ರಾಜ್ಯದಲ್ಲಿ 3 ವಾರಗಳ ಕಾಲ ಕಠಿಣ ರೂಲ್ಸ್ ಪಾಲಿಸಬೇಕು.. ಎರಡನೇ ಅಲೆ ನಿರ್ಲಕ್ಷಿಸಿದ್ರೆ ನೀವೇ ಹೊಣೆ -ಸಚಿವ ಸುಧಾಕರ್ ವಾರ್ನಿಂಗ್

|

Updated on: Mar 21, 2021 | 12:51 PM

ರಾಜ್ಯದ ಜನರು ಕೊವಿಡ್ ನಿಯಮ ಪಾಲಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಸುರಕ್ಷಿತರಾಗಿದ್ದರೆ ನಿಮ್ಮನ್ನ ನಂಬಿದವರು ಸುರಕ್ಷಿತ. ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸುವ ಕೆಲಸ ಮಾಡಿ. ಪಾರ್ಟಿ, ಜಾತ್ರೆ ಎಂದು ಕೊರೊನಾ ರಿಯಾಯಿತಿ ನೀಡಲ್ಲ. ಯುವಕರು ಅನಗತ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಎಂದು ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ 3 ವಾರಗಳ ಕಾಲ ಕಠಿಣ ರೂಲ್ಸ್ ಪಾಲಿಸಬೇಕು.. ಎರಡನೇ ಅಲೆ ನಿರ್ಲಕ್ಷಿಸಿದ್ರೆ ನೀವೇ ಹೊಣೆ -ಸಚಿವ ಸುಧಾಕರ್ ವಾರ್ನಿಂಗ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಾಜ್ಯದಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ರಾಜ್ಯದ ಜನರ ನಡವಳಿಕೆ ಸಹ ಬದಲಾಗಬೇಕು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಕೊರೊನಾ ಸೋಂಕಿಗೆ ಸರ್ಕಾರ ಲಸಿಕೆಯನ್ನು ಕೊಡಬಹುದು. ಆದ್ರೆ ಸೋಂಕು ಹೆಚ್ಚಾದರೆ ಸರ್ಕಾರದಿಂದ ನಿಯಂತ್ರಣ ಸಾಧ್ಯವಿಲ್ಲ. ರಾಜ್ಯದ ಜನರು ಕೊವಿಡ್ ನಿಯಮ ಪಾಲಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಸುರಕ್ಷಿತರಾಗಿದ್ದರೆ ನಿಮ್ಮನ್ನ ನಂಬಿದವರು ಸುರಕ್ಷಿತ. ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸುವ ಕೆಲಸ ಮಾಡಿ. ಪಾರ್ಟಿ, ಜಾತ್ರೆ ಎಂದು ಕೊರೊನಾ ರಿಯಾಯಿತಿ ನೀಡಲ್ಲ. ಯುವಕರು ಅನಗತ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಿ. ಕೊರೊನಾ 2ನೇ ಅಲೆ ನಿಯಂತ್ರಣ ಮಾಡಬೇಕಾಗಿದೆ. ತಜ್ಞರ ಸಲಹೆ ಪಾಲಿಸದಿದ್ದರೆ ಮುಂದೆ ಕಷ್ಟವಾಗಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ತಜ್ಞರಿಂದ ಸರ್ಕಾರಕ್ಕೆ ಸಲಹೆ
ಕೊರೊನಾ ಬೆಂಗಳೂರಿನಲ್ಲಿ ಸಾವಿರ ದಾಟಿದೆ. ರಾಜ್ಯದಲ್ಲಿ ಮಾರ್ಚ್ 20ರಂದು ಏಳು ಸಾವಾಗಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ತಜ್ಞರು ಸರ್ಕಾರಕ್ಕೆ ಕಠಿಣ ಸಲಹೆಗಳನ್ನು ನೀಡಿದ್ದಾರೆ.
-ರಾಜ್ಯದಲ್ಲಿ 3 ವಾರಗಳ ಕಾಲ ಕಠಿಣ ರೂಲ್ಸ್ ಪಾಲಿಸಬೇಕು
-SSLC, ದ್ವಿತೀಯ ಪಿಯು, ಅಂತಿಮ ಪದವಿ ಕಾಲೇಜು ಇವನ್ನು ಹೊರತುಪಡಿಸಿ ಎಲ್ಲ ಶಾಲಾ-ಕಾಲೇಜು ಬಂದ್ ಮಾಡಲು ಸರ್ಕಾರಕ್ಕೆ ಸಲಹೆ
-ಪಾರ್ಟಿ ಹಾಲ್, ಗ್ರಂಥಾಲಯಗಳು, ಜಿಮ್ ಸೆಂಟರ್ಸ್, ಒಳಾಂಗಣ ಕ್ರೀಡಾ ಚಟುವಟಿಕೆ, ಸ್ವಿಮ್ಮಿಂಗ್ ಪೂಲ್ಸ್ ಕಡ್ಡಾಯವಾಗಿ ಮುಚ್ಚಬೇಕು ಅಂತಾ ತಜ್ಞರು ಸೂಚಿಸಿದ್ದಾರೆ.
-ಥಿಯೇಟರ್​ಗಳಲ್ಲಿ ಶೇ.50ರಷ್ಟು ಭರ್ತಿಗೆ ಅನುಮತಿ ನೀಡಿ
-ಇನ್​ಡೋರ್ ಸಭೆ ಸಮ‍ಾರಂಭಗಳಲ್ಲಿ ಸಾಮಾಜಿಕ ಅಂತರ, ಕೇವಲ 100 ಜನರಷ್ಟೇ ಭಾಗಿಯಾಗಬೇಕು ಎಂದು ಸಲಹೆ ನೀಡಿದ್ದಾರೆ.
-ಔಟ್ ಡೋರ್ ಕಾರ್ಯಕ್ರಮಗಳಲ್ಲಿ 200 ಜನ ಸೇರಬಾರದು
-ಧಾರ್ಮಿಕ ಕಾರ್ಯಕ್ರಮಗಳು, ಮದುವೆ ಸಮಾರಂಭಗಳು, ರಾಜಕೀಯ ಸಭೆ-ಸಮಾರಂಭಗಳಲ್ಲಿ ಹೆಚ್ಚು ಜನ ಸೇರಬಾರದು
-ಬಸ್​ಗಳಲ್ಲಿ ಸೀಟ್​ಗಳಿಗಿಂತ ಹೆಚ್ಚು ಪ್ರಯಾಣಿಕರು ಬೇಡ
-ಮಾಲ್, ಶಾಪಿಂಗ್ ಸೆಂಟರ್​ಗಳು, ಅಂಗಡಿಗಳಲ್ಲಿ ಜನ ಕೊರೊನಾ ನಿಯಮ ಉಲ್ಲಂಘಿಸಿದ್ರೆ ಮಾಲೀಕರೇ ಹೊಣೆ
-ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನ 2 ವಾರ ನಿಲ್ಲಿಸಲೇಬೇಕು
-MCMR ನಿಯಮದಂತೆ ಕಡ್ಡಾಯವಾಗಿ ಸಾರಿ, ILI ಕೇಸ್​ಗೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯವಾಗಿ ಮಾಡಲೇಬೇಕು
-ಆಶಾ ಕಾರ್ಯಕರ್ತೆಯರು ಮನೆಗೆ ತೆರಳಿ ಟೆಸ್ಟ್ ಮಾಡಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸಲಹೆ ನೀಡಿದ್ದಾರೆ. ಆದರೂ ಸರ್ಕಾರ ಚುನಾವಣೆ, ಆರ್ಥಿಕ ಹೊಡೆತ ಹಿನ್ನಲೆಯಲ್ಲಿ ಕಠಿಣ ನಿಯಮ ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ.

ಇದನ್ನೂ ಓದಿ: ಮತ್ತೆ ಮತ್ತೆ ಭಯ ಹುಟ್ಟಿಸುತ್ತಿದೆ ಹೆಮ್ಮಾರಿ ಕೊರೊನಾ! ಕೆಲ ಗಡಿ ಭಾಗದಲ್ಲಿ ನಿರ್ಲಕ್ಷ್ಯ