ಟಿಕೆಟ್​ ಸಿಗುವ ಮುನ್ನವೇ.. RR ನಗರದಲ್ಲಿ ‘ಮುನಿ’ದ್ವಯರ ಬೆಂಬಲಿಗರ ಭರ್ಜರಿ ಕ್ಯಾಂಪೇನ್

ಬೆಂಗಳೂರು: RR ನಗರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಟಿಕೆಟ್​ ಪಡೆಯಲು ಬಿಜೆಪಿ ಪಕ್ಷದ ಆಕಾಂಕ್ಷಿಗಳು ತೆರೆಮರೆಯಲ್ಲಿ ಭಾರಿ ಸರ್ಕಸ್​​ ನಡೆಸುತ್ತಿದ್ದಾರೆ. ಇದಲ್ಲದೆ, ಅಭ್ಯರ್ಥಿ ಘೋಷಣೆಗೂ ಮುನ್ನವೇ ಆಕಾಂಕ್ಷಿಗಳಿಂದ ಭರ್ಜರಿ ಪ್ರಚಾರ ಸಹ ನಡೆದಿದೆ ಎಂದು ಹೇಳಲಾಗಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಮುನಿರತ್ನ ಹಾಗೂ ತುಳಸಿ ಮುನಿರಾಜು ಗೌಡ ಬೆಂಬಲಿಗರಿಂದ ಪ್ರಚಾರ ನಡೆಸಲಾಗುತ್ತಿದ್ದು ಇಬ್ಬರು ಮುಖಂಡರ ಬೆಂಬಲಿಗರು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ನಾಯಕನಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಪ್ರಚಾರ ನೆಡೆಸುತ್ತಿದ್ದಾರೆ. ಮತ್ತೊಂದೆಡೆ, ಟಿಕೆಟ್‌ಗಾಗಿ ಮುನಿರತ್ನ […]

ಟಿಕೆಟ್​ ಸಿಗುವ ಮುನ್ನವೇ.. RR ನಗರದಲ್ಲಿ ‘ಮುನಿ’ದ್ವಯರ ಬೆಂಬಲಿಗರ ಭರ್ಜರಿ ಕ್ಯಾಂಪೇನ್

Updated on: Oct 11, 2020 | 4:14 PM

ಬೆಂಗಳೂರು: RR ನಗರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಟಿಕೆಟ್​ ಪಡೆಯಲು ಬಿಜೆಪಿ ಪಕ್ಷದ ಆಕಾಂಕ್ಷಿಗಳು ತೆರೆಮರೆಯಲ್ಲಿ ಭಾರಿ ಸರ್ಕಸ್​​ ನಡೆಸುತ್ತಿದ್ದಾರೆ. ಇದಲ್ಲದೆ, ಅಭ್ಯರ್ಥಿ ಘೋಷಣೆಗೂ ಮುನ್ನವೇ ಆಕಾಂಕ್ಷಿಗಳಿಂದ ಭರ್ಜರಿ ಪ್ರಚಾರ ಸಹ ನಡೆದಿದೆ ಎಂದು ಹೇಳಲಾಗಿದೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಮುನಿರತ್ನ ಹಾಗೂ ತುಳಸಿ ಮುನಿರಾಜು ಗೌಡ ಬೆಂಬಲಿಗರಿಂದ ಪ್ರಚಾರ ನಡೆಸಲಾಗುತ್ತಿದ್ದು ಇಬ್ಬರು ಮುಖಂಡರ ಬೆಂಬಲಿಗರು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ನಾಯಕನಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಪ್ರಚಾರ ನೆಡೆಸುತ್ತಿದ್ದಾರೆ.

ಮತ್ತೊಂದೆಡೆ, ಟಿಕೆಟ್‌ಗಾಗಿ ಮುನಿರತ್ನ ಹಾಗೂ ತುಳಸಿ ಮುನಿರಾಜು ಗೌಡ ಭಾರಿ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ತೆರೆಮರೆಯಲ್ಲಿ, ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವ ‘ಮುನಿ’ದ್ವಯರ ನಡುವೆ ಭಾರಿ ಪೈಪೋಟಿ ಮಾರ್ಪಟ್ಟಿದೆ ಎಂಬ ಮಾಹಿತಿ ಸಿಕ್ಕಿದೆ.