ಸಾಗರದಲ್ಲಿ ಬಾಲಕಿ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ, ಬಾಲಕ ಅರೆಸ್ಟ್​

ಬಾಲಕಿಯ ತಂದೆ-ತಾಯಿ ಕೂಲಿ ಕಾರ್ಮಿಕರು. ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಟರೆ ಮತ್ತೆ ಮನೆಗೆ ಬರುವುದು ಸಂಜೆಯಾಗುತ್ತದೆ. ಈ ಅವಧಿಯಲ್ಲಿ ಅತ್ಯಾಚಾರ ನಡೆದಿದೆ.

ಸಾಗರದಲ್ಲಿ ಬಾಲಕಿ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ, ಬಾಲಕ ಅರೆಸ್ಟ್​
ಸಾಂದರ್ಭಿಕ ಚಿತ್ರ

Updated on: Dec 09, 2020 | 10:01 PM

ಸಾಗರ: ಸಾಗರದಲ್ಲಿ 8 ವರ್ಷದ ಅಪ್ರಾಪ್ತೆ ಮೇಲೆ 15 ವರ್ಷದ ಬಾಲಕ ಅತ್ಯಾಚಾರ ಮಾಡಿದ್ದಾನೆ. ಆರೋಪಿ ವಿರುದ್ಧ ಫೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲು ಆಗಿದೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಬಾಲಕಿಯ ತಂದೆ-ತಾಯಿ ಕೂಲಿ ಕಾರ್ಮಿಕರು. ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಟರೆ ಮತ್ತೆ ಮನೆಗೆ ಬರುವುದು ಸಂಜೆಯಾಗುತ್ತದೆ. ಮನೆಯಲ್ಲಿ ಬಾಲಕಿ ಮತ್ತು ಹಾಗೂ ಆಕೆಯ ಅಣ್ಣ ಇಬ್ಬರೇ ಇರುತ್ತಿದ್ದರು. ಬಾಲಕಿಯ ಅಣ್ಣನಿಗೆ ಸೈಕಲ್ ಕೊಟ್ಟು ಆತನನ್ನು ಬಾಲಕ ಹೊರಗೆ ಕಳುಹಿಸುತ್ತಿದ್ದ. ಕೆಲ ದಿನಗಳಿಂದ ಮೂರು ನಾಲ್ಕು ಬಾರಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ, ಈ ವಿಷಯ ಬಹಿರಂಗವಾಗಿರಲಿಲ್ಲ.

ಸೋಮವಾರ ಕೂಡ ಬಾಲಕಿಯ ಮೇಲೆ ಬಾಲಕ ಅತ್ಯಾಚಾರ ಎಸಗಿದ್ದ. ಆ ದಿನ ಸಂಜೆ ಪಾಲಕರು ಮನೆಗೆ ಬಂದಾಗ ಬಾಲಕಿ ನೋವಿನಿಂದ ಬಳಲುತ್ತಿದ್ದಳು. ಈ ವೇಳೆ ಬಾಲಕಿ ತನಗಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದಾಳೆ. ಬಳಿಕ ಪೋಷಕರು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ಮಾಡಿರುವವನ ವಿರುದ್ಧ ಕಠಿಣ ಕ್ರಮಕ್ಕೆ ಕುಟುಂಬಸ್ಥರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.

ಮೆಗ್ಗಾನ್​ ಆಸ್ಪತ್ರೆಯಲ್ಲಿದ್ದ ತಾಯಿಯ ಸಹಾಯಕ್ಕೆ ಬಂದ ಅಪ್ರಾಪ್ತೆ ಮೇಲೆ ಸಿಬ್ಬಂದಿಯಿಂದ ಅತ್ಯಾಚಾರ

Published On - 9:34 pm, Wed, 9 December 20