ವೃದ್ಧರ ಓಡಾಟ ಮೂಲಭೂತ ಹಕ್ಕು: ಸರ್ಕಾರಕ್ಕೆ ಕೋರ್ಟ್ ನೋಟಿಸ್!

|

Updated on: May 28, 2020 | 3:04 PM

ಬೆಂಗಳೂರು: 65 ವರ್ಷ ದಾಟಿದ ವಯೋ ವೃದ್ಧರಿಗೆ ಸಂಚಾರ ನಿರ್ಬಂಧಗೊಳಿಸಿರುವುದನ್ನು ಪ್ರಶ್ನಿಸಿ, ಜಯದೇವ ಎಂಬುವವರು ಪಿಐಎಲ್​ ಸಲ್ಲಿಸಿದ್ದಾರೆ. 65 ವರ್ಷ ಮೇಲ್ಪಟ್ಟವರಿಗೆ ಸಂಚಾರ ನಿರ್ಬಂಧಿಸಲಾಗಿದೆ. ಸರ್ಕಾರದ ಕ್ರಮದಿಂದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಜೈಲಿನಲ್ಲೂ ಒಂಟಿ ಸೆರೆವಾಸಕ್ಕೆ ಅವಕಾಶವಿಲ್ಲ. ಮನೆಯಲ್ಲೇ ಇರಬೇಕೆಂಬ ನಿರ್ಬಂಧದಿಂದ ತೊಂದರೆಯಾಗಿದೆ. ಬಲಹೀನ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹಿರಿಯ ನಾಗರಿಕರಿಗೆ ಸಂಚಾರ ಸ್ವಾತಂತ್ರ್ಯವಿದೆ. ಹೀಗಾಗಿ ಸರ್ಕಾರದ ನಿರ್ಬಂಧ ರದ್ದತಿಗೆ ಮನವಿ ಮಾಡುತ್ತೇನೆ ಎಂದು ಅರ್ಜಿದಾರ ಜಯದೇವ ಅಲವತ್ತುಕೊಂಡಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ರಮೇಶ್ ಪುತ್ತಿಗೆ ವಾದ […]

ವೃದ್ಧರ ಓಡಾಟ ಮೂಲಭೂತ ಹಕ್ಕು: ಸರ್ಕಾರಕ್ಕೆ ಕೋರ್ಟ್ ನೋಟಿಸ್!
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: 65 ವರ್ಷ ದಾಟಿದ ವಯೋ ವೃದ್ಧರಿಗೆ ಸಂಚಾರ ನಿರ್ಬಂಧಗೊಳಿಸಿರುವುದನ್ನು ಪ್ರಶ್ನಿಸಿ, ಜಯದೇವ ಎಂಬುವವರು ಪಿಐಎಲ್​ ಸಲ್ಲಿಸಿದ್ದಾರೆ.

65 ವರ್ಷ ಮೇಲ್ಪಟ್ಟವರಿಗೆ ಸಂಚಾರ ನಿರ್ಬಂಧಿಸಲಾಗಿದೆ. ಸರ್ಕಾರದ ಕ್ರಮದಿಂದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಜೈಲಿನಲ್ಲೂ ಒಂಟಿ ಸೆರೆವಾಸಕ್ಕೆ ಅವಕಾಶವಿಲ್ಲ. ಮನೆಯಲ್ಲೇ ಇರಬೇಕೆಂಬ ನಿರ್ಬಂಧದಿಂದ ತೊಂದರೆಯಾಗಿದೆ. ಬಲಹೀನ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹಿರಿಯ ನಾಗರಿಕರಿಗೆ ಸಂಚಾರ ಸ್ವಾತಂತ್ರ್ಯವಿದೆ. ಹೀಗಾಗಿ ಸರ್ಕಾರದ ನಿರ್ಬಂಧ ರದ್ದತಿಗೆ ಮನವಿ ಮಾಡುತ್ತೇನೆ ಎಂದು ಅರ್ಜಿದಾರ ಜಯದೇವ ಅಲವತ್ತುಕೊಂಡಿದ್ದಾರೆ.

ಅರ್ಜಿದಾರರ ಪರ ಹಿರಿಯ ವಕೀಲ ರಮೇಶ್ ಪುತ್ತಿಗೆ ವಾದ ಮಂಡನೆ ಮಾಡಿದರು. ಜೂನ್ 4ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.