Hubballi Bus Employees: ಟ್ವಿಟ್ಟರ್​ನಲ್ಲಿ ಸಾರಿಗೆ ನೌಕರರನ್ನು ಉಳಿಸಿ ಚಳುವಳಿ

|

Updated on: Jul 22, 2020 | 6:48 PM

Hubballi Bus Employees: ಕೊರೊನಾದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಜುಲೈ ತಿಂಗಳು ಮುಗಿಯುತ್ತಾ ಬಂದಿದ್ದರು ಸಹ, ಸಾರಿಗೆ ನೌಕರರಿಗೆ ಜೂನ್ ತಿಂಗಳ ಸಂಬಳವನ್ನು ನೀಡದಿರುವುದು ಸಾರಿಗೆ ನೌಕರರಿಗೆ ತೀವ್ರ ತಲೆನೋವು ತಂದಿದೆ. KSRTCಯ 37 ಸಾವಿರ, BMTCಯ 36 ಸಾವಿರ, NWKRTC ಯ 25 ಸಾವಿರ ಹಾಗೂ NEKRTCಯ 22 ಸಾವಿರ ನೌಕರರು ಜೂನ್ ತಿಂಗಳ ವೇತನ ಸಿಗದೇ ಪರದಾಡುತ್ತಿದ್ದಾರೆ. ಇದರಿಂದಾಗಿ ಸಾರಿಗೆ ನೌಕರರು ಟ್ವಿಟರ್ ನಲ್ಲಿ ಸಾರಿಗೆ ನೌಕರರನ್ನು […]

Hubballi Bus Employees: ಟ್ವಿಟ್ಟರ್​ನಲ್ಲಿ ಸಾರಿಗೆ ನೌಕರರನ್ನು ಉಳಿಸಿ ಚಳುವಳಿ
Follow us on

Hubballi Bus Employees: ಕೊರೊನಾದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಜುಲೈ ತಿಂಗಳು ಮುಗಿಯುತ್ತಾ ಬಂದಿದ್ದರು ಸಹ, ಸಾರಿಗೆ ನೌಕರರಿಗೆ ಜೂನ್ ತಿಂಗಳ ಸಂಬಳವನ್ನು ನೀಡದಿರುವುದು ಸಾರಿಗೆ ನೌಕರರಿಗೆ ತೀವ್ರ ತಲೆನೋವು ತಂದಿದೆ.

KSRTCಯ 37 ಸಾವಿರ, BMTCಯ 36 ಸಾವಿರ, NWKRTC ಯ 25 ಸಾವಿರ ಹಾಗೂ NEKRTCಯ 22 ಸಾವಿರ ನೌಕರರು ಜೂನ್ ತಿಂಗಳ ವೇತನ ಸಿಗದೇ ಪರದಾಡುತ್ತಿದ್ದಾರೆ.

ಇದರಿಂದಾಗಿ ಸಾರಿಗೆ ನೌಕರರು ಟ್ವಿಟರ್ ನಲ್ಲಿ ಸಾರಿಗೆ ನೌಕರರನ್ನು ಉಳಿಸಿ ಎಂಬ ಚಳುವಳಿಯನ್ನ ಆರಂಭಿಸಿದ್ದಾರೆ. ಸಾರಿಗೆ ನೌಕರರ ಈ ಟ್ವಿಟರ್ ಚಳುವಳಿಗೆ ಭಾರಿ ಜನ ಬೆಂಬಲ ವ್ಯಕ್ತವಾಗಿದ್ದು, ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು, ಸಾಹಿತಿಗಳು, ಹಾಗೂ ಸಂಘಟನೆಗಳಿಂದ ಭಾರೀ ಬೆಂಬಲ ವ್ಯಕ್ತವಾಗಿದೆ.

Read More:  ರಾಜ್ಯ ಸಾರಿಗೆ ನಿಗಮಗಳು ಸಂಬಳ ಕೊಡ್ತಿಲ್ಲ; ಲಕ್ಷಾಂತರ ನೌಕರರು ಕಂಗಾಲು

Published On - 1:50 pm, Wed, 22 July 20