ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದಾರೆ, ನಾನಂತೂ ನಿದ್ರೆ ಮಾಡಲ್ಲ ಎಂದ ರೇಣುಕಾಚಾರ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Nov 12, 2023 | 3:37 PM

ಬಿವೈ ವಿಜಯೇಂದ್ರ ಅವರಿಗೆ ಹೈಕಮಾಂಡ್ ಕರ್ನಾಟಕ ಬಿಜೆಪಿ ಪಟ್ಟ ಕಟ್ಟಿದೆ, ಇದರಿಂದ ಬಿಎಲ್​ ಸಂತೋಷ್ ಬಣಕ್ಕೆ ಕೊಂಚ ಬೇಸರವಾಗಿದ್ದರೆ, ಬಿಎಸ್ ಯಡಿಯೂರಪ್ಪ ಬೆಂಬಲಿಗರು ಸಂತಸಗೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ಫುಲ್ ಖುಷ್ ಆಗಿದ್ದು, ನಾನಂತೂ ನಿದ್ರೆ ಮಾಡಲ್ಲ ಎಂದಿದ್ದಾರೆ.

ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದಾರೆ, ನಾನಂತೂ ನಿದ್ರೆ ಮಾಡಲ್ಲ ಎಂದ ರೇಣುಕಾಚಾರ್ಯ
Follow us on

ದಾವಣಗೆರೆ, (ನವೆಂಬರ್ 12): ಕರ್ನಾಟಕ ರಾಜ್ಯ ಬಿಜೆಪಿ (BJP) ಪಾಳೆಯದಲ್ಲೀಗ ಮಿಂಚಿನ ಸಂಚಾರವಾದಂಥ ಅನುಭವವಾಗಿದೆ. ಅದಕ್ಕೆ ಕಾರಣ ಬಿಎಸ್ ಯಡಿಯೂರಪ್ಪ(BS Yediyurappa) ಪುತ್ರ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಹುದ್ದಗೆ ನಿಯುಕ್ತಿಗೊಳಿಸಿರುದು. ಅದರಲ್ಲೂ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕ ಮಾರನೇ ದಿನವೇ, ವಿಜಯೇಂದ್ರ ಪಕ್ಷದಲ್ಲಿ ಹೊಸ ಸಂದೇಶ ಪಾಸ್ ಮಾಡಿದ್ದಾರೆ. ಅತ್ತ ತಮ್ಮಂತೆಯೇ ಮಗನಿಗೂ ದೊಡ್ಡ ಜವಾಬ್ದಾರಿ ಸಿಕ್ಕಿರೋದು ಸಹಜವಾಗೇ ಬಿ.ಎಸ್.ಯಡಿಯೂರಪ್ಪ ಅವರನ್ನ ಮತ್ತಷ್ಟು ಆ್ಯಕ್ಟೀವ್ ಆಗುವಂತೆ ಮಾಡಿದೆ. ಅಲ್ಲದೇ ಬಿಎಸ್​ವೈ ಬೆಂಬಲಿಗರು ಸಂತಸಗೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ಫುಲ್ ಖುಷ್ ಆಗಿದ್ದು, ನಾನಂತೂ ನಿದ್ರೆ ಮಾಡಲ್ಲ ಎಂದಿದ್ದಾರೆ.

ಇಂದು ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಂಪಿ ರೇಣುಕಾಚಾರ್ಯ, ಕೆಲವರು ನನ್ನನ್ನ ಬಿಜೆಪಿಯಿಂದ ಹೊರ ಹಾಕಬೇಕು ಎಂದು ಪ್ಲಾನ್ ಮಾಡಿದ್ದರು. ಅದು ಸಾಧ್ಯವಿಲ್ಲ. ನಾನು ಕೂಡಾ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ. ಆದ್ರೆ ಪಕ್ಷದ ವರಿಷ್ಠರು ಈಗ ಬಿವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಜವಾಬ್ದಾರಿ ನೀಡಿದ್ದಾರೆ. ಎಲ್ಲರೂ ಹೊಂದಾಣಿಕೆಯಿಂದ ಹೋಗಬೇಕು. ನಾನಂತೂ ನಿದ್ರೆ ಮಾಡಲ್ಲ. ಕಾರಣ ಈಗ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿದ್ದಾರೆ. ನನ್ನ ಪಾಡಿಗೆ ನಾನು ರಾಜ್ಯವನ್ನು ಸುತ್ತುವೆ ಎಂದರು.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಅಧಿಕಾರ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್, ತಂದೆ ಮಾರ್ಗ ಅನುಸರಿಸಿದ ವಿಜಯೇಂದ್ರ

ಕುಟುಂಬ ರಾಜಕೀಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಿದ್ದಾರೆ. ಹೀಗೆ ಹೇಳುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ. ವಿಜಯೇಂದ್ರ ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ. ಅವರೊಬ್ಬ ಯುವ ಸಂಘಟಕ. ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡುವ ಶಕ್ತಿ ಅವರಲ್ಲಿದೆ ಎಂದು ತಿರುಗೇಟು ನೀಡಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ