ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!

Edited By:

Updated on: Apr 20, 2026 | 2:47 PM

ಜಿಲ್ಲೆಯ ಜೈಲಿನಲ್ಲಿ ಕೈದಿಗಳಿಗೆ ಗಾಂಜಾ ಹಾಗೂ ಮೊಬೈಲ್ ಒದಗಿಸಲು ಖತರ್ನಾಕ್ ತಂತ್ರವನ್ನು ಬಳಸಲಾಗುತ್ತಿದೆ. ಜೈಲಿನಲ್ಲಿ ಮಾದಕವಸ್ತು ಮತ್ತು ನಿಷಿದ್ಧ ವಸ್ತುಗಳ ಪೂರೈಕೆ ಬಗ್ಗೆ ವ್ಯಾಪಕ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಇದೀಗ ಹೊಸ ರೀತಿಯ ಕಳ್ಳಾಟವೊಂದು ಬಯಲಾಗಿದೆ. ದುಷ್ಕರ್ಮಿಗಳು ಕ್ರಿಕೆಟ್ ಬಾಲ್ ಒಳಗೆ ಗಾಂಜಾ ಮತ್ತು ಮೊಬೈಲ್ ಫೋನ್ ಇರಿಸಿ, ಅದನ್ನು ಜೈಲಿನ ಕಾಂಪೌಂಡ್ ಒಳಗೆ ಎಸೆದು ಪರಾರಿಯಾಗಿದ್ದಾರೆ.

ಮಂಡ್ಯ, ಏಪ್ರಿಲ್ 20: ಜಿಲ್ಲೆಯ ಜೈಲಿನಲ್ಲಿ ಕೈದಿಗಳಿಗೆ ಗಾಂಜಾ ಹಾಗೂ ಮೊಬೈಲ್ ಒದಗಿಸಲು ಖತರ್ನಾಕ್ ತಂತ್ರವನ್ನು ಬಳಸಲಾಗುತ್ತಿದೆ. ಜೈಲಿನಲ್ಲಿ ಮಾದಕವಸ್ತು ಮತ್ತು ನಿಷಿದ್ಧ ವಸ್ತುಗಳ ಪೂರೈಕೆ ಬಗ್ಗೆ ವ್ಯಾಪಕ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಇದೀಗ ಹೊಸ ರೀತಿಯ ಕಳ್ಳಾಟವೊಂದು ಬಯಲಾಗಿದೆ. ದುಷ್ಕರ್ಮಿಗಳು ಕ್ರಿಕೆಟ್ ಬಾಲ್ ಒಳಗೆ ಗಾಂಜಾ ಮತ್ತು ಮೊಬೈಲ್ ಫೋನ್ ಇರಿಸಿ, ಅದನ್ನು ಜೈಲಿನ ಕಾಂಪೌಂಡ್ ಒಳಗೆ ಎಸೆದು ಪರಾರಿಯಾಗಿದ್ದಾರೆ.

ಈ ಘಟನೆಯು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಕೈದಿಗಳ ಕಳ್ಳಾಟ ಬಯಲಿಗೆ ಬಂದಿದೆ. ಬಾಲ್ ಎಸೆದ ನಂತರ, ಜೈಲಿನೊಳಗಿನ ಕೈದಿ ನಾಗ ಅಲಿಯಾಸ್ ಹಂದಿನಾಗ ಅದನ್ನು ತೆಗೆದುಕೊಂಡಿರುವುದು ಸ್ಪಷ್ಟವಾಗಿದೆ. ಬಾಲ್ ಅನ್ನು ಕತ್ತರಿಸಿ ಪರಿಶೀಲಿಸಿದಾಗ, ಅದರೊಳಗೆ 10 ಗ್ರಾಂ ಗಾಂಜಾ ಮತ್ತು ಒಂದು ಮೊಬೈಲ್ ಫೋನ್ ಪತ್ತೆಯಾಗಿದೆ. ಜೈಲಿಗೆ ನಿಷಿದ್ಧ ವಸ್ತುಗಳನ್ನು ಪೂರೈಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಮತ್ತು ಈ ಜಾಲದ ಹಿಂದೆ ಯಾರೆಲ್ಲ ಇದ್ದಾರೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Follow Us
Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More