ಅಕ್ರಮ ಗಣಿ ಕಂಪನಿಯೊಂದಿಗೆ ಸಚಿವ ಈಶ್ವರಪ್ಪ ಸಂಬಂಧಿಗಳ ಒಡಂಬಡಿಕೆ?

ಅಕ್ರಮ ಗಣಿ ಕಂಪನಿಯೊಂದಿಗೆ ಈಶ್ವರಪ್ಪ ಸಂಬಂಧಿಗಳು ಒಡಂಬಡಿಕೆ ಕೈಬಿಡಬೇಕು ಎಂದು ಸಾಮಾಜಿಕ ಹೋರಾಟಗಾರ ಟಪಾಲ್ ಗಣೇಶ್ ಒತ್ತಾಯ ಮಾಡಿದ್ದಾರೆ. ಹಿಂದ್ ಟ್ರೇಡರ್ಸ್ ವಿರುದ್ಧ ಅಕ್ರಮ ಎಸಗಿರುವ ಆರೋಪ ಇದೆ.

ಅಕ್ರಮ ಗಣಿ ಕಂಪನಿಯೊಂದಿಗೆ ಸಚಿವ ಈಶ್ವರಪ್ಪ ಸಂಬಂಧಿಗಳ ಒಡಂಬಡಿಕೆ?
ಸಚಿವ ಈಶ್ವರಪ್ಪ
Edited By:

Updated on: Dec 26, 2020 | 3:56 PM

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಹಿಂದ್ ಟ್ರೇಡರ್ಸ್ ಕಂಪನಿ ಜೊತೆ ಸಚಿವ ಈಶ್ವರಪ್ಪ ಸಂಬಂಧಿಗಳು ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದು ಬಳ್ಳಾರಿ ಗಣಿ ಉದ್ಯಮಿ ಹಾಗೂ ಹೋರಾಟಗಾರ ಟಪಾಲ್ ಗಣೇಶ್ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ ಒಂಡಬಡಿಕೆ ಆಗಿರುವ ದಾಖಲೆ ಕೂಡ ಅವರು ಬಿಡುಗಡೆ ಮಾಡಿದ್ದಾರೆ.

ಹಿಂದ್ ಟ್ರೇಡರ್ಸ್ ಆಂಧ್ರ ಮತ್ತು ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ತುಮಟಿ-ವಿಠಲಾಪುರ-ಮಲಪುನಗುಡಿ ಬಳಿಯಿದೆ. ಈ ಕಂಪನಿಯಲ್ಲಿ ಈಶ್ವರಪ್ಪ ಅಳಿಯ, ಸಂಬಂಧಿಕರು ಶೇ.55 ಷೇರು ಪಡೆದುಕೊಂಡಿದ್ದಾರೆ ಎಂದು ಗಣೇಶ್​ ಆರೋಪಿಸಿದ್ದಾರೆ.

ಅಕ್ರಮ ಗಣಿ ಕಂಪನಿಯೊಂದಿಗೆ ಈಶ್ವರಪ್ಪ ಸಂಬಂಧಿಗಳು ಒಡಂಬಡಿಕೆ ಕೈಬಿಡಬೇಕು ಎಂದು ಸಾಮಾಜಿಕ ಹೋರಾಟಗಾರ ಟಪಾಲ್ ಗಣೇಶ್ ಒತ್ತಾಯ ಮಾಡಿದ್ದಾರೆ. ಹಿಂದ್ ಟ್ರೇಡರ್ಸ್ ವಿರುದ್ಧ ಅಕ್ರಮ ಎಸಗಿರುವ ಆರೋಪ ಇದೆ. ಹೀಗಾಗಿ, ಲೀಸ್ ರದ್ದತಿಗೆ ಲೋಕಾಯುಕ್ತ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

 

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಚಿವ ಈಶ್ವರಪ್ಪಗೆ ಮತ್ತೆ ಸಂಕಷ್ಟ?