ಮಂಡ್ಯ: ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ. ಮಂಡ್ಯದಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂದು ಸಂಸದೆ ಸುಮಲತಾ ಹೇಳಿದಾಗಿನಿಂದ ಮಂಡ್ಯದಲ್ಲಿ ಸುಮಲತಾ-ಜೆಡಿಎಸ್ ನಾಯಕರ ನಡುವೆ ದೊಡ್ಡ ಕದನ ಸೃಷ್ಟಿಯಾಗಿದೆ. ಪ್ರತಿ ದಿನ ಒಂದಲೊಂದು ಬೆಳವಣಿಗೆಗಳು ನಡುತ್ತಿವೆ. ಇನ್ನು ಈ ಬಗ್ಗೆ ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ ಟಿವಿ9 ಜೊತೆ ಮಾತನಾಡಿದ್ದಾರೆ.
ಅಕ್ರಮ ಗಣಿಗಾರಿಕೆ ಕಳೆದ ಎರಡೂವರೆ ತಿಂಗಳಿಂದ ನಡೆದಿದೆ ಅಂತ ಜನ ಹೇಳ್ತಿದ್ದಾರೆ. ಎಲ್ಲ ಅಧಿಕಾರಿಗಳನ್ನು ಕರೆದು ವಾರ್ನಿಂಗ್ ಮಾಡಿದ್ದೇನೆ. ಬೇಬಿ ಬೆಟ್ಟದ ತಲೆನೋವೇ ಬೇಡ ಅಂತ ಹೇಳಿದ್ದೇವೆ. ಅಲ್ಲಿ ಇರುವ ಎರಡು ಮೂರು ಗಣಿಗೆ ಬೇರೆ ಕಡೆ ಫ್ರಿ ಆಫ್ ಕಾಸ್ಟ್ ಅವಕಾಶ ಕೊಡಿ ಅಂತ ಡಿಸಿಯವರಿಗೆ ಹೇಳಿದ್ದೇನೆ. ಗಣಿಗಾರಿಕೆ ನಡೆಯಲೇಬೇಕು ಕಲ್ಲು ಜಲ್ಲಿ ಎಂ ಸ್ಯಾಂಡ್ ಬೇಕೇ ಬೇಕಾಗುತ್ತದೆ. ಅಧಿಕೃತವಾಗಿ ಅನುಮತಿ ಪಡೆದುಕೊಂಡವರು ಕ್ರಮ ಬದ್ದವಾಗಿ ನಡೆಸಲಿ. ಹಲವರು ರಾಯಲ್ಟಿ ಕಟ್ಟುತ್ತಿಲ್ಲ, ರಾಯಲ್ಟಿ ಕರೆಕ್ಟಾಗಿ ಕಟ್ಟಿಕೊಂಡು ಹೋಗಬೇಕು ಎಂದು ನಾರಾಯಣಗೌಡ ಹೇಳಿದ್ರು.
ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ
ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರಕ್ಕೂ ಅನುಕೂಲ. ಅದನ್ನು ಖಡಾಖಂಡಿತವಾಗಿ ಹೇಳಿದ್ದೇವೆ. ನೂರು ಲಾರಿ ಜಲ್ಲಿ ಹೊಡೆದು ಐದು ಹತ್ತು ಲಾರಿಗೆ ರಾಯಲ್ಟಿ ಕಟ್ಟೋದು ತಪ್ಪು. ರಸ್ತೆಗಳು, ಪರಿಸರ ಹಾಳಾಗ್ತಿದೆ. ಎಸ್.ಪಿ ಮಟ್ಟದ ಅಧಿಕಾರಿಗಳಿಗೂ ಅಕ್ರಮ ಗಣಿ ನಡಿತಾ ಇದ್ರೆ ಕ್ರಮ ತೆಗೆದುಕೊಳ್ಳೋದಕ್ಕೆ ಹೇಳಿದ್ದೇವೆ. ಏನಾದ್ರೂ ಮುಂದೆ ಆ ರೀತಿ ಕಂಡು ಬಂದರೆ ನಾನೇ ಸೀಜ್ ಮಾಡಿಸ್ತೇನೆ. ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎನ್ನುವ ವರದಿ ನಮ್ಮ ಬಳಿ ಇದೆ. ಸುಮಲತಾ ಮೇಡಂಗೆ ಯಾರೋ ರಾಂಗ್ ಇನ್ಫಾರ್ಮೇಶನ್ ಕೊಟ್ಟಿದ್ದಾರೆ. ಮೇಡಂ ಆಫೀಸಿಗೂ ಆ ವರದಿಯನ್ನು ಕಳಿಸಿಕೊಡ್ತೇವೆ. ಅದರ ಬಗ್ಗೆ ಮೇಡಂ ಅವರಿಗೆ ಚಿಂತೆ ಬೇಡ. ಆದ್ರೆ ಅಕ್ರಮ ಗಣಿಗಾರಿಕೆ ಸ್ಟೆಪ್ಗೆ ಸುಮಲಾತಾಗೆ ಸಾಥ್ ಕೊಡ್ತೇವೆ ಎಂದರು.
ಇನ್ನು ಶಿವಮೊಗ್ಗ ಸ್ಪೋಟದ ತರಹ ಇಲ್ಲಿ ನಡೆದರೆ ನಮ್ಮ ಡ್ಯಾಂಗೆ ಎಫೆಕ್ಟ್ ಆಗತ್ತೆ ಎಂಬ ಭಯದ ವಾತಾವರಣ ಇದೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಬೇಡವೇ ಬೇಡ. ಟೋಟಲ್ ಆಗಿ ಬೇಬಿ ಬೆಟ್ಟದ ಗಣಿಗಾರಿಕೆ ಸ್ಟಾಪ್ ಆಗಬೇಕು. ಇಲ್ಲಿ ಯಾರದ್ದಾದ್ರೂ ಪಾತ್ರ ಇರಲಿ ಅದು ನಿಲ್ಲಬೇಕು. ಜೆಡಿಎಸ್ ಮಾಜಿ ಸಚಿವರೂ ಕೂಡ ಇದಕ್ಕೆ ಸಾಥ್ ಕೊಡ್ತಿದ್ದಾರೆ. ಜೆಡಿಎಸ್ ನವರು ಅಕ್ರಮ ಗಣಿಗಾರಿಕೆ ಸ್ಟಾಪ್ ಮಾಡಿ ಅಂದಿದ್ದಾರೆ. ಇದೇ ಮಾತನ್ನು ಜೆಡಿಎಸ್ ನವರು ಮುಂದುವರೆಸಿಕೊಂಡು ಹೋಗಬೇಕು. ಯಾವ ಕಾರಣಕ್ಕೂ ಜೆಡಿಎಸ್ ನವರು ಈ ಮಾತಿನಿಂದ ಹಿಂದೆ ಸರಿಬಾರದು. ಡ್ಯಾಂ ಭಾಗದಲ್ಲಿ ಎಲ್ಲಿಯೂ ಗಣಿಗಾರಿಕೆ ನಡೆಯಲೇಬಾರದು. ಡ್ಯಾಂ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಟೀಕೆ-ಟಿಪ್ಪಣಿ, ವಾದ-ವಿವಾದ ನಡೆಯಲಿ. ಆದರೆ ಲ್ಯಾಂಗ್ವೇಜ್ ನ ಹಿಡಿತ ಇರಬೇಕು ಎನ್ನೋ ಮನವಿ ಮಾಡ್ತೇನೆ ಎಂದು ಸಚಿವ ನಾರಾಯಣಗೌಡ ಟಿವಿ9 ಜೊತೆ ಮಾತನಾಡುತ್ತ ಹೇಳಿದರು.
ಇದನ್ನೂ ಓದಿ: ಬೇಬಿಬೆಟ್ಟ, ಕೆಆರ್ಎಸ್ ಜಲಾಶಯಕ್ಕೆ ಇಂದು ಸುಮಲತಾ ಭೇಟಿ: ಪೊಲೀಸರಿಗೆ ಎಚ್ಚರಿಕೆಯ ಪತ್ರ ನೀಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ