“ನಾವು ಯಾವಾಗ ಇರ್ತೀವೋ ಗೊತ್ತಿಲ್ಲ..”: ಸಾವಿನ ಬಗ್ಗೆ ಸುಳಿವು ನೀಡಿದ್ದ ಸಚಿವ ಸುಧಾಕರ್

Updated on: May 11, 2026 | 9:52 AM

ಜೀವನವು ಬಲ್ಬ್ ಇದ್ದಂತೆ ಅನಿಶ್ಚಿತ. ನಾವು ಎಷ್ಟು ದಿನ ಇರುತ್ತೇವೆ, ಯಾವಾಗ ನಮ್ಮ ಅಂತ್ಯ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಇರುವಷ್ಟು ದಿನ ಧಾರ್ಮಿಕವಾಗಿ ಭಗವಂತನನ್ನು ಸ್ಮರಿಸುವುದು ಮುಖ್ಯ. ಕೆಲವರು ನೇರವಾಗಿ ದೇವರನ್ನು ನಂಬಿದರೆ, ಇನ್ನು ಕೆಲವರು ಕಾಯಕವೇ ಕೈಲಾಸ ಅಥವಾ ಪರೋಪಕಾರವೇ ಭಗವಂತನ ಸ್ಮರಣೆ ಎಂದು ನಂಬುತ್ತಾರೆ. ಈ ನಂಬಿಕೆಗಳೇ ಜೀವನಕ್ಕೆ ಅರ್ಥ ನೀಡುತ್ತವೆ.

ಚಿತ್ರದುರ್ಗ ಮೇ.11: ಕರ್ನಾಟಕ ಸರ್ಕಾರದ ಸಚಿವರಾಗಿದ್ದ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ನಂತರ, ಅವರು ಇತ್ತೀಚೆಗೆ ಶಾರದಾ ಆಶ್ರಮದ ಭೂಮಿಪೂಜೆ ವೇಳೆ ಆಡಿದ್ದ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಜೀವನದ ಕ್ಷಣಿಕತೆಯ ಬಗ್ಗೆ ಅವರು ಆಡಿದ್ದ ಈ ಮಾತುಗಳು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸುತ್ತಿವೆ. “ನಾವು ಇವತ್ತು ಇರ್ತೀವೋ ಇಲ್ಲವೋ ಗೊತ್ತಿಲ್ಲ. ನಮ್ಮ ಜೀವನ ಒಂದು ರೀತಿ ಬಲ್ಬ್ ಇದ್ದಂತೆ, ಯಾವಾಗ ಸ್ವಿಚ್ ಆಫ್ ಆಗುತ್ತೋ ಗೊತ್ತಿಲ್ಲ” ಎಂದು ಹೇಳುವ ಮೂಲಕ ಜೀವನದ ಅನಿಶ್ಚಿತತೆಯನ್ನು ವಿವರಿಸಿದ್ದರು. “ಇದ್ದಷ್ಟು ದಿನ ಧಾರ್ಮಿಕವಾಗಿ, ಭಗವಂತನ ಸ್ಮರಣೆಯಲ್ಲಿ ಕಳೆಯಬೇಕು. ಒಬ್ಬೊಬ್ಬರದ್ದು ಒಂದೊಂದು ನಂಬಿಕೆ ಇರುತ್ತದೆ. ಕೆಲವರು ಕಾಯಕವೇ ಕೈಲಾಸ ಎನ್ನುತ್ತಾರೆ, ಮತ್ತೆ ಕೆಲವರು ಪರೋಪಕಾರವೇ ಭಗವಂತನ ಸೇವೆ ಎನ್ನುತ್ತಾರೆ” ಎಂದು ಅವರು ಕಿವಿಮಾತು ಹೇಳಿದ್ದರು. ಇಡೀ ಭಾಷಣದಲ್ಲಿ ಅವರು ಪರೋಪಕಾರ ಮತ್ತು ಸಮಾಜ ಸೇವೆಯ ಮಹತ್ವದ ಬಗ್ಗೆ ಒತ್ತಿ ಹೇಳಿದ್ದರು. ಸಚಿವ ಸುಧಾಕರ್ ಅವರು ಈ ಮಾತುಗಳನ್ನು ಆಡುವಾಗ ತಮಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತೇ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ. ಅವರ ಈ ವೈರಲ್ ವಿಡಿಯೋ ಕಂಡು ಚಿತ್ರದುರ್ಗದ ಜನತೆ ಹಾಗೂ ಅವರ ಬೆಂಬಲಿಗರು ಕಂಬನಿ ಮಿಡಿಯುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More