ರಾಯಚೂರು: ರಸ್ತೆಯಲ್ಲಿ ಅಡ್ಡ ನಿಂತಿದನ್ನು ಪ್ರಶ್ನೆ ಮಾಡಿದಕ್ಕೆ ದೇವದುರ್ಗ ತಾಲೂಕಿನ ಸ್ಯಾವಂತಗಲ್ಲ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಓರ್ವನ ಹತ್ಯೆಗೈಯ್ಯಲಾಗಿದೆ. ಮರಣ ಹೊಂದಿದ ದುರ್ದೈವಿ ಅಮರೇಶ್(20) ಎಂದು ತಿಳಿದು ಬಂದಿದೆ. ಆರೋಪಿಗಳಾದ ಸಾಗರ, ವೀರೆಶ, ಸುನೀಲ್ ಮತ್ತು ಬಸವ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಈ ಗಲಾಟೆ ಸಂಬಂಧ ನಾಲ್ವರನ್ನು ಹತ್ಯೆಗೈಯ್ಯಲು ಪ್ಲಾನ್ ನಡೆದಿತ್ತು. ಓರ್ವನನ್ನು ಸ್ಥಳದಲ್ಲೇ ಕೊಲೆ ಮಾಡಿದ್ದಾರೆ. ಇನ್ನುಳಿದ ಮೂವರು ಗಂಭೀರ ಸ್ಥಿತಿಯಲ್ಲಿದ್ದು ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಒಟ್ಟು 8 ಜನರ ಗ್ಯಾಂಗ್ ನಾಲ್ವರ ಮೇಲೆ ದಾಳಿ ಮಾಡಿದ್ದರು ಎಂದು ತಿಳಿದು ಬಂದಿದೆ.
ದೇವದುರ್ಗ ತಾಲೂಕಿನ ಸ್ಯಾವಂತಗಲ್ ಗ್ರಾಮದ ಜಾಲಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪರಾರಿಯಾದ ನಾಲ್ವರು ಹಂತಕರನ್ನು ಪೊಲೀಸರು ಸೆರೆ ಹಿಡಿದಿದ್ದು, ಇನ್ನು ನಾಲ್ವರಿಗಾಗಿ ಹುಡುಕಾಟ ನಡೆಯುತ್ತಿದೆ.
ಬೇಟೆಗೆ ತೆರಳಿದ್ದ ವ್ಯಕ್ತಿಗೆ ಗುಂಡು ತಗುಲಿ ಸಾವು, ಇದು ಕೊಲೆಯೆಂದ ಮೃತನ ಸಹೋದರ
Published On - 8:30 am, Fri, 25 December 20