ಅನಧಿಕೃತ ಕಟ್ಟಡ ನಿರ್ಮಿಸಿದವರಿಗೆ ಗುಡ್​ನ್ಯೂಸ್: ಅಕ್ರಮ ಕಟ್ಟಡ ಸಕ್ರಮಗೊಳಿಸಲು BDA ಸಮ್ಮತಿ

ಅನಧಿಕೃತ ಕಟ್ಟಡ ನಿರ್ಮಿಸಿದವರಿಗೆ ಗುಡ್​ನ್ಯೂಸ್: ಅಕ್ರಮ ಕಟ್ಟಡ ಸಕ್ರಮಗೊಳಿಸಲು BDA ಸಮ್ಮತಿ
ಬಿಡಿಎ ಹೆಡ್ ಆಫೀಸ್

ಅನಧಿಕೃತ ಕಟ್ಟಡ ನಿರ್ಮಿಸಿದವರಿಗೆ BDAನಿಂದ ಗುಡ್​ನ್ಯೂಸ್ ಸಿಕ್ಕಿದೆ. ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಸಕ್ರಮಗೊಳಿಸಲು ಪ್ರಾಧಿಕಾರ ಸಮ್ಮತಿ ಸೂಚಿಸಿದೆ.

KUSHAL V

|

Jan 02, 2021 | 8:05 PM

ಬೆಂಗಳೂರು: ಅನಧಿಕೃತ ಕಟ್ಟಡ ನಿರ್ಮಿಸಿದವರಿಗೆ BDAನಿಂದ ಗುಡ್​ನ್ಯೂಸ್ ಸಿಕ್ಕಿದೆ. ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಸಕ್ರಮಗೊಳಿಸಲು ಪ್ರಾಧಿಕಾರ ಸಮ್ಮತಿ ಸೂಚಿಸಿದೆ.

12 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು BDA ಆದೇಶ ಹೊರಡಿಸಿದೆ. ಮೊದಲ ಹಂತದಲ್ಲಿ 516 ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಪಿಳ್ಳಣ್ಣ ಗಾರ್ಡನ್ 3ನೇ ಹಂತದ ಬಡಾವಣೆಯ 516 ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಇದಲ್ಲದೆ, RMV ಲೇಔಟ್​ನ 160 ಅನಧಿಕೃತ ಕಟ್ಟಡಗಳು, HRBR ಲೇಔಟ್​ನ 41 ಕಟ್ಟಡಗಳು, HSR ಲೇಔಟ್​ನ 113 ಕಟ್ಟಡಗಳಿಗೆ ಡಿಮ್ಯಾಂಡ್ ನೋಟಿಸ್ ನೀಡಲಾಗಿದೆ.

BDA ಅಂತಿಮ ಅಧಿಸೂಚನೆಗೆ ಮುನ್ನವೇ ನಿರ್ಮಾಣವಾಗಿರುವ ರೆವಿನ್ಯೂ ಸೈಟ್​ಗೆ ಮಾತ್ರ ಈ ಅಕ್ರಮ ಸಕ್ರಮ ನಿಯಮ ಅನ್ವಯವಾಗುತ್ತದೆ ಎಂದು ತಿಳಿದುಬಂದಿದೆ. ಜೊತೆಗೆ, ಕಟ್ಟಡಗಳು 12 ವರ್ಷಗಳ ಹಿಂದೆ ನಿರ್ಮಾಣವಾಗಿದ್ದರೆ ಮಾತ್ರ ಸಕ್ರಮಗೊಳಿಸಲಾಗುವುದು ಎಂದು BDA ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಅಕ್ರಮ ಸಕ್ರಮದಡಿ ಸೂಕ್ತ ಮೌಲ್ಯ ಕಟ್ಟಿಸಿಕೊಂಡು BDA ನಿಂದ ಮರು ಮಂಜೂರಾತಿ ದೊರೆಯಲಿದೆ. ಈ ಮೂಲಕ, BDA ಸಾವಿರಾರು ಕೋಟಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.

ಆಭರಣ ಪ್ರಿಯರಿಗೆ ಗುಡ್​​ನ್ಯೂಸ್​! ಬೆಂಗಳೂರಲ್ಲಿ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada