ವಿಧುರಾಶ್ವತ್ಥ ದೇಗುಲದಲ್ಲಿ ಚೆಕ್​​​ಗಳನ್ನ ತಿದ್ದಿ ಲಕ್ಷ ಲಕ್ಷ ಹಣ ಗುಳುಂ!

|

Updated on: Dec 19, 2019 | 8:19 PM

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನಲ್ಲಿರುವ ವಿಧುರಾಶ್ವತ್ಥ ಅಮರ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ನಾಗರಕಲ್ಲು ಪ್ರತಿಷ್ಠಾಪಿಸೋದು ಸಿಕ್ಕಾಪಟ್ಟೆ ಫೇಮಸ್. ಅಲ್ಲದೇ ಕಾಣಿಕೆ, ಸೇವೆ ಅಂತ ಕೋಟಿ ಕೋಟಿ ಹಣ ಭಕ್ತರು ದಾನವಾಗಿ ನೀಡ್ತಾರೆ. ಆದ್ರೆ, ಈ ಹಣದ ಆಡಳಿತಾಧಿಕಾರಿ ಗುರುಪ್ರಸಾದ್, ಲೇಡಿ ಕಂಪ್ಯೂಟರ್ ಆಪರೇಟರ್ ಶೃತಿ ಹಾಗೂ ಸುರೇಶ್ ಕೆಂಗಣ್ಣು ಬೀರಿದೆ. ಈ ಮೂವರು ಸೇರ್ಕೊಂಡು ದೇಗುಲದ ಹೆಸರಲ್ಲಿದ್ದ ಬರೋಬ್ಬರಿ 68 ಲಕ್ಷ ರೂಪಾಯಿ ಲಪಟಾಯಿಸಿದ್ದಾರೆ. ದೇವರ ಹೆಸರಲ್ಲಿ ಲಕ್ಷ ಲಕ್ಷ ಹಣ ಲೂಟು ಹೊಡೆದಿದ್ದು ತಹಶೀಲ್ದಾರ್ ತನಿಖೆಯಲ್ಲಿ ಬಯಲಾಗಿದೆ. ಇನ್ನು, […]

ವಿಧುರಾಶ್ವತ್ಥ ದೇಗುಲದಲ್ಲಿ ಚೆಕ್​​​ಗಳನ್ನ ತಿದ್ದಿ ಲಕ್ಷ ಲಕ್ಷ ಹಣ ಗುಳುಂ!
Follow us on

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನಲ್ಲಿರುವ ವಿಧುರಾಶ್ವತ್ಥ ಅಮರ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ನಾಗರಕಲ್ಲು ಪ್ರತಿಷ್ಠಾಪಿಸೋದು ಸಿಕ್ಕಾಪಟ್ಟೆ ಫೇಮಸ್. ಅಲ್ಲದೇ ಕಾಣಿಕೆ, ಸೇವೆ ಅಂತ ಕೋಟಿ ಕೋಟಿ ಹಣ ಭಕ್ತರು ದಾನವಾಗಿ ನೀಡ್ತಾರೆ. ಆದ್ರೆ, ಈ ಹಣದ ಆಡಳಿತಾಧಿಕಾರಿ ಗುರುಪ್ರಸಾದ್, ಲೇಡಿ ಕಂಪ್ಯೂಟರ್ ಆಪರೇಟರ್ ಶೃತಿ ಹಾಗೂ ಸುರೇಶ್ ಕೆಂಗಣ್ಣು ಬೀರಿದೆ. ಈ ಮೂವರು ಸೇರ್ಕೊಂಡು ದೇಗುಲದ ಹೆಸರಲ್ಲಿದ್ದ ಬರೋಬ್ಬರಿ 68 ಲಕ್ಷ ರೂಪಾಯಿ ಲಪಟಾಯಿಸಿದ್ದಾರೆ. ದೇವರ ಹೆಸರಲ್ಲಿ ಲಕ್ಷ ಲಕ್ಷ ಹಣ ಲೂಟು ಹೊಡೆದಿದ್ದು ತಹಶೀಲ್ದಾರ್ ತನಿಖೆಯಲ್ಲಿ ಬಯಲಾಗಿದೆ.

ಇನ್ನು, ಮುಜರಾಯಿ ಇಲಾಖೆಗೆ ಸೇರಿರೋ ವಿಧುರಾಶ್ವತ್ಥ ದೇವಸ್ಥಾನದ ಹಣವನ್ನೆಲ್ಲಾ ಕರ್ನಾಟಕ ಗ್ರಾಮೀಣ ಬ್ಯಾಂಕ್​​ನಲ್ಲಿರೋ​ ಖಾತೆಗೆ ಜಮೆ ಮಾಡ್ತಾರೆ. ಅಲ್ದೆ, ನಾಗರಕಲ್ಲು ಪ್ರತಿಷ್ಠಾಪಿಸೋಕೆ ಬರೋ ಭಕ್ತರ ಅನುಕೂಲಕ್ಕೆ ತಲಾ 800 ರೂಪಾಯಿ ಖರ್ಚು ಮಾಡ್ಬೋದು. ಹೀಗೆ ಏಪ್ರಿಲ್ 1, 2019ರಿಂದ ಆಗಸ್ಟ್ 31ರವರೆಗೆ 363 ನಾಗರಕಲ್ಲು ಪ್ರತಿಷ್ಠಾಪಿಸಲಾಗಿದೆ. ಈ ಖರ್ಚು ವೆಚ್ಚ ಅಂತ 2 ಲಕ್ಷದ 90 ಸಾವಿರದ 400 ರೂಪಾಯಿ ಆಗಿದೆ.

ಹಗಲು ದರೋಡೆ ಮಾಡಿದ ಆಡಳಿತ ಸಿಬ್ಬಂದಿ:
ಆದ್ರೆ, ಈ ಮೂವರು ಸೇರ್ಕೊಂಡು 500 ರೂಪಾಯಿ ಚೆಕ್​​ಗಳನ್ನ 500 ಸಾವಿರ, 5 ಸಾವಿರ ರೂಪಾಯಿ ಚೆಕ್​​ನ್ನ 50 ಸಾವಿರ, 50 ಸಾವಿರ ರೂಪಾಯಿ ಚೆಕ್​​ನ್ನ 5 ಲಕ್ಷ ಎಂದು ತಿದ್ದಿ ಹಗಲು ದರೋಡೆ ಮಾಡಿದ್ದಾರೆ. ಇಷ್ಟೆಲ್ಲಾ ಆಗ್ತಿದ್ರೂ ದೇಗುಲದ ಆಡಳಿತ ಮಂಡಳಿಯವ್ರಿಗೆ ಗೊತ್ತೇ ಇಲ್ವಂತೆ. ಇದೀಗ ತಹಶೀಲ್ದಾರ್ ಸಾಹೇಬ್ರು ಅಕ್ರಮವನ್ನ ಬಯಲಿಗೆಳೆದಿದ್ದು ದಾಖಲೆಗಳನ್ನ ಮುಜರಾಯಿ ಇಲಾಖೆ ಆಯುಕ್ತರಿಗೆ ನೀಡಿದ್ದಾರೆ. ಅದೇನೆ ಇರ್ಲಿ, ದೇವರ ಹೆಸರಲ್ಲಿ ದೇವರಿಗೆ ಮಕ್ಮಲ್ ಟೋಪಿ ಹಾಕಿದ್ರೆ, ಬೇಲಿಯೆ ಎದ್ದು ಹೊಲ ಮೆಯ್ದಿರೋದು ದುರಂತ.