‘ಸಿದ್ದರಾಮಯ್ಯ ನನ್ನ ಬಳಿ ಹಣ ಪಡೆದಿದ್ರು, ಇನ್ನೂ ವಾಪಸ್ ನೀಡಿಲ್ಲ’

|

Updated on: Nov 17, 2019 | 3:08 PM

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದ್ರೋಹಿ ಎಂದು ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದ್ರೋಹಿ, ನಾನಲ್ಲ. ಕುರುಬ ಸಮುದಾಯಕ್ಕೆ, ನನಗೆ ಅವರು ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾದಾಮಿ ಕ್ಷೇತ್ರದ ಎಲೆಕ್ಷನ್ ವೇಳೆ ಸಿದ್ದರಾಮಯ್ಯ ನನ್ನ ಬಳಿ ಚೆಕ್ ಮೂಲಕ ಹಣ ಪಡೆದಿದ್ರು. ಆದರೆ ಪಡೆದ ಹಣವನ್ನು ಇನ್ನೂ ವಾಪಸ್ ನೀಡಿಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಒಂದು ಮೆಡಿಕಲ್ […]

‘ಸಿದ್ದರಾಮಯ್ಯ ನನ್ನ ಬಳಿ ಹಣ ಪಡೆದಿದ್ರು, ಇನ್ನೂ ವಾಪಸ್ ನೀಡಿಲ್ಲ
Follow us on

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದ್ರೋಹಿ ಎಂದು ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದ್ರೋಹಿ, ನಾನಲ್ಲ. ಕುರುಬ ಸಮುದಾಯಕ್ಕೆ, ನನಗೆ ಅವರು ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾದಾಮಿ ಕ್ಷೇತ್ರದ ಎಲೆಕ್ಷನ್ ವೇಳೆ ಸಿದ್ದರಾಮಯ್ಯ ನನ್ನ ಬಳಿ ಚೆಕ್ ಮೂಲಕ ಹಣ ಪಡೆದಿದ್ರು. ಆದರೆ ಪಡೆದ ಹಣವನ್ನು ಇನ್ನೂ ವಾಪಸ್ ನೀಡಿಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಒಂದು ಮೆಡಿಕಲ್ ಕಾಲೇಜು ಕಟ್ಟಿಲ್ಲ, ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದು ನಾವು, ಸಿದ್ದರಾಮಯ್ಯನಲ್ಲ.

ಅವರು ಕೈಕಾಲು ಹಿಡಿದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು. ನಮ್ಮ ಹಣವನ್ನು ಹಾಕಿ ಸಿದ್ದರಾಮಯ್ಯರನ್ನು ಗೆಲ್ಲಿಸಿದ್ದೆವು. ಆದರೆ ಈಗ ಅವರು ಎಲ್ಲ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ನನ್ನ ಸಹೋದರ ಪಿಳ್ಳಣ್ಣ ನನಗೆ ಇರುವೆ ಸಮಾನ. ಅವನು ಚಲಾವಣೆಯಾಗದ ನಾಣ್ಯ, ಅವನ ಬಗ್ಗೆ ಮಾತಾಡಲ್ಲ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.