ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗದಿದಕ್ಕೆ ಕೋಪಗೊಂಡ ಕಿಡಿಕೇಡಿಗಳು, ಅಡಿಕೆ ಗಿಡಗಳಿಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ನೆಟ್ಟೆಕೆರೆ ಗೇಟ್ ಸಮೀಪ ನಡೆದಿದೆ.
ನೆಟ್ಟೆಗೆರೆ ಗೇಟ್ ವಾಸಿ ಮಾಯಣ್ಣಗೌಡ ಎಂಬುವರಿಗೆ ಸೇರಿದ್ದ ಜಮೀನಿನಲ್ಲಿ ಇನ್ನೂ ಬೆಳೆಯುತ್ತಿದ್ದ ಅಡಿಕೆ ಗಿಡ, ಹನಿ ನೀರಾವರಿ ಪೈಪ್ಗಳು.ಪಂಪು ಮೋಟಾರ್ಗೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ. ಘಟನೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಗಿಡಗಳು ಬೆಂಕಿಗಾಹುತಿಯಾಗಿವೆ. ಇದರಿಂದಾಗಿ ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ರೈತನ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ರಾಜಕೀಯ ದ್ವೇಷಕ್ಕೆ ಅಡಿಕೆ ಗಿಡಗಳಿಗೆ ಬೆಂಕಿ ಇಟ್ಟಿರುವ ಕಿಡಿಗೇಡಿಗಳು, ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡದ ಕಾರಣಕ್ಕಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
Published On - 9:01 am, Sat, 2 January 21