ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 02-01-2021
LIVE NEWS & UPDATES
-
ಅಗತ್ಯ ಬಿದ್ದರೆ ಕೊರೊನಾ ಔಷಧ ಮಿಕ್ಸ್ ಮಾಡಿ ನೀಡಲು ಸಿದ್ಧ- ಲಂಡನ್ ಸರ್ಕಾರ
09:30 pm ಬೇರೆ ಬೇರೆ ಕೊರೊನಾ ಲಸಿಕೆಗಳನ್ನು ಸೇರಿಸಿ ಅದನ್ನು ಜನರಿಗೆ ನೀಡಲು ಶೀಘ್ರವೇ ಲಂಡನ್ ಸರ್ಕಾರ ಅನುಮೋದನೆ ನೀಡಲಿದೆ. ಕೊರನಾ ಲಸಿಕೆ ಮಿಕ್ಸ್ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎನ್ನುವ ಮಾತಿದೆ. ಆದರೆ, ಇದಕ್ಕೆ ಯಾವುದೇ ಪುರಾವೆ ಇಲ್ಲ.
-
ಪಾದರಾಯನಪುರ ರಸ್ತೆಗಳ ಮರುನಾಮಕರಣ: ಭಾರಿ ವಿರೋಧದ ಬೆನ್ನಲ್ಲೇ ಪ್ರಕ್ರಿಯೆ ರದ್ದುಗೊಳಿಸಲು ಮುಂದಾದ BBMP
08:13 pm ಪಾದರಾಯನಪುರದ 11 ರಸ್ತೆಗಳಿಗೆ ಅಲ್ಪ ಸಮುದಾಯಕ್ಕೆ ಸೇರಿರುವ ಸಮಾಜ ಸೇವಕರ ಹೆಸರಿಡಲು ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಈ ಪ್ರಕ್ರಿಯೆ ರದ್ದುಗೊಳಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಸಭೆಯಲ್ಲಿ ಪಾದರಾಯನಪುರ ವಾರ್ಡ್ನ ರಸ್ತೆಗಳಿಗೆ ಈ ಸಮಾಜಸೇವಕರ ಹೆಸರು ಇಡಲು ಬಿಬಿಎಂಪಿ ನಿರ್ಧರಿಸಿತ್ತು. ಆದರೆ, ಇದಕ್ಕೆ ಸಂಸದರಾದ ಅನಂತ್ ಕುಮಾರ್ ಹೆಗಡೆ, ಪಿ.ಸಿ ಮೋಹನ್ ಮತ್ತು ತೇಜಸ್ವಿ ಸೂರ್ಯ ಭಾರಿ ವಿರೋಧ ಹೊರ ಹಾಕಿದ್ದರು. ಹೀಗಾಗಿ, ಮಂಜುನಾಥ ಪ್ರಸಾದ್ ಸರ್ಕಾರಕ್ಕೆ ಈ ಮನವಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
-
ಅನಧಿಕೃತ ಕಟ್ಟಡ ನಿರ್ಮಿಸಿದವರಿಗೆ ಬಿಡಿಎನಿಂದ ಗುಡ್ನ್ಯೂಸ್
ಅನಧಿಕೃತ ಕಟ್ಟಡ ನಿರ್ಮಿಸಿದವರಿಗೆ ಬಿಡಿಎನಿಂದ ಗುಡ್ನ್ಯೂಸ್ ನೀಡಿದೆ. ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡ ಸಕ್ರಮಗೊಳಿಸಲು ಸಮ್ಮತಿಸಿದೆ. 12 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕಟ್ಟಡಗಳು ಸಕ್ರಮವಾಗಲಿದೆ ಎಂದು ಬಿಡಿಎ ಹೇಳಿದೆ. ಅಕ್ರಮ ಸಕ್ರಮದಡಿ ಸೂಕ್ತ ಮೌಲ್ಯ ಕಟ್ಟಿಸಿಕೊಂಡು ಮಂಜೂರು ಮಾಡಲಾಗುತ್ತದೆ. ಇದರಿಂದ ಸಾವಿರಾರು ಕೋಟಿ ಆದಾಯ ನಿರೀಕ್ಷಿಸಲಾಗಿದೆ
ಗಂಗೂಲಿ ಆರೋಗ್ಯ ಸ್ಥಿರ: ವೈದ್ಯರ ಸ್ಪಷ್ಟನೆ
07:24 pm ಅನಾರೋಗ್ಯ ಕಾರಣದಿಂದ ಆಸ್ಪತ್ರೆ ಸೇರಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಮೂಲಕ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸೌರವ್ ಗಂಗೂಲಿ ಆಸ್ಪತ್ರೆಗೆ ಸೇರಿದ್ದರು.
ರಾಜ್ಯದಲ್ಲಿಂದು ಹೊಸದಾಗಿ 755 ಜನರಿಗೆ ಕೊರೊನಾ ದೃಢ
07:07 ರಾಜ್ಯದಲ್ಲಿಂದು ಹೊಸದಾಗಿ 755 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,21,128ಕ್ಕೆ ಏರಿಕೆ ಆಗಿದೆ. ಕೊರೊನಾ ಸೋಂಕಿನಿಂದ ಮೂವರ ಮೃತಪಟ್ಟಿದ್ದಾರೆ. ಈವರೆಗೆ ಕೊರೊನಾದಿಂದ 12,099 ಜನರ ಅಸುನೀಗಿದ್ದಾರೆ.
ಪಕ್ಷ ಕೊಡುವ ಎಲ್ಲಾ ಜವಾಬ್ದಾರಿ ನಿರ್ವಹಿಸುತ್ತೇನೆ ಬಿ.ವೈ. ವಿಜಯೇಂದ್ರ ಹೇಳಿಕೆ
6:54 pm ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಗಟ್ಟಿಯಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲುವು ಪಡೆದಿದ್ದಾರೆ. ರಾಜ್ಯದಲ್ಲಿ ಮತ್ತೆ ಉಪಚುನಾವಣೆಗಳಿವೆ. ಪಕ್ಷ ಕೊಟ್ಟಿರುವ ಎಲ್ಲಾ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಮೂರು ಉಪ ಚುನಾವಣೆಯಲ್ಲಿ ಗೆಲುವಿಗಾಗಿ ಪರಿಶ್ರಮ ಪಟ್ಟಿದ್ದೇನೆ. ಚುನಾವಣೆಗೋಸ್ಕರ ನಾನು ಯಾವುದೇ ಸಂಘಟನೆ ಮಾಡಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
ಭಾರತ್ ಬಯೋಟೆಕ್ ಕೊವಿಡ್-19 ಲಸಿಕೆಗೆ ಅನುಮತಿ ಸಾಧ್ಯತೆ
6:49 pm ಭಾರತ್ ಬಯೋಟೆಕ್ ಕೊವಿಡ್-19 ಲಸಿಕೆಗೆ ಅನುಮತಿ ನೀಡುವ ಕುರಿತು ತಜ್ಞರ ಸಮಿತಿ ಸೂಚನೆ ನೀಡಿದೆ. ಭಾರತ್ ಬಯೋಟೆಕ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬಾಲ್ಯದ ಗೆಳೆಯನ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ
6:44 pm ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ನಿಧನರಾದ ಬಾಲ್ಯದ ಗೆಳೆಯ, ಮೈಸೂರಿನ ಕುಪ್ಪೆಗಾಲದ ಪುಟ್ಟಸ್ವಾಮಿಗೌಡ(75) ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅಂತ್ಯಕ್ರಿಯೆ ಮುಗಿಯುವವರೆಗೆ ಸ್ಥಳದಲ್ಲೇ ಇದ್ದ ಸಿದ್ದರಾಮಯ್ಯ, ಪುಟ್ಟಸ್ವಾಮಿಗೌಡ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಒಡಿಶಾದಲ್ಲಿ 10 ಮತ್ತು 12ನೇ ತರಗತಿ ಆರಂಭಕ್ಕೆ ದಿನಾಂಕ ನಿಗಧಿ
6:41 pm ಒಡಿಶಾದಲ್ಲಿ 10 ಮತ್ತು 12ನೇ ತರಗತಿಗಳು ಜನವರಿ 8ರಿಂದ ತೆರೆಯಲಿರುವ ಬಗ್ಗೆ ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ. ಕೊವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಶಾಲಾ ಕಾಲೇಜು ತೆರೆಯುವ ಬಗ್ಗೆ ಸರ್ಕಾರ ಸೂಚನೆ ನೀಡಿದೆ.
ಕೊವಿಡ್-19ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ
6:36 pm ಕೊವಿಡ್-19ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಇಂದು 19,079 ಮಂದಿ ಕೊವಿಡ್-19 ಪಾಸಿಟಿವ್ ಆಗಿದ್ದರೆ, 22,926 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದರಿಂದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ 4,071 ಕೇಸ್ಗಳು ಕಡಿಮೆಯಾಗಿವೆ.
ಬೆಂಗಳೂರಿನಲ್ಲಿ ಬೆಳಕಿಗೆ ಬಂತು ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ
ಐಎಂಎ ಮಾದರಿಯಲ್ಲಿ ಮತ್ತೊಂದು ಕಂಪನಿಯಿಂದ ವಂಚನೆ
6:26 pm ಬೆಂಗಳೂರಿನಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಐಎಂಎ ಮಾದರಿಯಲ್ಲಿ ಮತ್ತೊಂದು ಕಂಪನಿಯಿಂದ ವಂಚನೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿಶ್ವಪ್ರಿಯ ಫೈನಾನ್ಷಿಯಲ್ & ಸೆಕ್ಯೂರಿಟೀಸ್ ಪ್ರೈ. ಲಿ. ಎಂಬ ತಮಿಳುನಾಡು ಮೂಲದ ಹಣಕಾಸು ಕಂಪನಿಯಿಂದ ವಂಚನೆಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಹೂಡಿಕೆ ಮಾಡಿದ್ದವರಿಗೆ 300 ಕೋಟಿಗೂ ಹೆಚ್ಚು ವಂಚನೆ ಶಂಕಿಸಲಾಗಿದ್ದು, ಕಂಪೆನಿಯು ಠೇವಣಿ ಹಣ ಹಿಂದಿರುಗಿಸದೆ ವಂಚನೆ ಮಾಡಿದೆ ಎಂದು ಹೇಳಲಾಗಿದೆ. ಶೇ. 10.47ರಷ್ಟು ಬಡ್ಡಿ ಕೊಡುವುದಾಗಿ ನಂಬಿಸಿದ್ದ ಕಂಪನಿ, ಅಧಿಕ ಬಡ್ಡಿಯ ಆಸೆ ತೋರಿಸಿ ಹೂಡಿಕೆದಾರರಿಗೆ ವಂಚನೆ ಮಾಡಿದೆ.
ತುಮಕೂರು ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರಿಗೆ ಕೊರೊನಾ ದೃಢ
6:23 pm ತುಮಕೂರು ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರಿಗೆ ಕೊರೊನಾ ದೃಢವಾಗಿದೆ. ಕೊರೊನಾ ಸೋಂಕಿತ ಶಿಕ್ಷಕರನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಬಗ್ಗೆ ಟಿವಿ9ಗೆ ತುಮಕೂರು ಡಿಹೆಚ್ಒ ಡಾ.ನಾಗೇಂದ್ರಪ್ಪ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿಲ್ಲ ಎಂದೂ ತಿಳಿಸಲಾಗಿದೆ.
ಐವರು ಆಟಗಾರರಿಗೆ ಪ್ರತ್ಯೇಕ ಅಭ್ಯಾಸಕ್ಕೆ ಸೂಚನೆ
ಟೀಂ ಇಂಡಿಯಾ ಆಟಗಾರರ ಕೊವಿಡ್ ನಿಯಮ ಉಲ್ಲಂಘನೆ ಪ್ರಕರಣ
6:22 pm ಟೀಂ ಇಂಡಿಯಾ ಆಟಗಾರರ ಕೊವಿಡ್ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಐವರು ಆಟಗಾರರು ಐಸೋಲೇಷನ್ಗೆ ಒಳಗಾಗಲಿದ್ದಾರೆ. ಐವರು ಆಟಗಾರರಿಗೆ ಪ್ರತ್ಯೇಕ ಅಭ್ಯಾಸಕ್ಕೆ ಸೂಚನೆ ನೀಡಲಾಗಿದೆ. ಐವರು ಕ್ರಿಕೆಟಿಗರು ಜನವರಿ 1ರಂದು ಹೊಟೇಲ್ನಲ್ಲಿ ಅಭಿಮಾನಿ ಜೊತೆ ಕಾಣಿಸಿಕೊಂಡಿದ್ದರು. ಅಭಿಮಾನಿ ಜೊತೆಯಿದ್ದ ವಿಡಿಯೋ ವೈರಲ್ ಆಗಿತ್ತು. ರೋಹಿತ್ ಶರ್ಮಾ, ರಿಷಬ್ ಪಂತ್, ನವದೀಪ್ ಸೈನಿ, ಶುಭಮನ್ ಗಿಲ್, ಪೃಥ್ವಿ ಶಾ ಅಭಿಮಾನಿ ಜೊತೆ ಕಾಣಿಸಿಕೊಂಡಿದ್ದರು.
ಚಿರತೆ ದಾಳಿಗೆ ಬಲಿಯಾಗಿದ್ದ ಯುವಕನ ಮನೆಗೆ 5 ಲಕ್ಷ ರೂ. ಪರಿಹಾರ
ವೈಯಕ್ತಿಕವಾಗಿಯೂ 2 ಲಕ್ಷ ರೂ. ಪರಿಹಾರ ನೀಡಿದ ಅರಣ್ಯ ಸಚಿವ ಆನಂದ್ ಸಿಂಗ್
6:18 pm ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕರಿಯಮ್ಮನಗಡ್ಡಿ ಬಳಿ ಚಿರತೆ ದಾಳಿಗೆ ಯುವಕ ಬಲಿ ಪ್ರಕರಣಕ್ಕೆ ಸಂಬಂಧಿಸಿ, ಅರಣ್ಯ ಇಲಾಖೆಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಮೃತ ಯುವಕನ ಮನೆಗೆ ಭೇಟಿ ನೀಡಿದ ಅರಣ್ಯ ಸಚಿವ ಆನಂದ್ ಸಿಂಗ್, ವೈಯಕ್ತಿಕವಾಗಿಯೂ 2 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ನಿನ್ನೆ ಚಿರತೆ ದಾಳಿಗೆ ಬಲಿಯಾಗಿದ್ದ ಕುರಿಗಾಹಿ ರಾಘವೇಂದ್ರನ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರು ಶಿಕ್ಷಕರಿಗೆ ಕೊರೊನಾ
6:12 pm ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಭಟ್ಕಳದ ಒಬ್ಬ, ಹೊನ್ನಾವರದ ಇಬ್ಬರು ಶಿಕ್ಷಕರಿಗೆ ಕೊರೊನಾ ಖಚಿತವಾಗಿದೆ. ಜಿಲ್ಲೆಯಲ್ಲಿ 4,500 ಶಿಕ್ಷಕರಿಗೆ ಕೊವಿಡ್ ಟೆಸ್ಟ್ ನಡೆಸಲಾಗಿತ್ತು. ಆ ಪೈಕಿ ಮೂವರು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನೂ ಕೆಲವು ಶಿಕ್ಷಕರ ಕೊವಿಡ್ ಪರೀಕ್ಷೆ ವರದಿ ಬಾಕಿ ಇದೆ. ಸದ್ಯ ಸೋಂಕಿತ ಶಿಕ್ಷಕರನ್ನು ಹೋಮ್ ಐಸೋಲೇಷನ್ನಲ್ಲಿ ಇರಿಸಲಾಗಿದೆ. ಈ ಬಗ್ಗೆ ಟಿವಿ9ಗೆ ಉತ್ತರ ಕನ್ನಡ ಡಿಡಿಪಿಐ ಹರೀಶ್ ಗಾಂವ್ಕರ್ ಮಾಹಿತಿ ನೀಡಿದ್ದಾರೆ.
ಸೌರವ್ ಗಂಗೂಲಿಗೆ ಆಂಜಿಯೋಪ್ಲಾಸ್ಟಿ ನಡೆಸಿರುವ ವೈದ್ಯರು
6:09 pm ಕೋಲ್ಕತ್ತಾದ ವುಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸೌರವ್ ಗಂಗೂಲಿಗೆ ಆಂಜಿಯೋಪ್ಲಾಸ್ಟಿ ನಡೆಸಿರುವ ವೈದ್ಯ ಅಫ್ತಾಬ್ ಖಾನ್, ಗಂಗೂಲಿ ಆರೋಗ್ಯ ಸ್ಥಿರವಾಗಿದೆ, 24 ಗಂಟೆಗಳ ಕಾಲ ನಿಗಾದಲ್ಲಿಟ್ಟಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ. ಸೌರವ್ ಗಂಗೂಲಿ ಹೃದಯದಲ್ಲಿ ಎರಡು ಅಡೆತಡೆಗಳಿವೆ. ಅದಕ್ಕೆ ಚಿಕಿತ್ಸೆ ಮುಂದುವರಿಸುತ್ತೇವೆ ಎಂದು ವೈದ್ಯ ಅಫ್ತಾಬ್ ಖಾನ್ ಹೇಳಿದ್ದಾರೆ. ಈ ಸಂದರ್ಭ, ಪಶ್ಚಿಮ ಬಂಗಾಳ ರಾಜ್ಯಪಾಲ ಜಗ್ದೀಪ್ ಧನ್ಖಾರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
Kolkata: West Bengal Governor Jagdeep Dhankhar arrives at Woodlands Hospital where BCCI President Sourav Ganguly is admitted. pic.twitter.com/RB3mfcYTKk
— ANI (@ANI) January 2, 2021
ರಂಗಾಯಣ ವೆಬ್ಸೈಟ್ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
6:04 pm ರಂಗಾಯಣ ವೆಬ್ಸೈಟ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ಶಿವಮೊಗ್ಗದ ತಮ್ಮ ನಿವಾಸದ ಕಚೇರಿಯಲ್ಲಿ ಯಡಿಯೂರಪ್ಪ ವೆಬ್ಸೈಟ್ಗೆ ಶುಭಾರಂಭ ಹೇಳಿದರು. ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಪುತ್ರ ಹಾಗೂ ಸಂಸದ ರಾಘವೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು. ಈ ವೆಬ್ಸೈಟ್ ಮೂಲಕ ರಂಗಭೂಮಿ ಕಲಾವಿದರಿಗೆ ಹಾಗೂ ಕಲಾಸಕ್ತರಿಗೆ ಅನುಕೂಲವಾಗಿದೆ ಎಂದು ರಂಗಾಯಣದ ಕಾರ್ಯವೈಖರಿ ಕುರಿತು ಬಿಎಸ್ವೈ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
5 ಭಾರತೀಯ ಕ್ರಿಕೆಟಿಗರಿಂದ ಕೊವಿಡ್-19 ನಿಯಮ ಉಲ್ಲಂಘನೆ?
ರೋಹಿತ್ ಶರ್ಮ, ರಿಷಬ್ ಪಂತ್, ಶುಭ್ಮನ್ ಗಿಲ್, ಪೃಥ್ವಿ ಶಾ ಹಾಗೂ ನವ್ದೀಪ್ ಸೈನಿ ಐಸೋಲೇಷನ್ಗೆ
5:27 pm ಆಸಿಸ್ ಪ್ರವಾಸದಲ್ಲಿರುವ 5 ಭಾರತೀಯ ಕ್ರಿಕೆಟಿಗರನ್ನು ಐಸೋಲೇಷನ್ನಲ್ಲಿ ಇರಿಸಲಾಗಿದೆ. ರೋಹಿತ್ ಶರ್ಮ, ರಿಷಬ್ ಪಂತ್, ಶುಭ್ಮನ್ ಗಿಲ್, ಪೃಥ್ವಿ ಶಾ ಹಾಗೂ ನವ್ದೀಪ್ ಸೈನಿ ಐಸೋಲೇಷನ್ಗೆ ಒಳಗಾಗಿರುವ ಆಟಗಾರರು. ಈ ಐವರು ಕ್ರಿಕೆಟಿಗರು ಮೆಲ್ಬರ್ನ್ನ ರೆಸ್ಟೋರೆಂಟ್ ಒಂದರಲ್ಲಿ ಆಹಾರ ಸ್ವೀಕರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕೊವಿಡ್-19 ನಿಯಮಾವಳಿಗಳನ್ನು ಐದು ಕ್ರಿಕೆಟಿಗರು ಉಲ್ಲಂಘಿಸಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಆರೋಪ ಮಾಡಿತ್ತು. ಇದೀಗ ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ.
#OrangeTheWorld ವುಮೆನ್ ಫಾರ್ ಗ್ಲೋಬಲ್ ಇನಿಷಿಯೇಟಿವ್ಗೆ ಮಾನುಷಿ ಚಿಲ್ಲರ್
5:13 pm ಭಾರತೀಯ ನಟಿ, 2017ರ ಮಿಸ್ ವರ್ಲ್ಡ್ ವಿಜೇತೆ ಮಾನುಷಿ ಚಿಲ್ಲರ್, ಲಿಂಗಾಧಾರಿತ ಹಿಂಸಾಚಾರಗಳ ಬಗ್ಗೆ ಅರಿವು ಮೂಡಿಸುವ ಯುಎಸ್ನ #OrangeTheWorld ವುಮೆನ್ ಫಾರ್ ಗ್ಲೋಬಲ್ ಇನಿಷಿಯೇಟಿವ್ಗೆ ಆಯ್ಕೆಯಾಗಿದ್ದಾರೆ. ವಿವಿಧ ರೀತಿಯಲ್ಲಿ ಹಿಂಸಾಚಾರಕ್ಕೆ ಒಳಗಾಗುವವರ ಪೈಕಿ ಮಹಿಳೆಯರ ಪ್ರಮಾಣವೇ ಹೆಚ್ಚು. ಎಲ್ಲಾ ವಯಸ್ಸಿನ ಮಹಿಳೆಯರೂ ಈ ಬಗ್ಗೆ ನಿರಂತರ ಅಪಾಯದಲ್ಲಿದ್ದಾರೆ. ನಾನೂ ಒಬ್ಬಳು ಮಹಿಳೆಯಾಗಿ ಈ ಬಗ್ಗೆ ಬಹಳ ಬೇಸರವಿದೆ ಎಂದು ಮಾನುಷಿ ಚಿಲ್ಲರ್ ಹೇಳಿದ್ದಾರೆ.
ಯುವತಿಯರಿಗೆ ಮದುವೆ ಆಗುವುದಾಗಿ ಮೋಸ ಮಾಡಿದ ಆರೋಪ: ಚರ್ಚ್ ಪಾಸ್ಟರ್ ಬಂಧನ
4:54 pm ಯುವತಿಯರಿಗೆ ಮದುವೆ ಆಗುವುದಾಗಿ ಮೋಸ ಮಾಡಿದ ಆರೋಪದಲ್ಲಿ ಬಳ್ಳಾರಿ ಚರ್ಚ್ ಪಾಸ್ಟರ್ ರವಿಕುಮಾರ್ ಬಂಧನವಾಗಿದೆ. ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಿಂದ ಚರ್ಚ್ ಪಾಸ್ಟರ್ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡ ಹೋಗಲಾಗಿದೆ.
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಮುಖ್ಯಮಂತ್ರಿಗೆ ಪರಮಾಧಿಕಾರ
ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ
4:52 pm ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುಖ್ಯಮಂತ್ರಿ ಪರಮಾಧಿಕಾರವಾಗಿದೆ. ಆ ಬಗ್ಗೆ ಸಿ.ಎಂ. ಯಡಿಯೂರಪ್ಪ ತೀರ್ಮಾನ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದ್ದಾರೆ. ಕ್ಯಾಪ್ಟನ್ ಆದವರು ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ವಿಕೆಟ್ ಕೀಪಿಂಗ್ ಯಾರು ಮಾಡುತ್ತಾರೆಂದು ನಿರ್ಧಾರ ಮಾಡುತ್ತಾರೆ ಎಂದು ಚಿತ್ರದುರ್ಗದಲ್ಲಿ ಸದಾನಂದ ಗೌಡ ಹೇಳಿದ್ದಾರೆ. ಬೇರೆ ಪಕ್ಷದಿಂದ ಬಂದ ಕೆಲವರಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜೀನಾಮೆ ನೀಡಿ ಪಕ್ಷಕ್ಕೆ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಸೇರಿ ಹಲವರಿಗೆ ಸಮಸ್ಯೆ ಆಗಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಹಿಮಪಾತ
4:47 pm ಹಿಮತುಂಬಿದ ಹಿಮಾಚಲ ಪ್ರದೇಶದ ಭಾಗಗಳು ಕಂಡದ್ದು ಹೀಗೆ.
Himachal Pradesh: Rashel village of Lahaul-Spiti district receives snowfall. pic.twitter.com/Zus8mpf0pl
— ANI (@ANI) January 2, 2021
ಸಿಎಂ ಕುರ್ಚಿ ಅಲುಗಾಡುವ ಕುರ್ಚಿಯಲ್ಲ, ಅದು ಸ್ಥಿರವಾಗಿದೆ
ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು
4:43 pm ಸಿಎಂ ಕುರ್ಚಿ ಅಲುಗಾಡುವ ಕುರ್ಚಿಯಲ್ಲ, ಅದು ಸ್ಥಿರವಾಗಿದೆ. ಕೆಲವರಿಗೆ ತಲೆ ಅಲುಗಾಡಿಸುವಾಗ ಜಗತ್ತೇ ಅಲ್ಲಾಡಿದಂತಾಗುತ್ತದೆ. ಕುರ್ಚಿ ಅಲುಗಾಡಿದಂತೆ ಕಾಣುತ್ತಿರುವುದು ರಾತ್ರಿಯೋ? ಹಗಲೋ? ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಮೊಬೈಲ್ ಶೋ ರೂಂ ಮಾಲೀಕನ ಮೇಲೆ ಹಲ್ಲೆ ಪ್ರಕರಣ: ಆರೋಪಿ ತೌಫೀಕ್ ಪಾಷಾ ಬಂಧನ
ಬಂಧಿತನಿಂದ 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಪೊಲೀಸರು
4:39 pm ಮೊಬೈಲ್ ಶೋ ರೂಂ ಮಾಲೀಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ, ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರಿಂದ ಆರೋಪಿ ತೌಫೀಕ್ ಪಾಷಾ ಅಲಿಯಾಸ್ ತೌಫೀಕ್ ಸೆರೆಯಾಗಿದ್ದಾನೆ. ನವೆಂಬರ್ 25ರಂದು ಗಾಂಧಿನಗರದ ಮೊಬೈಲ್ ಶೋರೂಂಗೆ ಹೋಗಿದ್ದ ತೌಫೀಕ್, ಹೆಡ್ಫೋನ್ ಕೇಳಿದ್ದಾನೆ, ಇಲ್ಲ ನಾಳೆ ಬನ್ನಿ ಎಂದಿದ್ದಕ್ಕೆ ಗಲಾಟೆ ನಡೆಸಿದ್ದಾನೆ. ಬಳಿಕ, ಅಂಗಡಿಯವನ ಮೇಲೆ ಹಲ್ಲೆ ಮಾಡಿ ಬ್ಲೂಟೂತ್ ಕಸಿದು ಪರಾರಿಯಾಗಿದ್ದಾನೆ. ಈ ಕೇಸ್ನಲ್ಲಿ ತೌಫೀಕ್ ಬಂಧಿಸಿದ ವೇಳೆ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ. ಸರಗಳ್ಳತನ, ಮನೆಗಳ್ಳತನ ಮಾಡಿರುವ ಬಗ್ಗೆ ತೌಫೀಕ್ ತಪ್ಪೊಪ್ಪಿಗೆ ಮಾಡಿದ್ದಾನೆ. ಒಟ್ಟು 3 ಸರಗಳ್ಳತನ ಹಾಗೂ 2 ಕನ್ನ ಕಳವು ಕೇಸ್ ಬೆಳಕಿಗೆ ಬಂದಿದ್ದು, ಬಂಧಿತನಿಂದ 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿಮಾಡಲಾಗಿದೆ.
ನೆಲಮಂಗಲದಲ್ಲಿ 10 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ
4:17 pm ನೆಲಮಂಗಲದ ಖಾಸಗಿ ನರ್ಸಿಂಗ್ ಕಾಲೇಜಿನ 10 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿದೆ. ಕಾಲೇಜು ಆರಂಭ ಹಿನ್ನೆಲೆಯಲ್ಲಿ ಕೇರಳದಿಂದ ವಾಪಸಾಗಿದ್ದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊವಿಡ್-19 ಸೋಂಕು ಖಚಿತವಾಗಿದೆ. 10 ನರ್ಸಿಂಗ್ ವಿದ್ಯಾರ್ಥಿಗಳ ಪೈಕಿ ಮೂವರು ನಿನ್ನೆ ಡಿಸ್ಚಾರ್ಜ್ ಆಗಿದ್ದರು. ಉಳಿದ 7 ಮಂದಿಗೆ ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೆತ್ತವರ ಜೊತೆ ಜೈಲು ಸೇರಿದ್ದ 3 ವರ್ಷದ ಬಾಲಕಿ ಸಾವು
4:15 pm ಹೆತ್ತವರ ಜೊತೆ ಜೈಲು ಸೇರಿದ್ದ 3 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ, ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. 3 ವರ್ಷದ ಬಾಲಕಿ ಜೈಲಿನಲ್ಲಿ ಅನಾರೋಗ್ಯದಿಂದ ಸಾವಿಗೀಡಾಗಿದ್ದಾಳೆ. ಸಂಗೀತಾ, ರವಿ ತಳವಾರ್ ದಂಪತಿ ಪುತ್ರಿ ಭಾರತಿ(3) ಮೃತ ದುರ್ದೈವಿ. ಗ್ರಾಮ ಪಂಚಾಯತಿ ಚುನಾವಣೆ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿತ್ತು. ರವಿ ತಳವಾರ್, ಶರಣಪ್ಪ ತಳವಾರ್ ಕುಟುಂಬದ ನಡುವೆ ಜಗಳವಾಗಿತ್ತು. ಈ ಬಗ್ಗೆ, ಜೇವರ್ಗಿ ಠಾಣೆಯ ಪೊಲೀಸರು 10 ಜನರನ್ನು ಬಂಧಿಸಿದ್ದರು. ಡಿಸೆಂಬರ್ 31ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಹೆತ್ತವರು, ಬಾಲಕಿ ಸಾವಿಗೆ ಜೇವರ್ಗಿ ಪೊಲೀಸರೇ ಕಾರಣ ಎಂದು ಆರೋಪಿಸಿದ್ದಾರೆ.
ಗಂಗೂಲಿ ಆರೋಗ್ಯದ ಬಗ್ಗೆ ವುಡ್ಲ್ಯಾಂಡ್ಸ್ ಆಸ್ಪತ್ರೆ ಮುಖ್ಯಸ್ಥೆ ಡಾ. ರೂಪಾಲಿ ಬಸು ಮಾಹಿತಿ
4:04 pm ಸೌರವ್ ಗಂಗೂಲಿ ಹಿಮೋಡೈನಮಿಕ್ ಸ್ಥಿರವಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಪ್ರಾಥಮಿಕ ಆಂಜಿಯೋಪ್ಲಾಸ್ಟಿಗೆ ಗಂಗೂಲಿ ಒಳಗಾಗಲಿದ್ದಾರೆ ಎಂದು ವುಡ್ಲ್ಯಾಂಡ್ಸ್ ಆಸ್ಪತ್ರೆಯ ಮುಖ್ಯಸ್ಥೆ ಡಾ. ರೂಪಾಲಿ ಬಸು ಮಾಹಿತಿ ನೀಡಿದ್ದಾರೆ.
ಜಾಗತಿಕ ನಾಯಕರ ಪೈಕಿ ಮೋದಿಗೆ ಅತಿ ಹೆಚ್ಚು ರೇಟಿಂಗ್
3:59 pm ಆಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಕಂಪೆನಿ ನಡೆಸಿದ ಗಣತಿಯಲ್ಲಿ ಮೋದಿಗೆ ಅತಿ ಹೆಚ್ಚಿನ ರೇಟಿಂಗ್ ಸಿಕ್ಕಿರುವ ಬಗ್ಗೆ, ಕೇಂದ್ರ ವಾರ್ತಾ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟಲಿಜೆನ್ಸ್ ಸಂಸ್ಥೆಯಿಂದ 13 ದೇಶದ ನಾಯಕರ ಜನಪ್ರಿಯತೆಯ ಸರ್ವೆ ನಡೆಸಲಾಗಿತ್ತು. ಅದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚು (ಶೇ. 55ರಷ್ಟು) ರೇಟಿಂಗ್ ಪಡೆದಿದ್ದಾರೆ. ಆಸ್ಟ್ರೇಲಿಯಾ, ಆಮೆರಿಕಾ, ಇಂಗ್ಲೆಂಡ್, ಜರ್ಮನ್, ಫ್ರಾನ್ಸ್ ಮೊದಲಾದ ಜಾಗತಿಕ ನಾಯಕರ ಪೈಕಿ ಮೋದಿಗೆ ಅತಿ ಹೆಚ್ಚು ಅಪ್ರೂವಲ್ ರೇಟಿಂಗ್ ದೊರಕಿದೆ.
ಮಕರ ಸಂಕ್ರಾತಿಗೆ ಕೊರೊನಾ ಸೋಂಕಿಗೆ ಲಸಿಕೆ ಸಿಗಲಿದೆ
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ
3:48 pm ಮಕರ ಸಂಕ್ರಾತಿಗೆ ಕೊರೊನಾ ಸೋಂಕಿಗೆ ಲಸಿಕೆ ಸಿಗಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಸಂಕ್ರಾಂತಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
ಮುಂಬೈನಲ್ಲಿ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ
ಒಂದು ಕೆಜಿಯಷ್ಟು ಮಾದಕ ವಸ್ತು ವಶ, ನಾಲ್ವರು ಡ್ರಗ್ ಪೆಡ್ಲರ್ಗಳ ಬಂಧನ
3:45 pm ಮುಂಬೈನ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನಗರದ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ನಾಲ್ವರು ಡ್ರಗ್ ಪೆಡ್ಲರ್ಗಳನ್ನೂ ಬಂಧಿಸಿದೆ. ಹೊಸ ವರ್ಷದ ಸಂಜೆಯ ಬಳಿಕ ಈವರೆಗೆ, NCB ಕೈಗೊಂಡ ಕಾರ್ಯಾಚರಣೆಯಲ್ಲಿ ಇಷ್ಟು ಮಾದಕ ವಸ್ತುಗಳು ವಶವಾಗಿರುವ ಬಗ್ಗೆ NCB ಜೋನಲ್ ನಿರ್ದೇಶಕ ಸಮೀರ್ ವಾಂಖೆಡೆ ಮಾಹಿತಿ ನೀಡಿದ್ದಾರೆ.
A team of Narcotics Control Bureau (NCB) Mumbai conducted searches at various locations in the city since New Year Eve & seized 100 gms Mephedrone, 1.034 kgs of Psychotropic medicines from 4 drug peddlers: Sameer Wankhede, NCB Zonal Director. #Maharashtra pic.twitter.com/37vGrZFgpZ
— ANI (@ANI) January 2, 2021
ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿ ADGP ಸೀಮಂತ್‌ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ
3:38 pm ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿ ADGP ಸೀಮಂತ್‌ಕುಮಾರ್ ಸಿಂಗ್ ಅಧಿಕಾರ ಸ್ವೀಕರಿಸಿದ್ದಾರೆ. IGP ಹುದ್ದೆಯಿಂದ ಎಡಿಜಿಪಿಯಾಗಿ ಮುಂಬ್ತಡಿ ಪಡೆದಿದ್ದ ಸೀಮಂತ್‌ಕುಮಾರ್ ಸಿಂಗ್ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿ ಅಧಿಕಾರ ಪಡೆದಿದ್ದಾರೆ.
2023ಕ್ಕೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದ ಹೆಚ್.ಡಿ.ರೇವಣ್ಣ
3:35 pm 2023ಕ್ಕೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಹೆಚ್.ಡಿ. ದೇವೇಗೌಡರ ಸಮ್ಮುಖದಲ್ಲೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಜೆಡಿಎಸ್ನ್ನು ಅಧಿಕಾರಕ್ಕೆ ತರದಿದ್ದರೆ ನಾನು ಅಧಿಕಾರದಲ್ಲಿ ಇರುವುದಿಲ್ಲ ಎಂದು ಹಾಸನ ನಗರದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿಕೆ ನೀಡಿದ್ದಾರೆ.
ಅಸ್ಸಾಂನಲ್ಲಿ ಹೈಸ್ಕೂಲ್ ಪರೀಕ್ಷೆಗೆ ದಿನಾಂಕ ನಿಗಧಿ
3:31 pm ಹೈಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (HSLC) ಪರೀಕ್ಷೆಗಳನ್ನು ಮೇ 11ರಿಂದ ಹಾಗೂ ಪ್ರೌಢ ಶಾಲಾ ಪರೀಕ್ಷೆಗಳನ್ನು ಮೇ 12ರಿಂದ ನಡೆಸುವುದಾಗಿ ಅಸ್ಸಾಂ ಸಚಿವ ಹಿಮಂತ ಬಿಸ್ವಾ ಸರ್ಮ ಮಾಹಿತಿ ನೀಡಿದ್ದಾರೆ. ಪರೀಕ್ಷೆಯ ಫಲಿತಾಂಶವನ್ನು ಜುಲೈ 7 ಹಾಗೂ ಜುಲೈ 30ರ ಒಳಗಾಗಿ ಪ್ರಕಟಿಸುವುದಾಗಿ ಸಚಿವರು ತಿಳಿಸಿದ್ದಾರೆ.
ಇಂದೋರ್ನಲ್ಲಿ ಲಘು ಭೂಕಂಪನ
ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆ ದಾಖಲು
3:23 pm ಮಧ್ಯಪ್ರದೇಶದ ಇಂಧೋರ್ನಲ್ಲಿ ಲಘುಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆ ದಾಖಲಾಗಿದೆ. ಈ ಬಗ್ಗೆ ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ (NCS) ಮಾಹಿತಿ ನೀಡಿದ್ದಾರೆ.
ಬಿಜೆಪಿಯ ಕೊವಿಡ್-19 ಲಸಿಕೆಯನ್ನು ನಾನು ಸ್ವೀಕರಿಸುವುದಿಲ್ಲ ಎಂದ ಅಖಿಲೇಶ್ ಯಾದವ್
3:17 pm ಬಿಜೆಪಿ ಲಸಿಕೆಯ ಮೇಲೆ ಹೇಗೆ ನಂಬಿಕೆ ಇಡಲಿ. ಬಿಜೆಪಿಯ ಕೊವಿಡ್-19 ಲಸಿಕೆಯನ್ನು ನಾನು ಸ್ವೀಕರಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇಂದು ಹೇಳಿಕೆ ನೀಡಿದ್ದಾರೆ.
I am not going to get vaccinated for now. How can I trust BJP's vaccine, when our government will be formed everyone will get free vaccine. We cannot take BJP's vaccine: Samajwadi Party chief Akhilesh Yadav#COVID19 pic.twitter.com/qnmGENzUBH
— ANI UP (@ANINewsUP) January 2, 2021
ಮಾದಕ ವಸ್ತು ಹೊಂದಿದ್ದ ಇಬ್ಬರು ಝಾಂಬಿಯಾ ಪ್ರಜೆಗಳ ಬಂಧನ
22 ಕೋಟಿ ಬೆಲೆ ಬಾಳುವ, 5.350 ಕೆಜಿಯಷ್ಟು ಹೆರಾಯಿನ್ ವಶಪಡಿಸಿಕೊಂಡ NCB
3:12 pm ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB), ಇಬ್ಬರು ಝಾಂಬಿಯಾ ದೇಶದ ಪ್ರಜೆಗಳನ್ನು ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಬಂಧಿತರಿಂದ 22 ಕೋಟಿ ಬೆಲೆ ಬಾಳುವ, 5.350 ಕೆಜಿಯಷ್ಟು ಹೆರಾಯಿನ್ (ಮಾದಕ ವಸ್ತುಗಳನ್ನು) ವಶಪಡಿಸಿಕೊಳ್ಳಲಾಗಿದೆ.
ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಚಿವ ಡಾ.ಸುಧಾಕರ್ ಕ್ಲಾಸ್
3:04 pm ಕೊರೊನಾ ಲಸಿಕಾ ಕೇಂದ್ರ ಪರಿಶೀಲಿಸಿದ ಆರೋಗ್ಯ ಸಚಿವ ಸುಧಾಕರ್, ಲಸಿಕೆ ಪಡೆದವರ ಮೊಬೈಲ್ ಸಂಖ್ಯೆ ಸಂಗ್ರಹಿಸದ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಲಹಂಕ ಸರ್ಕಾರಿ ಆಸ್ಪತ್ರೆಗೆ ಸಚಿವ ಡಾ.ಸುಧಾಕರ್ ಭೇಟಿ ನೀಡಿ, ಆಸ್ಪತ್ರೆಯ 3ನೇ ಮಹಡಿಯಲ್ಲಿ ತೆರೆದಿರುವ ವ್ಯಾಕ್ಸಿನ್ ಕೇಂದ್ರವನ್ನು ಪರಿಶೀಲನೆ ನಡೆಸಿದ್ದಾರೆ. ಕೊರೊನಾ ಲಸಿಕೆ ಡ್ರೈ ರನ್ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ. ಲಸಿಕೆ ಪಡೆದವರ ಮೊಬೈಲ್ ಸಂಖ್ಯೆ ಸಂಗ್ರಹಿಸದ್ದಕ್ಕೆ ಸಿಬ್ಬಂದಿಗಳಿಗೆ ತಿಳಿಹೇಳಿದ್ದಾರೆ. ಉಳಿದವರ ಮೊಬೈಲ್ ನಂಬರ್ ಸಂಗ್ರಹಿಸುವಂತೆ ಸೂಚನೆ ನೀಡಿದ್ದಾರೆ.
26/11 ಮುಂಬೈ ಉಗ್ರರ ದಾಳಿ ಮಾಸ್ಟರ್ಮೈಂಡ್ ಝಕಿ ಉರ್ ರೆಹಮಾನ್ ಲಖ್ವಿ ಬಂಧನ
2:58 pm 26/11 ಮುಂಬೈನಲ್ಲಿ ನಡೆದ ಉಗ್ರರ ದಾಳಿಯ ಮಾಸ್ಟರ್ಮೈಂಡ್ ಆಗಿದ್ದ, ಝಕಿ ಉರ್ ರೆಹಮಾನ್ ಲಖ್ವಿ ಎಂಬವನನ್ನು ಪಾಕ್ ಬಂಧಿಸಿದೆ. ಲಷ್ಕರ್-ಎ-ತೊಯ್ಬಾ ಸಂಘಟನೆ ಭಯೋತ್ಪಾದಕನಾಗಿದ್ದ ಲಖ್ವಿ, ಮುಂಬೈ ದಾಳಿಯ ರೂವಾರಿಯಾಗಿದ್ದ. ಅಂತಾರಾಷ್ಟ್ರೀಯ ಒತ್ತಡ ಹಿನ್ನೆಲೆಯಲ್ಲಿ ಆತನನ್ನು ಪಾಕ್ ಬಂಧಿಸಿದೆ.
ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತ ಆತ್ಮಹತ್ಯೆ
2:54 pm ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತ ಕಾಸ್ಮೀರ್ ಸಿಂಗ್(75), ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿ-ಉತ್ತರಪ್ರದೇಶದ ಗಡಿಯಲ್ಲಿರುವ ಘಾಜಿಪುರ್ ಎಂಬಲ್ಲಿ ರೈತ ನೇಣಿಗೆ ಶರಣಾಗಿದ್ದಾರೆ. ಘಾಜಿಪುರ್‌ನ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಾಮರಾಜನಗರಕ್ಕೆ ಸಿ.ಎಂ. ಆಗಮಿಸುವಂತೆ ವಾಟಾಳ್ ನಾಗರಾಜ್ ಆಗ್ರಹ
2:51 pm ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದೂವರೆ ವರ್ಷಗಳಿಂದ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬಂದಿಲ್ಲ ಎಂದು ಆರೋಪಿಸಿ, ಚಾಮರಾಜನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ಶೀಘ್ರದಲ್ಲಿಯೇ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬರಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಸಿ.ಎಂ. ಬಾರದೆ ಇದ್ದರೆ ಹೈಕೋರ್ಟ್ ಮೆಟ್ಟಿಲೇರುವುದಾಗಿ ವಾಟಾಳ್ ಎಚ್ಚರಿಕೆ ನೀಡಿದ್ದಾರೆ.
ಗೋವಾ ‘ಬನಾನ ರಿಪಬ್ಲಿಕ್’ ಅಲ್ಲ ಎಂದ ಆರೋಗ್ಯ ಸಚಿವ
2:45 pm ಗೋವಾದಲ್ಲಿ ಪ್ರವಾಸಿಗರ ದಂಡು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೊವಿಡ್-19 ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮನವಿ ಮಾಡಿದ್ದಾರೆ. ಸಾಮಾಜಿಕ ಅಂತರ, ಮುಖಗವಸು ಬಳಸಿಕೊಳ್ಳುವಂತೆ ಸಚಿವರು ಜನರನ್ನು ಕೇಳಿಕೊಂಡಿದ್ದಾರೆ. ಬೇಕಾಬಿಟ್ಟಿ ಅಲೆದಾಡಲು ಗೋವಾ, ಬನಾನ ರಿಪಬ್ಲಿಕ್ ಅಲ್ಲ ಎಂದು ಹೇಳಿದ್ದಾರೆ. ‘ಬನಾನ ರಿಪಬ್ಲಿಕ್’ ಎಂಬುದು ಅಮೆರಿಕಾ ಮೂಲದ ವಸ್ತ್ರದ ಮಳಿಗೆಯಾಗಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಹೃದಯಾಘಾತ
2:32 pm ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಹೃದಯಾಘಾತವಾಗಿದೆ. ಸೌರವ್ ಗಂಗೂಲಿ ಜಿಮ್‌ನಲ್ಲಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕೋಲ್ಕತ್ತಾದ ವುಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿರುವ ಗಂಗೂಲಿಗೆ ವೈದ್ಯರು ಸಂಜೆಯೊಳಗೆ ಆಂಜಿಯೋಪ್ಲಾಸ್ಟಿ ನಡೆಸಲಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಟಿ.ಎಂ. ವಿಜಯ ಭಾಸ್ಕರ್ ಬೀಳ್ಕೊಡುಗೆ ಸಮಾರಂಭ
2:25 pm ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಟಿ.ಎಂ. ವಿಜಯ ಭಾಸ್ಕರ್ ಅವರ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಅಭಿನಂದನಾ ಸಮಾರಂಭ. ಈ ಎರಡೂ ಕಾರ್ಯಕ್ರಮಗಳು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಒಟ್ಟಿಗೆ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದಿಂದ ಎರಡೂ ಕಾರ್ಯಕ್ರಮಗಳನ್ನು ಒಟ್ಟಾಗಿ ಆಯೋಜನೆ ಮಾಡಲಾಗಿದೆ.
ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಖಾಲಿ ಇಲ್ಲದ ಹುದ್ದೆ ಬಗ್ಗೆ ಚರ್ಚೆ ಬೇಡ
ಹುಬ್ಬಳ್ಳಿಯಲ್ಲಿ ಶೆಟ್ಟರ್ ಹೇಳಿಕೆ
2:21 pm ಸಂಕ್ರಾಂತಿ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಖಾಲಿ ಇಲ್ಲದ ಹುದ್ದೆಯ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ಹುಬ್ಬಳ್ಳಿಯಲ್ಲಿ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ. ಇನ್ನೂ ಎರಡೂವರೆ ವರ್ಷ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ.
ಹಿಮದಿಂದ ಆವೃತ್ತವಾದ ರೊಹ್ಟಾಂಗ್ ಸುರಂಗಮಾರ್ಗ
2:17 pm ಹಿಮಾಚಲ ಪ್ರದೇಶದ ಲಹಾವುಲ್-ಸ್ಪಿಟಿ ಜಿಲ್ಲೆಯ ರೊಹ್ಟಾಂಗ್ ಟನಲ್ ಹಿಮದಿಂದ ಆವೃತ್ತವಾಗಿದೆ. ಅಟಲ್ ರೊಹ್ಟಾಂಗ್ ಸುರಂಗಮಾರ್ಗವನ್ನು ಪ್ರಧಾನಿ ಮೋದಿ ಅಕ್ಟೋಬರ್ 3ರಂದು ಲೋಕಾರ್ಪಣೆಗೊಳಿಸಿದ್ದರು.
Himachal Pradesh: North portal of Rohtang Tunnel in Lahaul-Spiti district covered with a sheet of snow. pic.twitter.com/0PcBuFgT90
— ANI (@ANI) January 2, 2021
ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲು
2:05 pm ಬಿಸಿಸಿಐ ಅಧ್ಯಕ್ಷ, ಭಾರತೀಯ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಕೋಲ್ಕತ್ತಾದ ವುಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
BCCI President Sourav Ganguly admitted to Woodland Hospital in Kolkata, West Bengal. More details awaited.
(file photo) pic.twitter.com/ps3mtE8tPJ
— ANI (@ANI) January 2, 2021
ಅರುಣ್ ಸಿಂಗ್ ಜೊತೆ ಯಡಿಯೂರಪ್ಪ ಶಿವಮೊಗ್ಗಕ್ಕೆ ಆಗಮನ
1:57 pm ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್. ಅರುಣ್ಜ ಸಿಂಗ್ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಹೆಲಿಪ್ಯಾಡ್ನಲ್ಲಿ ಅದ್ಧೂರಿ ಸ್ವಾಗತ ಪಡೆದ ಬಿಜೆಪಿ ನಾಯಕರು, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗಣರಾಜ್ಯೋತ್ಸವ ದಿನದಂದು ರೈತರಿಂದ ‘ಟ್ರಾಕ್ಟರ್ ಕಿಸಾನ್ ಪರೇಡ್’
1:55 pm ಜನವರಿ 26ರಂದು ರೈತರು ‘ಟ್ರಾಕ್ಟರ್ ಕಿಸಾನ್ ಪರೇಡ್’ ನಡೆಸುವುದಾಗಿ ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ, ದರ್ಶನ್ ಪಾಲ್ ಹೇಳಿದ್ದಾರೆ. ಜನವರಿ 23ರಂದು ವಿವಿಧ ರಾಜ್ಯಗಳ ರಾಜ್ಯಪಾಲರ ನಿವಾಸಕ್ಕೆ ಪಾದಯಾತ್ರೆ ನಡೆಸುವುದಾಗಿಯೂ ದರ್ಶನ್ ಪಾಲ್ ತಿಳಿಸಿದ್ದಾರೆ.
On 23rd January, we will hold marches towards Governors' Houses in different States, and 'tractor Kisan Parade' will be held on 26th January in Delhi: Krantikari Kisan Union President Darshan Pal#FarmLaws pic.twitter.com/y9h3oPmL0Z
— ANI (@ANI) January 2, 2021
ಉಚಿತ ಲಸಿಕೆ ನೀಡುವ ಬಗ್ಗೆ ಚರ್ಚಿಸಿ ನಿರ್ಧಾರ: ಕೇಂದ್ರ ಆರೋಗ್ಯ ಸಚಿವರ ಟ್ವೀಟ್
1:42 pm ‘ದೇಶದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುತ್ತೇವೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಇದೀಗ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಉಚಿತವಾಗಿ ಕೊರೊನಾ ಲಸಿಕೆ ನೀಡುತ್ತೇವೆಂದು ಹೇಳಿದ ಬಳಿಕ, ಟ್ವೀಟ್ ಮಾಡಿರುವ ಡಾ.ಹರ್ಷವರ್ಧನ್, ದೇಶದಲ್ಲಿ ಮೊದಲ ಹಂತದಲ್ಲಿ ಉಚಿತವಾಗಿ ಲಸಿಕೆ ಹಂಚಿಕೆ ನೀಡಲಾಗುವುದು. ದೇಶದ 2 ಕೋಟಿ ಫ್ರಂಟ್‌ಲೈನ್ ಕಾರ್ಯಕರ್ತರು ಹಾಗೂ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಉಚಿತ ಲಸಿಕೆ ನೀಡಲಾಗುವುದು. ಉಳಿದ 27 ಕೋಟಿ ಲಸಿಕೆಯನ್ನು ಆದ್ಯತೆ ಮೇರೆಗೆ ನೀಡಲು ಚರ್ಚೆ ನಡೆಸಲಾಗುವುದು. ಚರ್ಚೆ ನಡೆಸಿ ಲಸಿಕೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬರೆದುಕೊಂಡಿದ್ದಾರೆ.
In 1st phase of #COVID19Vaccination free #vaccine shall be provided across the nation to most prioritised beneficiaries that incl 1 crore healthcare & 2 crore frontline workersDetails of how further 27 cr priority beneficiaries are to be vaccinated until July are being finalised pic.twitter.com/K7NrzGrgk3
— Dr Harsh Vardhan (@drharshvardhan) January 2, 2021
ಕೊವಿಡ್ ಲಸಿಕೆಗಳಿಗೆ ಒಪ್ಪಿಗೆ ನೀಡುವ ಬಗ್ಗೆ ಇಂದು SEC ಸಭೆ
1:31 pm ಕೊವಿಡ್ ಲಸಿಕೆಗಳಿಗೆ ಒಪ್ಪಿಗೆ ನೀಡುವ ಬಗ್ಗೆ, ಇಂದು ಮಧ್ಯಾಹ್ನ 1.30ಕ್ಕೆ SEC (ಸಬ್ಜೆಕ್ಟ್ ಎಕ್ದ್ಪರ್ಟ್ ಸಮಿತಿ) ಮಹತ್ವದ ಸಭೆ ನಡೆಸಲಿದೆ. ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಸೇರಿ ಇತರೆ ಲಸಿಕೆ ನೀಡುವ ಬಗ್ಗೆ ಇಂದು ಚರ್ಚೆಯಾಗಲಿದೆ. ಹಿಂದಿನ ಸಭೆಯಲ್ಲಿ ಲಸಿಕೆಯ ಸುರಕ್ಷತೆ, ಪರಿಣಾಮಕಾರಿತ್ವದ ಬಗ್ಗೆ ತಜ್ಞರು ಹೆಚ್ಚುವರಿ ಮಾಹಿತಿ ಕೇಳಿದ್ದರು. ಇಂದಿನ ಸಭೆಯಲ್ಲಿ ಹೆಚ್ಚುವರಿ ಮಾಹಿತಿ ಸಲ್ಲಿಸುವ ಸಾಧ್ಯತೆಯಿದೆ. ಸಭೆ ಬಳಿಕ SEC, ಲಸಿಕೆಯನ್ನು DCGIಗೆ ಶಿಫಾರಸು ಮಾಡಲಿದೆ. SEC ಶಿಫಾರಸು ಆಧರಿಸಿ DCGI (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಬ್ರಿಟನ್‌ನಿಂದ ಬರುವ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ
12:58 pm ಜನವರಿ 8ರಿಂದ ಬ್ರಿಟನ್ ವಿಮಾನಗಳು ಭಾರತಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ, ಬ್ರಿಟನ್‌ನಿಂದ ಬರುವ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಬ್ರಿಟನ್‌ನಿಂದ ಬಂದವರಿಗೆ ಆರ್ಟಿಪಿಸಿಆರ್ ಪರೀಕ್ಷೆ ಹಾಗೂ ಕೊವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯಗೊಳಿಸಿದೆ. ಜೊತೆಗೆ, ಪ್ರಯಾಣಿಕರು ಬ್ರಿಟನ್‌ನಿಂದ ಭಾರತಕ್ಕೆ ಬಂದ ಬಳಿಕ 14 ದಿನ ಹೋಂ ಕ್ವಾರಂಟೈನ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ಸೂಚಿಸಿದೆ.
ಗದಗ ಜಿಲ್ಲೆಯಲ್ಲಿ 10 ಶಿಕ್ಷಕರಿಗೆ ಕೊರೊನಾ ಪಾಸಿಟಿವ್
12:52 pm ಗದಗ ಜಿಲ್ಲೆಯಲ್ಲಿ 10 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಆಗಿದೆ. ಶಾಲೆ ಆರಂಭಕ್ಕೂ ಮುನ್ನ ಶಿಕ್ಷಕರು ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದರು. ನಿನ್ನೆಯ ವರದಿಯಲ್ಲಿ 10 ಜನ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ 9 ಜನ ಶಿಕ್ಷಕರಿಗೆ ಕೊರೊನಾ ದೃಡವಾದರೆ, ನರಗುಂದ ತಾಲೂಕಿನಲ್ಲಿ ಓರ್ವ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಬಗ್ಗೆ, ಡಿಡಿಪಿಐ ಜಿ.ಎಂ. ಬಸಲಿಂಗಪ್ಪ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ದೇಶದ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುತ್ತೇವೆ
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸ್ಪಷ್ಟನೆ
12:47 pm ದೇಶದ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುತ್ತೇವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸ್ಪಷ್ಟನೆ ನೀಡಿದ್ದಾರೆ. ದೆಹಲಿಯಲ್ಲಿ ಮಾತ್ರವಲ್ಲ, ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಅವರು ಹೇಳಿದ್ದಾರೆ. ಈ ಮೊದಲು, 30 ಕೋಟಿ ಜನರಿಗೆ ಮಾತ್ರ ಉಚಿತ ಲಸಿಕೆ ನೀಡುವುದಾಗಿ, ಕೊರೊನಾ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್ ಹೇಳಿಕೆ ನೀಡಿದ್ದರು. ವಿ.ಕೆ.ಪೌಲ್ ಹೇಳಿಕೆಯಿಂದ ಗೊಂದಲ ಉಂಟಾಗಿತ್ತು. ಇದೀಗ, ಗೊಂದಲಕ್ಕೆ ತೆರೆ ಎಳೆದಿರುವ ಆರೋಗ್ಯ ಸಚಿವ ಹರ್ಷವರ್ಧನ್, ಉಚಿತವಾಗಿ ಲಸಿಕೆ ನೀಡುವುದಾಗಿ ಪ್ರಧಾನಿ ಸಹ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
2 ವರ್ಷಗಳ ಬಳಿಕ ಬಿಗ್ ಸ್ಕ್ರೀನ್ನಲ್ಲಿ ಮಿಂಚಲಿದ್ದಾರೆ ಬಾಲಿವುಡ್ ಬಾದ್ ಶಾ
ಶಾರುಕ್ ಖಾನ್ ಹೊಸ ಸಿನಿಮಾದ ಬಗ್ಗೆ ಟ್ವಿಟರ್ನಲ್ಲಿ ಕುತೂಹಲ ವ್ಯಕ್ತಪಡಿಸಿದ ಅಭಿಮಾನಿಗಳು
12:43 pm ಶಾರುಕ್ ಖಾನ್, 2018ರ ಡಿಸೆಂಬರ್ ಬಳಿಕ ಮತ್ತೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಸೂಚನೆ ನೀಡಿದ್ದಾರೆ. ‘ಝೀರೋ’ ಸಿನಿಮಾ ನಂತರ ಯಾವ ಚಿತ್ರದಲ್ಲೂ ಶಾರುಕ್ ಕಾಣಿಸಿಕೊಂಡಿರಲಿಲ್ಲ. ಇದೀಗ, ಎರಡು ವರ್ಷಗಳ ಬಳಿಕ ಶಾರುಕ್ ಖಾನ್ ಮತ್ತೆ ಸಿನಿಮಾ ಪರದೆಯಲ್ಲಿ ಕಾಣಿಸಿಕೊಳ್ಳಲಿರು ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಪಠಾಣ್’ ಎಂಬ ಚಿತ್ರದ ಮೂಲಕ, ಬಾಲಿವುಡ್ ಬಾದ್ ಶಾ ತೆರೆಯ ಮೇಲೆ ಬರಲಿದ್ದಾರೆ ಎಂದು ಟ್ವೀಟಿಗರು ಪ್ರತಿಕ್ರಿಯೆ ನೀಡಿ, ಸಂತಸ ವ್ಯಕ್ತಪಡಿಸಿದ್ದಾರೆ.
Here's wishing you all a safe, happy and prosperous 2021… pic.twitter.com/COgpPzPEQJ
— Shah Rukh Khan (@iamsrk) January 2, 2021
ಬ್ರಿಟನ್‌ನಿಂದ ಬಂದ 42 ಜನರಿಗೆ ಕೊರೊನಾ ದೃಢವಾಗಿದೆ
12:42 pm ಬ್ರಿಟನ್‌ನಿಂದ ಬಂದ 42 ಜನರಿಗೆ ಕೊರೊನಾ ದೃಢವಾಗಿದೆ. ಈ ಪೈಕಿ ರಾಜ್ಯದ 10 ಜನರಿಗೆ ರೂಪಾಂತರಿ ಕೊರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಕೊವಿಡ್ ಲಸಿಕೆ ವಿತರಣಾ ತಾಲೀಮು ಕುರಿತಾಗಿ, ಬೆಂಗಳೂರಿನಲ್ಲಿ ಮಾತನಾಡಿದ ಸುಧಾಕರ್ ಈ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ಗೆ ಯತ್ನಾಳ್ ವಿರುದ್ಧ ದೂರು
12:39 pm ಯತ್ನಾಳ್ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕುವ ಬಗ್ಗೆ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ಗೆ ದೂರು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಬಿಜೆಪಿ ನಾಯಕರಿಂದ ಅರುಣ್ ಸಿಂಗ್‌ಗೆ ದೂರು ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ, ಅರುಣ್ ಸಿಂಗ್ ಸೂಚನೆ ನೀಡುವ ಸಾಧ್ಯತೆ ಇದೆ. ಯತ್ನಾಳ್ ಮಾತಿಗೆ ಕಡಿವಾಣ ಹಾಕುವಂತೆ ತಿಳಿಸಲು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಹೀಗಾಗಿ ಯತ್ನಾಳ್ ಮಾತಿಗೆ ಕಡಿವಾಣ ಬೀಳುವ ಸಾಧ್ಯತೆ ಊಹಿಸಲಾಗಿದೆ.
ಬೆಳಗಾವಿಯಲ್ಲಿ ಕೊರೊನಾ ಲಸಿಕೆ ಡ್ರೈ ರನ್ ಪ್ರಕ್ರಿಯೆ ಮುಕ್ತಾಯ
ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಡ್ರೈ ರನ್ ಯಶಸ್ವಿ
12:21 pm ಬೆಳಗಾವಿ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಡ್ರೈ ರನ್ ಪ್ರಕ್ರಿಯೆ ಮುಕ್ತಾಯವಾಗಿದೆ. 25 ಆರೋಗ್ಯ ಕಾರ್ಯಕರ್ತ ಫಲಾನುಭವಿಗಳಿಗೆ ಯಶಸ್ವಿ ಕೊರೊನಾ ಲಸಿಕೆ ಡ್ರೈ ರನ್ ನಡೆಸಲಾಗಿದೆ. ಬೆಳಗ್ಗೆ 9 ಗಂಟೆಗೆ ಆರಂಭವಾಗಿದ್ದ ಕೊರೊನಾ ಲಸಿಕೆ ನೀಡುವ ತಾಲೀಮು ಇದೀಗ ಮುಕ್ತಾಯವಾಗಿದೆ.
ಪಾಕಿಸ್ತಾನದಿಂದ ಅಪ್ರಚೋದಿತ ದಾಳಿ
12:18 pm ನಿನ್ನೆ (ಜ.1) ಸಂಜೆ 6.35ರಿಂದ 8 ಗಂಟೆಯವರೆಗೆ, ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಜಮ್ಮು ಭಾಗದಲ್ಲಿ ಈ ದಾಳಿ ನಡೆದಿರುವ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ, ಭಾರತೀಯ ಗಡಿ ಭದ್ರತಾ ಪಡೆ ಸೂಕ್ತ ಪ್ರತೀಕಾರ ಕೈಗೊಂಡಿದೆ ಎಂದೂ ಮೂಲಗಳು ತಿಳಿಸಿವೆ.
ಪೊಲೀಸ್ ಪೇದೆಯಿಂದ ರೈಲು ಹಳಿಯಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ
ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ 60 ವರ್ಷದ ವ್ಯಕ್ತಿ
12:08 pm ರೈಲು ಹಳಿಯಲ್ಲಿ ಸಿಲುಕಿದ್ದ 60 ವರ್ಷದ ವ್ಯಕ್ತಿಯನ್ನು ಪೊಲೀಸ್ ಪೇದೆ ರಕ್ಷಿಸಿದ ಘಟನೆ ಮುಂಬೈ ದಹಿಸರ್ ರೈಲು ನಿಲ್ದಾಣದಲ್ಲಿ ನಡೆದಿದೆ.
#WATCH | Maharashtra: A constable of Mumbai Police helped a 60-year-old man, who got stuck at a railway track, save his life at Dahisar railway station in Mumbai yesterday. pic.twitter.com/lqzJYf09Cj
— ANI (@ANI) January 2, 2021
ತೋಟಗಾರಿಕೆ ಮೇಳ-2021 ಕ್ಕೆ ಚಾಲನೆ ನೀಡಿದ ಸಿ.ಎಂ. ಯಡಿಯೂರಪ್ಪ
11:59 am ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ, ಇಂದಿನಿಂದ ಆರಂಭವಾದ ಮೂರು ದಿನಗಳ ತೋಟಗಾರಿಕೆ ಮೇಳಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ವರ್ಚುಯಲ್ ವಿಧಾನದ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಡಿಯೂರಪ್ಪ, ಸಸಿಗೆ ನೀರುಣಿಸುವ ಮೂಲಕ ತೋಟಗಾರಿಕಾ ಮೇಳವನ್ನು ಉದ್ಘಾಟಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ತೋಟಗಾರಿಕೆ ಮೇಳ ಯಶಸ್ವಿಯಾಗಲಿ ಎಂದು ಶುಭಹಾರೈಸಿದ್ದಾರೆ.
ಪುಲ್ವಾಮದಲ್ಲಿ ರಕ್ಷಣಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ
11:55 am ಪುಲ್ವಾಮದಲ್ಲಿ ರಕ್ಷಣಾ ಪಡೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಜಿಲ್ಲೆಯ ಟ್ರಾಲ್ ಬಸ್ ನಿಲ್ದಾಣದ ಬಳಿ ಉಗ್ರರು ಗ್ರೆನೇಡ್ ಎಸೆದಿದ್ದಾರೆ. ಇದರಿಂದ, ಸ್ಥಳದಲ್ಲಿದ್ದ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದುಬರಬೇಕಿದೆ.
ಎಲ್ಲರಿಗೂ ಉಚಿತವಾಗಿ ಲಭ್ಯವಾಗಲಿದೆಯಾ ಕೊವಿಡ್-19 ಲಸಿಕೆ?
11:48 am ದೆಹಲಿಯಲ್ಲಿ ಮಾತ್ರವಲ್ಲ ದೇಶದಲ್ಲೆಡೆ ಕೊವಿಡ್-19 ಲಸಿಕೆ ಉಚಿತವಾಗಿ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿಕೆ ನೀಡಿದ್ದಾರೆ. ಕೊವಿಡ್-19 ಲಸಿಕೆಯನ್ನು ಉಚಿತವಾಗಿ ನೀಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಡಾ. ಹರ್ಷವರ್ಧನ್ ಉತ್ತರಿಸಿದ್ದಾರೆ.
#WATCH | Not just in Delhi, it will be free across the country: Union Health Minister Dr Harsh Vardhan on being asked if COVID-19 vaccine will be provided free of cost pic.twitter.com/xuN7gmiF8S
— ANI (@ANI) January 2, 2021
ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇನೆ
ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ
11:44 am ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಇರುವ ಹಿನ್ನೆಲೆಯಲ್ಲಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅರುಣ್ ಸಿಂಗ್ ಜೊತೆಗೆ ಯಡಿಯೂರಪ್ಪ ಮಧ್ಯಾಹ್ನ ಶಿವಮೊಗ್ಗಕ್ಕೆ ತೆರಳಲಿದ್ದಾರೆ.
IIM ಪ್ರತಿಭೆಗಳಿಂದ ಆತ್ಮನಿರ್ಭರ ಭಾರತಕ್ಕೆ ಸಹಾಯವಾಗಲಿದೆ: ಪ್ರಧಾನಿ ಮೋದಿ
11:39 am 2014ರವರೆಗೆ ದೇಶದಲ್ಲಿ 13 IIMಗಳಷ್ಟೇ ಇದ್ದವು. ಇಂದು ಭಾರತದಲ್ಲಿ ಒಟ್ಟು 20 IIMಗಳಿವೆ. ಈ ಮೂಲಕ, ದೊಡ್ಡ ಸಂಖ್ಯೆಯ ಪ್ರತಿಭೆಗಳು ಆತ್ಮನಿರ್ಭರ್ ಭಾರತ ಆಂದೋಲನವನ್ನು ಬಲಪಡಿಸುವಲ್ಲಿ ಸಹಕಾರಿಯಾಗಲಿದ್ದಾರೆ ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇಂದಿನ ನವೋದ್ಯಮಗಳೇ ಮುಂದಿನ ಬಹುರಾಷ್ಟ್ರೀಯ ಕಂಪೆನಿಗಳು: ಪ್ರಧಾನಿ ಮೋದಿ ಹೇಳಿಕೆ
11:28 am ಇಂದಿನ ನವ ಉದ್ಯಮಗಳೇ ಮುಂದಿನ ಬಹುರಾಷ್ಟ್ರೀಯ ಕಂಪೆನಿಗಳು. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ನವೋದ್ಯಮಗಳು, ದ್ವಿತೀಯ ಮತ್ತು ತೃತೀಯ ದರ್ಜೆಯ ನಗರಗಳಲ್ಲಿ ಆರಂಭವಾಗುತ್ತಿವೆ. ಕೃಷಿ ವಲಯದಿಂದ ಬಾಹ್ಯಾಕಾಶ ವಲಯದವರೆಗೆ ನವೋದ್ಯಮಗಳ ಅವಕಾಶ ಹೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
Education in Odisha is witnessing a rapid transition. I am happy that our state continues its dominance in education sector & has emerged as the education hub of Eastern India: Odisha CM Naveen Patnaik https://t.co/p4HCjW90TW pic.twitter.com/EuUcfEYYwG
— ANI (@ANI) January 2, 2021
ಒಡಿಶಾದ ಸಂಬಲ್ಪುರ್ನಲ್ಲಿ IIMನ ಶಾಶ್ವತ ಆವರಣ ನಿರ್ಮಾಣಕ್ಕೆ ಪ್ರಧಾನಿಯಿಂದ ಶಂಕುಸ್ಥಾಪನೆ
11:22 am ಒಡಿಶಾದ ಸಂಬಲ್ಪುರ್ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಶಾಶ್ವತ ಆವರಣ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಕುಂದಾಪುರದಲ್ಲಿ ಲಕ್ಷಾಂತರ ರೂ. ಮೌಲ್ಯದ ಪಡಿತರ ಅಕ್ರಮ ದಾಸ್ತಾನು ಪತ್ತೆ
ಪೊಲೀಸರು ಹಾಗೂ ಆಹಾರ ನಿರೀಕ್ಷಕರಿಂದ ಮಿಂಚಿನ ದಾಳಿ
11:15 am ಅಕ್ರಮವಾಗಿ ಮಾರಾಟ ಮಾಡಲು, ದಾಸ್ತಾನು ಮಾಡಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿಯನ್ನು ಪೊಲೀಸರು ಹಾಗೂ ಆಹಾರ ನಿರೀಕ್ಷಕರು ನಿನ್ನೆ ರಾತ್ರಿ ವಶಪಡಿಸಿಕೊಂಡಿದ್ದಾರೆ. ಕುಂದಾಪುರ, ಕೋಟೇಶ್ವರ ನಿವಾಸಿ ಉದಯ್ಕುಮಾರ್ ಶೆಟ್ಟಿ, ಮಂಗಳೂರು ನಿವಾಸಿ ಆಜಾಮ್, ಉಡುಪಿ ನಿವಾಸಿ ರಮಾ ಪೂಜಾರಿ ಆರೋಪಿಗಳೆಂದು ಪ್ರಾಥಮಿಕ ತನಿಕೆಯಿಂದ ತಿಳಿದುಬಂದಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆಬೀಸಿದ್ದಾರೆ. ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ನಡೆಸಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಹಾಗೂ ಆಹಾರ ನಿರೀಕ್ಷಕರು ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಸಂಗ್ರಹಿಸಿಟ್ಟಿದ್ದ ಅಕ್ಕಿ, ಸಾಗಾಟಕ್ಕೆ ಬಳಸಲಾಗಿದ್ದ ಲಾರಿ ಮುಂತಾದವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಬೂಟಾ ಸಿಂಗ್ ನಿಧನ
11:06 am ಕಾಂಗ್ರೆಸ್ ಹಿರಿಯ ನಾಯಕ, ಭಾರತದ ಮಾಜಿ ಗೃಹ ಸಚಿವ ಬೂಟಾ ಸಿಂಗ್ (86) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೂಟಾ ಸಿಂಗ್, ಬಿಹಾರದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು. 2007ರಿಂದ 2010ರ ಅವಧಿಯಲ್ಲಿ, ಪರಿಶಿಷ್ಟ ಜಾತಿಯ ರಾಷ್ಟ್ರೀಯ ಆಯೋಗದ ಮುಖ್ಯಸ್ಥರೂ ಆಗಿದ್ದರು. ಬೂಟಾ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Shri Buta Singh Ji was an experienced administrator and effective voice for the welfare of the poor as well as downtrodden. Saddened by his passing away. My condolences to his family and supporters.
— Narendra Modi (@narendramodi) January 2, 2021
ಬೆಂಗಳೂರಿನಲ್ಲಿ ಹೆಚ್ಚಿದ ರೂಪಾಂತರಿ ಕೊರೊನಾ ವೈರಸ್ ಭೀತಿ
10:55 am ಬ್ರಿಟನ್‌ನಿಂದ ಬಂದವರಿಂದ ರೂಪಾಂತರಿ ಕೊರೊನಾ ವೈರಸ್ ಹರಡುತ್ತಿರುವ ಬಗ್ಗೆ ಆತಂಕ ಹೆಚ್ಚಾಗಿದೆ. ಬ್ರಿಟನ್‌ನಿಂದ ಬಂದವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರಿಗೂ ರೂಪಾಂತರಿ ವೈರಸ್ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಪತ್ತೆಯಾದ ಮೂವರು ಸೋಂಕಿತರ ಪೈಕಿ ಇಬ್ಬರು ಬ್ರಿಟನ್‌ನಿಂದ ಬಂದವರಾಗಿದ್ದಾರೆ. ಆದರೆ, ಓರ್ವ ವೃದ್ಧೆ ಬ್ರಿಟನ್ ಪ್ರಯಾಣ ಮಾಡಿರಲಿಲ್ಲ. ಬ್ರಿಟನ್‌ನಿಂದ ಬಂದ ಮಗಳ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕಾರಣ ರೂಪಾಂತರಿ ವೈರಸ್ ದೃಢವಾಗಿದೆ. ಹಾಗಾಗಿ, ಬ್ರಿಟನ್‌ನಿಂದ ಹಿಂತಿರುಗಿದವರ ಜೊತೆ ಸಂಪರ್ಕದಲ್ಲಿದ್ದವರಿಗೆ ಆತಂಕ ಹೆಚ್ಚಾಗಿದೆ.
ಕುಶಾಲನಗರದಲ್ಲೊಂದು ಮಾನವೀಯ ಘಟನೆ
ಅನಾಥ ವೃದ್ಧೆಯ ರಕ್ಷಣೆ ಮಾಡಿ, ವೃದ್ಧಾಶ್ರಮಕ್ಕೆ ಸ್ಥಳಾಂತರ
10:43 am ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ರಥಬೀದಿಯಲ್ಲಿ ಅನಾಥವಾಗಿದ್ದ ವೃದ್ಧೆಯನ್ನು ರಕ್ಷಿಸಲಾಗಿದೆ. ಸುಂಟಿಕೊಪ್ಪ ವಿಕಾಸ ಜನಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಹಾಗೂ ರೋಟರಿ ಕೆ.ಪಿ.ಚಂದ್ರಶೇಖರ್ ವೃದ್ಧೆಯ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ವೃದ್ಧೆಗೆ ಕೊವಿಡ್ ಪರೀಕ್ಷೆ ಮಾಡಿಸಿ ಅನಾಥಶ್ರಮಕ್ಕೆ ಸ್ಥಳಾಂತರಿಸಲಾಗಿದೆ. ವೃದ್ಧೆ ಪುಟ್ಟಮ್ಮ(70) ಸಾನಿಧ್ಯ ವೃದ್ಧಾಶ್ರಮಕ್ಕೆ ಸ್ಥಳಾಂತರವಾಗಿದ್ದಾರೆ.
ಕೊರೊನಾ ಲಸಿಕೆ ಡ್ರೈ ರನ್ ನಲ್ಲಿ ಭಾಗಿಯಾದ ಫಲಾನುಭವಿ
10:37 am ಕೊರೊನಾ ಲಸಿಕೆ ಡ್ರೈ ರನ್ನಲ್ಲಿ ಭಾಗಿಯಾಗಿದ್ದ ಫಲಾನುಭವಿ ಲಸಿಕೆ ಪಡೆದು, ಯಾವುದೇ ಸಮಸ್ಯೆ ಎದುರಿಸದೆ ಅರ್ಧ ಗಂಟೆ ಬಳಿಕ ಮನೆಗೆ ತೆರಳಿದ್ದಾರೆ. ಲಸಿಕೆ ಪಡೆದ ಫಲಾನುಭವಿಯ ಆರೋಗ್ಯ ವಿಚಾರಿಸಿ, ಹೊರ ಕಳುಹಿಸಲಾಗಿದೆ. ಬೆಳಗಾವಿಯ ವಂಟಮೂರಿ ಕಾಲೊನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ ರನ್ ಪ್ರಕ್ರಿಯೆ ನಡೆಯುತ್ತಿದೆ. ಡ್ರೈ ರನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಖುಷಿಯಾಗಿದೆ ಎಂದು ಕೊವಿಡ್ ಲಸಿಕೆ ತಾಲೀಮಿನಲ್ಲಿ ಭಾಗಿಯಾದ ಫಲಾನುಭವಿ ಟಿವಿ9 ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ.
ದೇಶದ 30ಕೋಟಿ ಜನರಿಗೆ ಉಚಿತ ಕೊರೊನಾ ಲಸಿಕೆ
10:28 am ದೇಶದ 30ಕೋಟಿ ಮಂದಿಗೆ ಉಚಿತ ಕೊರೊನಾ ಲಸಿಕೆ ಲಭ್ಯವಾಗಲಿದೆ. ಮೊದಲ ಹಂತದ ಲಸಿಕೆ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ನ್ಯಾಷನಲ್ ಕೊವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿನೋದ್ ಪೌಲ್ ಹೇಳಿಕೆ ನೀಡಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಮೊದಲ ಹಂತದ ಲಸಿಕೆ ವಿತರಣಾ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ಲಸಿಕೆ ವಿತರಣೆಯಾಗಲಿದೆ.
ಅರುಣ್ ಸಿಂಗ್ ಭೇಟಿಗೆ ಆಗಮಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
10:25 am ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆ, ಅರುಣ್ ಸಿಂಗ್ ಭೇಟಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಕುಮಾರ ಕೃಪಾ ಅತಿಥಿ ಗೃಹದಲ್ಲಿ ತಂಗಿರುವ ಅರುಣ್ ಸಿಂಗ್ರನ್ನು ಬೊಮ್ಮಾಯಿ ಭೇಟಿಯಾಗಲಿದ್ದಾರೆ.
ಕೊರೊನಾ ಲಸಿಕೆಯ ಮೇಲೆ ನಂಬಿಕೆ ಇಡಿ, ಊಹಾಪೋಹಗಳಿಗೆ ಕಿವಿಗೊಡಬೇಡಿ
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿಕೆ
10:22 am ಕೊರೊನಾ ಲಸಿಕೆಯ ಮೇಲೆ ಜನರು ನಂಬಿಕೆ ಇಡಿ, ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿಕೆ ನೀಡಿದ್ದಾರೆ. ದೇಶದ ಹಲವೆಡೆಗಳಲ್ಲಿ ಕೊರೊನಾ ಲಸಿಕೆ ತಾಲೀಮು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ರಾಜ್ಯದ 5 ಜಿಲ್ಲೆಗಳಲ್ಲಿ ಇಂದು ಕೊರೊನಾ ಲಸಿಕೆ ತಾಲೀಮು ನಡೆಯುತ್ತಿದೆ.
ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್
10:16 am ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕುಮಾರ ಕೃಪಾ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂದು ರಾತ್ರಿ ಶಿವಮೊಗ್ಗದಲ್ಲಿ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕುಮಾರ ಕೃಪಾ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿರುವ ಅರುಣ್ ಸಿಂಗ್ರನ್ನು ಮುಖ್ಯಮಂತ್ರಿ ಯಡಿಯೂರಪ್ಪ, 11 ಗಂಟೆ ಸುಮಾರಿಗೆ ಭೇಟಿಯಾಗುವ ಸಾಧ್ಯತೆ ಇದೆ. ಭೇಟಿ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಮಾತುಕತೆ ಸಾಧ್ಯತೆಯನ್ನು ಅಂದಾಜಿಸಲಾಗಿದೆ.
ದನದ ಕೊಟ್ಟಿಗೆಗೆ ಬೆಂಕಿ, 2 ಜಾನುವಾರು ಸಾವು
ರಾಜಕೀಯ ದ್ವೇಷದಿಂದ ಕೃತ್ಯವೆಸಗಿರುವ ಶಂಕೆ
10:05 am ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಚಂದ್ರಪ್ಪ ಎಂಬವರು ಗೆಲುವು ಸಾಧಿಸಿದ ಹಿನ್ನೆಲೆ, ದನದ ಕೊಟ್ಟಿಗೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಘಟನೆಯಲ್ಲಿ, 2 ಜಾನುವಾರುಗಳು ಸಾವನ್ನಪ್ಪಿವೆ. ಸುಟ್ಟ ಗಾಯಗಳೊಂದಿಗೆ 5 ಜಾನುವಾರುಗಳು ನರಳಾಟ ಅನುಭವಿಸಿವೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಜಾವೂರು ಹೊಸಳ್ಳಿಯ ಚಂದ್ರಪ್ಪಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಈ ದುಷ್ಕೃತ್ಯ ನಡೆದಿದೆ.
ರಿಜಿಸ್ಟ್ರೇಶನ್ ವಿಭಾಗ ಈ ರೀತಿ ಕೆಲಸ ನಿರ್ವಹಿಸಲಿದೆ
9.33 am ಲಸಿಕೆ ಪಡೆಯಲು ಬಂದ ವ್ಯಕ್ತಿಗಳು ಕಡ್ಡಾಯವಾಗಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು. ರಿಜಿಸ್ಟ್ರೇಶನ್ಗಾಗಿ ಅಡ್ರೆಸ್ ಪ್ರೂಫ್ ನೀಡಬೇಕು. ಅಡ್ರೆಸ್ ಪ್ರೂಫ್ಗೆ ಪಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಸರ್ಕಾರಿ ಅಧಿಕಾರಿಯಾಗಿದ್ರೆ ಐಡಿ ಕಾರ್ಡ್, ಸರ್ಕಾರದಿಂದ ಮಾನ್ಯತೆ ಪಡೆದ ಉದ್ಯೋಗಿ ಆಗಿದ್ದರೆ ಐಡಿ ಕಾರ್ಡ್ ದಾಖಲೆಗಳು ಇರಬೇಕು. ಲಸಿಕೆ ಪಡೆಯಲು ಬಂದವರ ರಿಜಿಸ್ಟ್ರೇಶನ್ ಪ್ರಕ್ರಿಯೆಯನ್ನು ಈ ವಿಭಾಗ ನಿರ್ವಹಿಸಲಿದೆ.
ರಾಜಕೀಯ ದ್ವೇಷಕ್ಕೆ ಅಡಿಕೆ ಗಿಡಗಳಿಗೆ ಬೆಂಕಿ
9.58 am ರಾಜಕೀಯ ದ್ವೇಷಕ್ಕೆ ಅಡಿಕೆ ಗಿಡಗಳಿಗೆ ಬೆಂಕಿ ಕೊಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನೆಟ್ಟೆಕೆರೆ ಗೇಟ್ ಬಳಿ ನಡೆದಿದೆ. ಇದರಿಂದ, 250ಕ್ಕೂ ಹೆಚ್ಚು ಅಡಿಕೆ ಗಿಡಗಳು ನಾಶವಾಗಿವೆ. ನೆಟ್ಟೆಕೆರೆಯ ಮಾಯಣ್ಣಗೌಡ ಎಂಬವರಿಗೆ ಸೇರಿದ ಅಡಿಕೆ ಗಿಡಗಳು ನಾಶವಾಗಿವೆ. ಸುಮಾರು 10 ಲಕ್ಷ ರೂಪಾಯಿಗೂ ಹೆಚ್ಚು ಪ್ರಮಾಣದ ನಷ್ಟ ಅಂದಾಜಿಸಲಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿದ ಕಾರಣಕ್ಕಾಗಿ, ಕಿಡಿಗೇಡಿಗಳು ಅಡಿಕೆ ಗಿಡಗಳಿಗೆ ಬೆಂಕಿ ನೀಡಿರುವ ಬಗ್ಗೆ ಶಂಕಿಸಲಾಗಿದೆ.
ಬೋನಿಗೆ ಬಿದ್ದ ಚಿರತೆ
9.53 am ಬಳ್ಳಾರಿ ಜಿಲ್ಲೆ, ಹೊಸಪೇಟೆ ತಾಲೂಕಿನ, ಹಂಪಿಯ ಪವರ್ ಹೌಸ್ ಕ್ಯಾಂಪ್ ಬಳಿ ಬೋನಿಗೆ ಬಿದ್ದ ಚಿರತೆ. ಚಿರತೆ ಸೆರೆಗಾಗಿ ಅರಣ್ಯಾಧಿಕಾರಿಗಳು ಬೋನ್ ಆಳವಡಿಸಿದ್ದರು. ಇದೀಗ ಚಿರತೆ ಸೆರೆಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಅಬ್ಸರ್ವೇಶನ್ ಕೊಠಡಿ ಹೀಗೆ ಕಾರ್ಯನಿರ್ವಹಿಸಲಿದೆ
9.42 am ಲಸಿಕೆ ಪಡೆದ ನಂತರ ವ್ಯಕ್ತಿಯನ್ನು ಅಬ್ಸರ್ವೇಶನ್ ಕೊಠಡಿಗೆ ಕಳುಹಿಸಲಾಗುತ್ತದೆ. 30 ನಿಮಿಷಗಳ ಕಾಲ ವೈದ್ಯರ ನಿಗಾದಲ್ಲೆ ಇರಿಸಲಾಗುತ್ತದೆ. 30 ನಿಮಿಷದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ಕೊಡಲಾಗುತ್ತದೆ. ನಂತರ ಆಸ್ಫತ್ರೆಗೆ ಕಳುಹಿಸಲಾಗುತ್ತದೆ. ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಾರದಿದ್ದರೆ ಲಸಿಕೆ ಪಡೆದ ವ್ಯಕ್ತಿ ಮನೆಗೆ ತೆರಳಬಹುದಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಬರುವವರು ಊಟ ಮಾಡಿಕೊಂಡು, ಆಹಾರ ಸ್ವೀಕರಿಸಿಕೊಂಡು ಬರಬೇಕು ಎಂದು ತಿಳಿಸಲಾಗಿದೆ.
ವೈಟಿಂಗ್ ರೂಮ್ ಹಾಗೂ ವ್ಯಾಕ್ಸಿನ್ ರೂಮ್ಗಳು
9.38 am ರಿಜಿಸ್ಟ್ರೇಶನ್ ಆದ ನಂತರ ಲಸಿಕೆ ಪಡೆಯಲು ಬಂದ ವ್ಯಕ್ತಿಗೆ ಕ್ರಮಸಂಖ್ಯೆ ಕೊಡಲಾಗುತ್ತದೆ. ಆ ಸಂಖ್ಯೆಯ ಪ್ರಕಾರ ವೈಟಿಂಗ್ ರೂಮ್ನಲ್ಲಿ ಕುಳಿತುಕೊಳ್ಳಬೇಕು. ನಂತರ ಆಯಾ ವ್ಯಕ್ತಿಯ ಹೆಸರು ಬಂದಾಗ ವ್ಯಾಕ್ಸಿನ್ ರೂಮ್‌ಗೆ ಹೋಗಬೇಕು. ವ್ಯಾಕ್ಸಿನ್ ರೂಮ್ನಲ್ಲಿ ಡಾಕ್ಟರ್ ರೋಗಿಯನ್ನು ಕೂರಿಸಿಕೊಂಡು ವಿಚಾರಣೆ ಮಾಡಿ ವ್ಯಾಕ್ಸಿನ್ ಚುಚ್ಚುಮದ್ದು ಕೊಡುತ್ತಾರೆ. ವ್ಯಾಕ್ಸಿನ್ ಪಡೆದ ಬಳಿಕ ವ್ಯಕ್ತಿ ಅಬ್ಸರ್ವೇಶನ್ ರೂಮ್‌ಗೆ ತೆರಳಬೇಕು.
ಡ್ರೈ ರನ್ ಕೇಂದ್ರದಲ್ಲಿ ನಾಲ್ಕು ವಿಭಾಗಗಳು
9.27 am ಕೊವಿಡ್-19 ಲಸಿಕೆ ಡ್ರೈ ರನ್ ನೀಡುವ ವಿಚಾರ. ಕೊವಿಡ್ ಲಸಿಕೆ ಡ್ರೈ ರನ್ ಕೇಂದ್ರಗಳಲ್ಲಿ ನಾಲ್ಕು ವಿಭಾಗಗಳಿರಲಿವೆ. ರಿಜಿಸ್ಟ್ರೇಶನ್ ವಿಭಾಗ, ವೈಟಿಂಗ್ ರೂಮ್, ವ್ಯಾಕ್ಸಿನ್ ರೂಮ್ ಹಾಗೂ ಅಬ್ಸರ್ವೇಶನ್ ರೂಮ್ಗಳು ಇರಲಿವೆ.
ನಮ್ಮ ಓದುಗರಿಗೆ ಹೊಸ ವರ್ಷದ ಶುಭ ಹಾರೈಕೆಗಳು. ನಿಮ್ಮ ಓದು ನಮ್ಮ ಹುಮ್ಮಸ್ಸು. ಹೊಸ ಯೋಚನೆಗೆ ತಿದಿಯೊತ್ತುವ ಈ ಸಮಯದಲ್ಲಿ ನಾವು ಟಿವಿ9 ಕನ್ನಡ ಡಿಜಿಟಲ್ Live Blog ಪ್ರಾರಂಭಿಸಿದ್ದೇವೆ. ಸುತ್ತಲಿನ ಗದ್ದಲದಿಂದ ದೂರ ಕುಳಿತು ಕ್ಷಣ ಕ್ಷಣದ ಸುದ್ದಿ ಓದುವ, ನೋಡುವ ಅವಕಾಶ ನಿಮಗೆ. ಹಳ್ಳಿಯಿಂದ ದಿಲ್ಲಿಯೇನು ಇಡೀ ಪ್ರಪಂಚದ ಸುದ್ದಿ ಟಿವಿ9 ಕನ್ನಡ ಡಿಜಿಟಲ್ Live Blog ನಲ್ಲಿ ಪ್ರತಿ ದಿನ ಹರಿದು ಬರಲಿದೆ. ಬನ್ನಿ ಇಂದಿನ ಸುದ್ದಿಯ ಹರಿವನ್ನು ಆನಂದಿಸೋಣ.
Published On - Jan 02,2021 9:19 PM