲೆಗೆ 2 ದಿನಗಳ ಕಾಲ ಮಹಾರಾಷ್ಟ್ರ ನಾಯಕರ ಪ್ರವೇಶವನ್ನು ನಿಷೇಧಿಸಲಾಗಿದೆ. ನಾಳೆ ಬೆಳಗ್ಗೆ 6ರಿಂದ ಮಾ.9ರವರೆಗೂ ಗಡಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವುಗೊಳಿಸಿ -ಮತ್ತೆ ಪುಂಡಾಟಿಕೆ ಮೆರೆಯಲು ಸಜ್ಜಾದ ಎಂ.ಇ.ಎಸ್
ಬೆಳಗಾವಿ ಮಹಾನಗರ ಪಾಲಿಕೆ
KUSHAL V
|

Updated on:Mar 06, 2021 | 6:04 PM

Share

ಬೆಳಗಾವಿ: ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವಿಗೆ ಆಗ್ರಹಿಸಿ ಮಾರ್ಚ್​​​ 8ರಂದು ಎಂ.ಇ.ಎಸ್​ ಪ್ರತಿಭಟನೆ ಹಮ್ಮಿಕೊಂಡಿದೆ. ಎಂ.ಇ.ಎಸ್ ಪ್ರತಿಭಟನೆಯಲ್ಲಿ ಸಂಘದ ಮುಖಂಡರು ಪ್ರಚೋದನಕಾರಿ ಭಾಷಣ ಮತ್ತು ಹೇಳಿಕೆಗಳನ್ನು ನೀಡುವ ಸಾಧ್ಯತೆ ಸಹ ಇದೆ. ಇವುಗಳಿಂದ ಶಾಂತಿ ‌ಭಂಗವಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ 2 ದಿನಗಳ ಕಾಲ ಮಹಾರಾಷ್ಟ್ರ ನಾಯಕರ ಪ್ರವೇಶವನ್ನು ನಿಷೇಧಿಸಲಾಗಿದೆ. ನಾಳೆ ಬೆಳಗ್ಗೆ 6ರಿಂದ ಮಾ.9ರವರೆಗೂ ಗಡಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಪ್ರವೇಶ ನಿಷೇಧಿಸಲಾಗಿದೆ. ಪ್ರವೇಶ ನಿಷೇಧಿಸಿ ಡಿ.ಸಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿವಸೇನೆ ಅಧ್ಯಕ್ಷ ವಿಜಯ ದೇವಣೆ ಸೇರಿ ಇನ್ನಿತರ ಮುಖಂಡರ ಗಡಿಪ್ರವೇಶಕ್ಕೆ ನಿಷೇಧ ಹೇರಿ ಆದೇಶ ಹೊರಬಿದ್ದಿದೆ.

ಒಂದು ವೇಳೆ, ಧ್ವಜಸ್ತಂಭ ತೆರವು ಮಾಡದಿದ್ರೆ ಭಗವಾ ಧ್ವಜ ಅಳವಡಿಕೆಗೆ ಅವಕಾಶ ನೀಡುವಂತೆ MES ನಾಯಕರು ಪಟ್ಟುಹಿಡಿದಿದ್ದಾರೆ. ಹೀಗಾಗಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 2 ದಿನಗಳ ಕಾಲ ಮಹಾರಾಷ್ಟ್ರ ನಾಯಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಕೊಳ್ಳೇಗಾಲದಲ್ಲಿ ರೈತರ ಪ್ರತಿಭಟನೆ ಇತ್ತ, ದೆಹಲಿಯಲ್ಲಿ ರೈತರ ಪ್ರತಿಭಟನೆ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಆರ್.ಎಂ.ಸಿ ಆವರಣದಲ್ಲಿ ಕಪ್ಪುಪಟ್ಟಿ ಧರಿಸಿ ಕೃಷಿಕರು ಪ್ರತಿಭಟನೆ ನಡೆಸಿದರು. ರೈತ ಸಂಘದ ಕಾರ್ಯಕರ್ತರಿಂದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ರೈತ ವಿರೋಧಿ ಕಾಯ್ದೆ ಕೈಬಿಡುವಂತೆ ರೈತರಿಂದ ಆಗ್ರಹ ಕೇಳಿಬಂತು.

ಚನ್ನಗಿರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ಅತ್ತ, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ ವಡ್ನಾಳ್ ರಾಜಣ್ಣ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು.

ಕೇಂದ್ರ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಚನ್ನಗಿರಿ ಪಟ್ಟಣ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ಜೊತೆಗೆ, ತಹಶಿಲ್ದಾರರಿಗೆ ಮನವಿ ಸಹ ಸಲ್ಲಿಸಿದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಲೇಡಿಗಾಗಿ ಆರ್​ಟಿ ನಗರದಲ್ಲಿ ಮಹಿಳಾ ಪಿಜಿಗಳನ್ನೆಲ್ಲಾ ಜಾಲಾಡಿದ ಖಾಕಿ ಪಡೆ!

Published On - 5:55 pm, Sat, 6 March 21

Follow Us
KUSHAL V
KUSHAL V
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ
Live: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ
Live: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಡಿಕೆಶಿ ಭೇಟಿ!
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಡಿಕೆಶಿ ಭೇಟಿ!
ಅರಮನೆಯಿಂದಲೇ ಅಮ್ಮನ ಜೊತೆಗೆ ಆದ್ಯವೀರ್, ಯುಗಾಧ್ಯಕ್ಷ ಪೂಜೆ ವೀಕ್ಷಣೆ
ಅರಮನೆಯಿಂದಲೇ ಅಮ್ಮನ ಜೊತೆಗೆ ಆದ್ಯವೀರ್, ಯುಗಾಧ್ಯಕ್ಷ ಪೂಜೆ ವೀಕ್ಷಣೆ