ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವ್ಯಕ್ತಿ ಮೃತ
ಮಂಗಳೂರು: ಮಸೀದಿಯಲ್ಲಿ ನಮಾಜ್ ಮಾಡುವಾಗ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕಳಾರ ಎಂಬಲ್ಲಿ ನಡೆದಿದೆ. ಕಳಾರ ನಿವಾಸಿ ಅಬ್ದುಲ್ ಖಾದರ್ ಮೃತ ವ್ಯಕ್ತಿ. ನಮಾಜ್ ಮಾಡುತ್ತಿದ್ದ ಸ್ಥಳದಲ್ಲೇ ಈತನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಅಬ್ದುಲ್ ಖಾದರ್ ಪ್ರತಿನಿತ್ಯ ನಮಾಜ್ ಮಾಡಲು ಮಸೀದಿಗೆ ಹೋಗುತ್ತಿದ್ದ. ಇಂದು ಕೂಡ ಮುಂಜಾನೆ 4ಗಂಟೆ ಸುಮಾರಿಗೆ ಮಸೀದಿಗೆ ತೆರಳಿದ್ದಾರೆ. ನಂತರ ತಮ್ಮ ಪಾಡಿಗೆ ನಮಾಜ್ ಮಾಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಈ ವೇಳೆ […]
ಮಂಗಳೂರು: ಮಸೀದಿಯಲ್ಲಿ ನಮಾಜ್ ಮಾಡುವಾಗ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕಳಾರ ಎಂಬಲ್ಲಿ ನಡೆದಿದೆ. ಕಳಾರ ನಿವಾಸಿ ಅಬ್ದುಲ್ ಖಾದರ್ ಮೃತ ವ್ಯಕ್ತಿ. ನಮಾಜ್ ಮಾಡುತ್ತಿದ್ದ ಸ್ಥಳದಲ್ಲೇ ಈತನ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಅಬ್ದುಲ್ ಖಾದರ್ ಪ್ರತಿನಿತ್ಯ ನಮಾಜ್ ಮಾಡಲು ಮಸೀದಿಗೆ ಹೋಗುತ್ತಿದ್ದ. ಇಂದು ಕೂಡ ಮುಂಜಾನೆ 4ಗಂಟೆ ಸುಮಾರಿಗೆ ಮಸೀದಿಗೆ ತೆರಳಿದ್ದಾರೆ. ನಂತರ ತಮ್ಮ ಪಾಡಿಗೆ ನಮಾಜ್ ಮಾಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಈ ವೇಳೆ ಒಟ್ಟು ಮೂರು ಜನರು ನಮಾಜ್ ಮಾಡುತ್ತಿದ್ದರು.
ಅಬ್ದುಲ್ ಖಾದರ್ ನೆಲಕ್ಕೆ ಕುಸಿಯುತ್ತಿದ್ದಂತೆ ಇದೇ ಸ್ಥಳದಲ್ಲೇ ಇದ್ದ ವ್ಯಕ್ತಿಯೊಬ್ಬರು ಎಬ್ಬಿಸಲು ಹೋದಾಗ ಖಾದರ್ ಮೃತಪಟ್ಟಿರುವುದು ದೃಢವಾಗಿದೆ. ಈ ಎಲ್ಲಾ ದೃಶ್ಯಗಳು ಮಸೀದಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Published On - 2:25 pm, Thu, 28 May 20