ನಿರುದ್ಯೋಗಿ ಯುವಕರಿಗೆ ಮಾದರಿ: ಹೊಗೆ ರಹಿತ ಒಲೆ ನಿರ್ಮಾಣದಲ್ಲಿ ಬದುಕು ಕಟ್ಟಿಕೊಂಡ ಪದವೀಧರ

ಸಹಜಾನಂದಶ್ರೀಗಳು ಸ್ವಯಂ ಉದ್ಯೋಗದ ದಾರಿ ತೋರಿಸಿದ ಫಲವಾಗಿ ಚಂದ್ರಶೇಖರ್ ಮೋರೆ ಕಳೆದ 16 ವರ್ಷಗಳಿಂದ ಮಹಾರಾಷ್ಟ್ರದ ಕೊಲ್ಲಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ವಿಜಯಪುರ, ಕಲಬುರಗಿ, ಗದಗ, ಹಾವೇರಿ ಜಿಲ್ಲೆಗಳ ನೂರಾರು ಗ್ರಾಮಗಳಲ್ಲಿ ಸುಮಾರು 5000ಕ್ಕೂ ಅಧಿಕ ಒಲೆಗಳನ್ನು ಅಳವಡಿಸಿದ್ದಾರೆ.

ನಿರುದ್ಯೋಗಿ ಯುವಕರಿಗೆ ಮಾದರಿ: ಹೊಗೆ ರಹಿತ ಒಲೆ ನಿರ್ಮಾಣದಲ್ಲಿ ಬದುಕು ಕಟ್ಟಿಕೊಂಡ ಪದವೀಧರ
ಹೊಗೆ ರಹಿತ ಒಲೆ
Follow us
preethi shettigar
| Updated By: ಆಯೇಷಾ ಬಾನು

Updated on: Jan 03, 2021 | 8:04 AM

ಬಾಗಲಕೋಟೆ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಗ್ಯಾಸ್ ವಿತರಣೆಯ ಮಹಾಕ್ರಾಂತಿಯಾಗಿದ್ದು, ದೇಶದ ಮೂಲೆ ಮೂಲೆಯ ಬಡವರ ಮನೆಗೂ ಸಬ್ಸಿಡಿ ಮೂಲಕ ಪ್ರಾಧಾನಿ ಗ್ಯಾಸ್ ಹಂಚಿಕೆ ಮಾಡಿದ್ದಾರೆ. ಆ ಮೂಲಕ ಬಡ ಜನರ ಕಣ್ಣುಗಳನ್ನು ಹೊಗೆ ಮುಕ್ತ ಮಾಡಿ ರಕ್ಷಣೆ ಮಾಡಿದ್ದು, ಇಂದು ಗುಡಿಸಲು ಹೊಕ್ಕು ನೋಡಿದರೂ ಕೂಡ ಅಲ್ಲೊಂದು ಗ್ಯಾಸ್ ನಮ್ಮ ಕಣ್ಣಿಗೆ ಬಿದ್ದೇ ಬೀಳುತ್ತದೆ. ಅಷ್ಟರಮಟ್ಟಿಗೆ ದೇಶದಲ್ಲಿ ಸಿಲಿಂಡರ್ ಗ್ಯಾಸ್ ಹಂಚಿಕೆಯ ವೇಗ ಹೆಚ್ಚಾಗಿದೆ.

ಇದೇ ಮಾದರಿಯನ್ನು ಅನುಸರಿಸಿರುವ ಪದವೀಧರ ಹೊಗೆ ಮುಕ್ತ ಅಡುಗೆ ಮನೆ ಗುರಿಯನ್ನು ಹೊಂದಿದ್ದು, ಬಡ ಜನರ ಕಣ್ಣುಗಳನ್ನು ಕಾಯುವ ಕಾರ್ಯವನ್ನು ಮಾಡಿದ್ದಾರೆ. ಹಾಗಂತ ಇವರು ಸಿಲಿಂಡರ್ ಕೊಟ್ಟಿಲ್ಲ. ಆದರೆ ಹೊಗೆ ರಹಿತ ಒಲೆ ನಿರ್ಮಿಸಿ ಕಡು ಬಡವರ, ಕಣ್ಗಾವಲಾಗುವ ಕಾರ್ಯವನ್ನು ಪಿಯುಸಿಯಿಂದ ಮಾಡಿಕೊಂಡು ಬಂದಿದ್ದಾರೆ.

ಚಂದ್ರಶೇಖರ್ ಮೋರೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮಹಲಿಂಗಪುರ ನಿವಾಸಿಯಾಗಿದ್ದು, ಸದ್ಯ ಬಿಎಡ್ ಓದುತ್ತಿರುವ ಈ ವ್ಯಕ್ತಿ ಸಿಮೆಂಟ್ ಮೂಲಕ ಹೊಗೆ ರಹಿತ ಒಲೆ ನಿರ್ಮಿಸುವುದನ್ನು ಪ್ರಮುಖ ಕಾಯಕ ಮಾಡಿಕೊಂಡಿದ್ದಾರೆ. ಕಡಿಮೆ ಕಟ್ಟಿಗೆಯಲ್ಲಿ ಅಡುಗೆ ಮಾಡುವುದು, ಹೊಗೆ ಮುಕ್ತ ಒಲೆ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಬಡತನದಿಂದ ಕಾಲೇಜು ಬಿಟ್ಟವನಿಗೆ ದಾರಿ ತೋರಿದ ಶ್ರೀಗಳು: ಚಂದ್ರಶೇಖರ ಮೋರೆ ಚಿಕ್ಕಂದಿನಿಂದಲೇ ಆಧ್ಯಾತ್ಮದ ಕಡೆ ಒಲವುಳ್ಳ ವ್ಯಕ್ತಿ. ಈತ ಶಾಲಾ ಜೀವನದಲ್ಲಿಯೇ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಂಪರ್ಕದಲ್ಲಿದ್ದರು. ಬಡತನದಿಂದ ಪಿಯುಸಿಯಲ್ಲಿ ತಾವು ಓದುತ್ತಿದ್ದ ಕಾಲೇಜಿನಲ್ಲಿ ದ್ವಿತೀಯ ಱಂಕ್ ಬಂದರೂ  ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ವಿವಿಧ ಕೆಲಸಗಳ ಹುಡುಕಾಟದಲ್ಲಿದ್ದರು.

ಈ ಸಮಯದಲ್ಲಿ ಸಹಜಾನಂದ ಸ್ವಾಮಿಜಿಯವರ ಕೃಪೆಯಿಂದ ಕೆ.ಎಂ.ಕುಂಬಾರ ಎಂಬುವವರ ಪರಿಚಯವಾಗಿ ಹೊಗೆ ರಹಿತ ಸಿಮೆಂಟ್ ಒಲೆ ತಯಾರಿಕೆ ತರಬೇತಿ ಪಡೆದುಕೊಂಡಿದ್ದು, ಮುಂದೆ ಹೊಗೆ ರಹಿತ ಒಲೆಯ ಕಾಯಕವೇ ಚಂದ್ರಶೇಖರನ ಪಾಲಿನ ಕೈಲಾಸವಾಗಿ ಸ್ವಾವಲಂಬನೆಯ ಬದುಕಿಗೆ ದಾರಿಯಾಯಿತು. ಈಗ ಈ ವೃತ್ತಿಯೇ ಈತನ ಜೀವನಕ್ಕೆ ಆಧಾರವಾಗಿದ್ದು, ಇಡೀ ಕಟುಂಬಕ್ಕೆ ಹೊಗೆ ರಹಿತ ಒಲೆಗಳ ನಿರ್ಮಾಣವೇ ಆಸರೆಯಾಗಿದೆ.

ಒಲೆ ನಿರ್ಮಾಣದಲ್ಲಿ ನಿರತರಾಗಿರುವ ಚಂದ್ರಶೇಖರ್ ಮೋರೆ

ಹೊಗೆ ರಹಿತ ಒಲೆಯ ವೈಶಿಷ್ಟ್ಯ ಏನು? ಹೊಗೆರಹಿತ ಒಲೆ ತಯಾರಿಕೆ ಮಾಡುತ್ತಾರೆ ಎನ್ನುವುದು ನಿಜ. ಆದರೆ ಇದನ್ನು ಚಂದ್ರಶೇಖರ್ ಮೋರೆ ಹೇಗೆ ತಯಾರು ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಪ್ರಮುಖವಾಗಿದೆ‌. ಹೊಗೆ ರಹಿತ ಒಲೆಗಳನ್ನು ಇಟ್ಟಿಗೆ ಪುಡಿ, ಕಬ್ಬಿನ ಸಲಾಖೆ ಮತ್ತು ಸಿಮೆಂಟ್ ಬಳಸಿ ತಯಾರಿಸಲಾಗಿದ್ದು, ಸುಮಾರು 15 ದಿನಗಳ ಕಾಲ ನೀರಿನಲ್ಲಿಟ್ಟು ಕ್ಯೂರಿಂಗ್ ಮಾಡುತ್ತಾರೆ. ಈ ಒಲೆಗಳ ಅಳವಡಿಕೆಯಿಂದ ಅಡುಗೆ ಮನೆಯು ಸಂಪೂರ್ಣ ಹೊಗೆ ರಹಿತವಾಗುತ್ತದೆ ಮತ್ತು ಕಡಿಮೆ ಕಟ್ಟಿಗೆಯಲ್ಲಿ ಅಡುಗೆ ತಯಾರಿಸುವುದರಿಂದ ಮನೆಗಳಿಗೆ ಕಮಾನು(ಉಸಾಳಿ)ಗಳ ಅವಶ್ಯಕತೆ ಇಲ್ಲ. ಜೊತೆಗೆ ಬರ್ಶನ (ಗ್ಯಾಸ್) ಕಟ್ಟೆಯ ಕೆಳಗೆಯೂ ಈ ಒಲೆಗಳನ್ನು ಅಳವಡಿಸಬಹುದಾಗಿದೆ.

ಹೊಗೆ ರಹಿತ ಒಲೆ

ಅಂದು ಸಹಜಾನಂದಶ್ರೀಗಳು ಸ್ವಯಂ ಉದ್ಯೋಗದ ದಾರಿ ತೋರಿಸಿದ ಫಲವಾಗಿ ಚಂದ್ರಶೇಖರ್ ಮೋರೆ ಕಳೆದ 16 ವರ್ಷಗಳಿಂದ ಮಹಾರಾಷ್ಟ್ರದ ಕೊಲ್ಲಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ವಿಜಯಪುರ, ಕಲಬುರಗಿ, ಗದಗ, ಹಾವೇರಿ ಜಿಲ್ಲೆಗಳ ನೂರಾರು ಗ್ರಾಮಗಳಲ್ಲಿ ಸುಮಾರು 5000ಕ್ಕೂ ಅಧಿಕ ಒಲೆಗಳನ್ನು ಅಳವಡಿಸಿದ್ದು, ಇಂದಿಗೂ ನಿತ್ಯ ಯಾವುದಾರೂ ಪರಸ್ಥಳಗಳಿಗೆ ತೆರಳಿ ಒಲೆಗಳನ್ನು ಅಳವಡಿಸುತ್ತಾ ಗ್ರಾಹಕರ ಮೆಚ್ಚುಗೆ ಗಳಿಸಿ, ಸ್ವಾವಲಂಬಿಯಾಗಿ ಈತ ಬದುಕುತ್ತಿದ್ದಾರೆ.

ಚಿತ್ರನಟ ಡಾ.ಶಿವರಾಜಕುಮಾರ್ ಕಟ್ಟಾ ಅಭಿಮಾನಿಯಾಗಿದ್ದು, ಕ್ರೀಯಾಶೀಲ ಚಟುವಟಿಕೆಯ ನಿತ್ಯ ಶ್ರಮಜೀವಿ, ಆಧ್ಯಾತ್ಮ ಜೀವಿ, ಸಿದ್ಧಾರೂಢರ ಪರಮ ಭಕ್ತರಾಗಿರುವ ಚಂದ್ರಶೇಖರ ಕುಟುಂಬಕ್ಕೆ ಹೊಗೆ ಒಲೆ ಕಾಯಕವು ಸ್ವಾವಲಂಬನೆಯ ಬದುಕಿಗೆ ಆಸರೆಯಾಗಿದೆ ಎಂದರೆ ತಪ್ಪಾಗಲಾರದು.

ಚಂದ್ರಶೇಖರ್ ಮೋರೆ

ಶಿಕ್ಷಕನಾಗಬೇಕೆಂಬ ಬಯಕೆ: ಚಂದ್ರಶೇಖರ್ ಮೋರೆ ಬಡತನದ ಬೇಗುದಿಯಲ್ಲಿಯೇ ಹುಟ್ಟಿ-ಬೆಳೆದು, ಹೊಟ್ಟೆ ತುಂಬಿಸಿಕೊಳ್ಳಲು ಓದನ್ನು ಅರ್ಧಕ್ಕೆ ನಿಲ್ಲಿಸಿ ಕುಟುಂಬ ನಿರ್ವಹಣೆಗಾಗಿ ಹೊಗೆ ರಹಿತ ಒಲೆ ವೃತ್ತಿಯನ್ನು ಆರಂಭಿಸಿದ್ದರು. ಸದ್ಯ ಚಂದ್ರಶೇಖರ ಮೋರೆ ಇಂದಿನ ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದು, ಕಡು ಬಡತನದಲ್ಲೇ ಬೆಳೆದ ಇವರು ಪ್ರೌಢಶಾಲೆಯ ಶಿಕ್ಷಕರಾಗಬೇಕೆಂಬ ಕನಸು ಕಂಡಿದ್ದರು.ಆದರೆ ಮನೆಯ ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣ ನಿಲ್ಲಿಸಿ ಉದ್ಯೋಗದತ್ತ ಮುಖ ಮಾಡಿದರು. 2002 ರಲ್ಲಿ ಶಿಕ್ಷಣ ಬಿಟ್ಟು ಒಲೆ ತಯಾರಿಕೆ ಮುಂದಾದ ಇವರು ಪುನಃ ಓದಿನ ಕಡೆ ಗಮನಹರಿಸಿದ್ದು, 2019 ರಲ್ಲಿ  ಪದವಿ ಮುಗಿಸಿದ್ದಾರೆ‌. ಸದ್ಯ ಬಿಎಡ್ ಮೂರನೇ ಸೆಮಿಸ್ಟರ್​ನಲ್ಲಿ ಓದುತ್ತಿರುವ ಈತ ಮತ್ತೆ ಶಿಕ್ಷಕ ವೃತ್ತಿಯ ಕಡೆ ಹೊರಟಿದ್ದಾರೆ.

ಸದ್ಯ ಪ್ರಿಲಾನ್ಸ್ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದು, ತಮ್ಮ ಒಲೆ ತಯಾರಿಕೆ ಬಗ್ಗೆ ಮಾತಾನಾಡಿದ ಚಂದ್ರಶೇಖರ್ ಮೋರೆ ಸರಕಾರ ಹೊಗೆ ರಹಿತ ಜೀವನಕ್ಕಾಗಿ  ಈಗ ಗ್ಯಾಸ್ ನೀಡುತ್ತಿದೆ. ಇದು ಖುಷಿಯ ವಿಚಾರ. ನಾನು ಬಹಳ ಹಿಂದಿನಿಂದಲೂ ಹೊಗೆರಹಿತ ಒಲೆ ತಯಾರಿಸುತ್ತಾ ಸಾಧ್ಯವಾದಷ್ಟು  ಬಡ ಜನರ ಕಣ್ಣಿಗೆ ತೊಂದರೆಯಾಗದ ರೀತಿಯಲ್ಲಿ ಒಲೆ ತಯಾರಿಕೆ ಕೆಲಸ ಮಾಡುತ್ತಿದ್ದೇನೆ ಎಂಬ ಸಮಾಧಾನವಿದ್ದು, ಇದು ನನ್ನ ಜೀವನಕ್ಕೂ ಆಸರೆಯಾಗಿದೆ ಎಂದು ಹೇಳಿದರು.

ಈ ಒಲೆಗಳನ್ನು ಮನೆ ಅಷ್ಟೇ ಅಲ್ಲದೆ ಹೊಟೆಲ್​ನಲ್ಲಿಯೂ ಬಳಕೆ ಮಾಡಬಹುದಾಗಿದ್ದು, ಯಾವುದೇ ಹೊಗೆ ಇಲ್ಲದೆ ಕಡಿಮೆ ಕಟ್ಟಿಗೆಯಲ್ಲಿ ಅಡುಗೆ ತಯಾರಿಸಬಹುದು. ಈ ಕಾಯಕ ನನಗೆ ಜೀವನ ನೀಡಿದ್ದು ಆದಷ್ಟು ಕಡಿಮೆ ಖರ್ಚಿನಲ್ಲಿ ಜನರಿಗೆ ಹೊಗೆ ರಹಿತ ಒಲೆ ತಯಾರಿಸಿ ಕೊಡುತ್ತಿದ್ದೇನೆ ಎಂದು ಚಂದ್ರಶೇಖರ್ ಹೇಳಿದ್ದಾರೆ.

ಒಟ್ಟಿನಲ್ಲಿ ಗ್ಯಾಸ್ ಜಮಾನಾದಲ್ಲೂ ಅದಕ್ಕೆ ಸಮನಾಗಿ ಹೊಗೆ ಮುಕ್ತ ಒಲೆ ತಯಾರಿಕೆ ಮಾಡುತ್ತಿರುವ ಕಾರ್ಯ ಚಂದ್ರಶೇಖರ್ ಶ್ಲಾಘನೀಯವಾದದ್ದು ಎಂದರೆ ತಪ್ಪಾಗಲಿಕ್ಕಿಲ್ಲ.

ಸಾವಿನ ಮನೆಯಲ್ಲಿ ಒಲೆಯನ್ನು ಹಚ್ಚುವುದಿಲ್ಲ, ಏಕೆ ಗೊತ್ತಾ?

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್