ಬೆಂಗಳೂರು: ಕೆಲವೊಂದು ಬೇಡಿಕೆಗಳ ಈಡೇರಿಕೆ ಸಂಬಂಧಿಸಿ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಬೇಕಿದೆ. ಈ ಕುರಿತಂತೆ ಗಮನಕ್ಕೆ ತಂದಿದ್ದೇನೆ. SSLC ಪರೀಕ್ಷೆ ಸಂದರ್ಭ ಪ್ರತಿಭಟನೆ ಸರಿಯಲ್ಲ ಎಂದು ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಭೆ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ಮಾರ್ಚ್ 23ರಂದು ಖಾಸಗಿ ಶಾಲಾ ಒಕ್ಕೂಟದಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರ ರುಪ್ಸಾ ಕರ್ನಾಟಕ ಖಾಸಗಿ ಶಾಲಾ ಒಕ್ಕೂಟ ಸಭೆ ಕರೆದಿದ್ದು, ಶಾಸಕರ ಭವನದಲ್ಲಿ ಸಭೆ ಕರೆದ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದೆ. ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಸಚಿವರ ಮನೆಯ ಮುಂದೆಯೇ ಪ್ರತಿಭಟನೆ ಕೈಗೊಳ್ಳಲು ರುಪ್ಸಾ ಕರ್ನಾಟಕ ಮುಂದಾಗಿತ್ತು.
ಸಭೆ ಬಳಿಕ ಮಾತನಾಡಿದ ಎಸ್.ಸುರೇಶ್ ಕುಮಾರ್, ಪರೀಕ್ಷೆಯ ವೇಳೆ ಶಾಲೆ ಬಂದ್ ಸರಿಯಲ್ಲ ಎಂದಿದ್ದೇನೆ. SSLC ಪರೀಕ್ಷೆ ಮುಗಿಯುವವರೆಗೂ ಮತ್ತೆ ಶಾಲೆ ಬಂದ್ ಮಾಡುವುದಿಲ್ಲ. ಪ್ರತಿಭಟನೆ ನಡೆಸುವುದಿಲ್ಲ ಎಂದಿದ್ದಾರೆ. ಕೆಲವೊಂದು ಬೇಡಿಕೆ ಈಡೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರೋ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿಯವರೆಗೆ ಪರೀಕ್ಷೆ ನಡೆಸುವ ವಿಚಾರವಾಗಿ ಸದ್ಯ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಶಿಕ್ಷಣ ಸಚಿವರು ಖಾಸಗಿ ಶಾಲೆಗಳ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಪ್ರತಿಭಟನೆಗೆ ಶಿಕ್ಷಕರು ನಿರ್ಧಾರ ಮಾಡಿದ್ದರು. ಶಿಕ್ಷಣ ಸಚಿವರ ಮನೆ ಮುಂದೆ ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೌನ ಸತ್ಯಾಗ್ರಹ ಮಾಡಲು ಸಹ ತೀರ್ಮಾನಿಸಿದ್ದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ನೌಕರರ ಸಂಘ, ರುಪ್ಸಾ ಕರ್ನಾಟಕ , ಕಲ್ಯಾಣ ಕರ್ನಾಟಕ, ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹಾಗೂ ವಿವಿಧ ಶಿಕ್ಷಕರ ಸಮನ್ವಯ ಸಮಿತಿಯಿಂದ ಹೋರಾಟ ನಡೆಸಲು ಮುಂದಾಗಿದ್ದರು.
ಹೆಣ್ಣು ಮಕ್ಕಳ ಕನ್ನಡ ಪ್ರಾಥಮಿಕ ಶಾಲೆಯನ್ನು ಖಾಲಿ ಮಾಡಿಸಲು ಮುಂದಾದ ಹುಬ್ಬಳ್ಳಿಯ ಗಾಂಧಿವಾಡ ಸೊಸೈಟಿ
Published On - 12:29 pm, Tue, 23 March 21