ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ವಿಪರೀತ ಅನಿಸುವಷ್ಟು ಎಡೆಬಿಡದೆ ಸುರಿಯುತ್ತಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಆರ್ಭಟ ಇದೆ. ಇನ್ನು ಉತ್ತರ ಕರ್ನಾಟಕದ ಜಿಲ್ಲೆಗಳೂ ಮಳೆಯಿಂದ ತತ್ತರಿಸಿವೆ. (Monsoon 2021)
ರಾಜ್ಯದ ಅತಿ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಸೇರಿದಂತೆ ಇತರೆ ಪ್ರಮುಖ ಜಲಾಶಯಗಳಾದ ಕಾವೇರಿ ಕಣಿವೆ ಭಾಗದ ಕೆಆರ್ಎಸ್, ಕಬಿನಿ, ಹೇಮಾವತಿ, ಹಾರಂಗಿ ಮತ್ತು ಜಲ ವಿದ್ಯುತ್ ಅಣೆಕಟ್ಟೆಗಳಾದ ಲಿಂಗನಮಕ್ಕಿ, ಸೂಪಾ ಮತ್ತು ಕೃಷ್ಣಾ ನದಿ ಭಾಗದ ಜಲಾಶಯಗಳಾದ ತುಂಗಭದ್ರಾ, ಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ಕಾವೇರಿ ಕಣಿವೆ ಭಾಗದ ಜಲಾಶಯಗಳು:
1) ಕೆಆರ್ಎಸ್ ಜಲಾಶಯ | KRS Dam
ಇಂದಿನ ನೀರಿನ ಮಟ್ಟ: 106.00 ಅಡಿ
ಗರಿಷ್ಠ ಸಾಮರ್ಥ್ಯ: 124.80 ಅಡಿ
2) ಹಾರಂಗಿ ಜಲಾಶಯ | Harangi Dam
ಇಂದಿನ ನೀರಿನ ಮಟ್ಟ: 2855 ಅಡಿ
ಗರಿಷ್ಠ ಸಾಮರ್ಥ್ಯ: 2859 ಅಡಿ
3) ಹೇಮಾವತಿ ಜಲಾಶಯ | Hemavathi Dam
ಇಂದಿನ ನೀರಿನ ಮಟ್ಟ: 2915 ಅಡಿ
ಗರಿಷ್ಠ ಸಾಮರ್ಥ್ಯ: 2922 ಅಡಿ
4) ಕಬಿನಿ ಜಲಾಶಯ | Kabini Dam
ಇಂದಿನ ನೀರಿನ ಮಟ್ಟ: 2281 ಅಡಿ
ಗರಿಷ್ಠ ಸಾಮರ್ಥ್ಯ: 2284 ಅಡಿ
ಜಲ ವಿದ್ಯುತ್ ಅಣೆಕಟ್ಟೆಗಳು:
5) ಲಿಂಗನಮಕ್ಕಿ ಜಲಾಶಯ | Linganamakki Dam
ಇಂದಿನ ನೀರಿನ ಮಟ್ಟ: 1800 ಅಡಿ
ಗರಿಷ್ಠ ಸಾಮರ್ಥ್ಯ: 1819 ಅಡಿ
6) ಸೂಪಾ ಜಲಾಶಯ | Supa Dam
ಇಂದಿನ ನೀರಿನ ಮಟ್ಟ: 546 ಅಡಿ
ಗರಿಷ್ಠ ಸಾಮರ್ಥ್ಯ: 564 ಅಡಿ
ಕೃಷ್ಣಾ ನದಿ ಭಾಗದ ಜಲಾಶಯಗಳು:
7) ತುಂಗಾಭದ್ರಾ ಜಲಾಶಯ | Tungabhadra Dam
ಇಂದಿನ ನೀರಿನ ಮಟ್ಟ: 1623 ಅಡಿ
ಗರಿಷ್ಠ ಸಾಮರ್ಥ್ಯ: 1633 ಅಡಿ
8) ಭದ್ರಾ ಜಲಾಶಯ | Bhadra Dam
ಇಂದಿನ ನೀರಿನ ಮಟ್ಟ: 172 ಅಡಿ
ಗರಿಷ್ಠ ಸಾಮರ್ಥ್ಯ: 186 ಅಡಿ
9) ಮಲಪ್ರಭಾ ಜಲಾಶಯ | Malaprabha Dam
ಇಂದಿನ ನೀರಿನ ಮಟ್ಟ: 2071 ಅಡಿ
ಗರಿಷ್ಠ ಸಾಮರ್ಥ್ಯ: 2079.05 ಅಡಿ
10) ಘಟಪ್ರಭಾ ಜಲಾಶಯ | Ghataprabha Dam
ಇಂದಿನ ನೀರಿನ ಮಟ್ಟ: 2159 ಅಡಿ
ಗರಿಷ್ಠ ಸಾಮರ್ಥ್ಯ: 2175 ಅಡಿ
11) ನಾರಾಯಣಪುರ ಜಲಾಶಯ | Narayanpur Dam
ಇಂದಿನ ನೀರಿನ ಮಟ್ಟ: 490.25 ಮೀಟರ್
ಗರಿಷ್ಠ ಸಾಮರ್ಥ್ಯ: 492.25 ಮೀಟರ್
12) ಆಲಮಟ್ಟಿ ಜಲಾಶಯ | Almatti Dam
ಇಂದಿನ ನೀರಿನ ಮಟ್ಟ: 518 ಮೀಟರ್
ಗರಿಷ್ಠ ಸಾಮರ್ಥ್ಯ: 519.69 ಮೀಟರ್
(Monsoon 2021 Karnataka 12 reservoirs and dams water level as on 24th July 2021)
ಪ್ರಮುಖ ಜಲಾಶಯ -23-07-2021 ರಂದು ಮಟ್ಟ, ಸಂಗ್ರಹಣೆ, ಹರಿವುಗಳು. pic.twitter.com/kRi8g8MPJK
— KSNDMC (@KarnatakaSNDMC) July 23, 2021