ಹಸುಗಳನ್ನು ಕದ್ದು ಮಾರುತ್ತಿದ್ದ ಐನಾತಿ ಕಳ್ಳರು ಅರೆಸ್ಟ್
ತುಮಕೂರು: ರಾತ್ರಿ ವೇಳೆ ರೈತರ ಜಾನುವಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ. ಸಿಂಗನಹಳ್ಳಿ ಗ್ರಾಮದಲ್ಲಿರುವ ಹನುಮಂತರಾಯಪ್ಪ ಎಂಬುವವರಿಗೆ ಸೇರಿದ ಸುಮಾರು 35 ಸಾವಿರ ಮೌಲ್ಯದ ಸೀಮೆ ಹಸು ಕಳವಾಗಿತ್ತು. ಈ ಬಗ್ಗೆ ಮೇ 27ರಂದು ದೂರು ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಎಸ್ಪಿ ಡಾ ಕೆ. ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಟಿ.ಜೆ ಉದೇಶ್ ಹಾಗೂ ಡಿವೈಎಸ್ಪಿ ಎಂ ಪ್ರವೀಣ್ […]
ತುಮಕೂರು: ರಾತ್ರಿ ವೇಳೆ ರೈತರ ಜಾನುವಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ. ಸಿಂಗನಹಳ್ಳಿ ಗ್ರಾಮದಲ್ಲಿರುವ ಹನುಮಂತರಾಯಪ್ಪ ಎಂಬುವವರಿಗೆ ಸೇರಿದ ಸುಮಾರು 35 ಸಾವಿರ ಮೌಲ್ಯದ ಸೀಮೆ ಹಸು ಕಳವಾಗಿತ್ತು. ಈ ಬಗ್ಗೆ ಮೇ 27ರಂದು ದೂರು ನೀಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಎಸ್ಪಿ ಡಾ ಕೆ. ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಟಿ.ಜೆ ಉದೇಶ್ ಹಾಗೂ ಡಿವೈಎಸ್ಪಿ ಎಂ ಪ್ರವೀಣ್ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಎಸ್ ಸರ್ದಾರ್ ನೇತೃತ್ವದ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಹಿಡಿಯಲಾಗಿದೆ.
ಆರೋಪಿಗಳಾದ ಶಬ್ಬಿರ್ ಅಹಮ್ಮದ್ ಹಾಗೂ ಸೈಯದ್ ಮುಬಾರಕ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು. ಅವರಿಂದ 4 ಲಕ್ಷ ಮೌಲ್ಯದ 7 ಸೀಮೆ ಹಸುಗಳನ್ನು ವಶಕ್ಕೆ ಪಡೆದು ರೈತರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ ರೈತರಿಗೆ ಹಸುಗಳನ್ನು ಹಸ್ತಾಂತರಿಸುತ್ತಿದ್ದಂತೆ ರೈತರು ಸಿಹಿ ಹಂಚಿ ಪರಸ್ಪರ ಸಂತಸ ವ್ಯಕ್ತಪಡಿಸಿದ್ದಾರೆ.
Published On - 12:17 pm, Thu, 28 May 20