ಒಂದೇ ದಿನ ಎರಡೆರಡು ಹಬ್ಬ: ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ, ಕ್ರೈಸ್ತ ಬಾಂಧವರಿಂದ ಸಿಂಪಲ್ ಕ್ರಿಸ್ ಮಸ್ ಆಚರಣೆ..
ಇಂದು ಎರಡೆರಡು ಹಬ್ಬ. ಒಂದ್ಕಡೆ ಕ್ರಿಸ್‌ಮಸ್, ಇನ್ನೊಂದ್ಕಡೆ ವೈಕುಂಠ ಏಕಾದಶಿ ಸಂಭ್ರಮ. ಕೊರೊನಾ ಕಟ್ಟು ಪಾಡುಗಳ ಜತೆಗೆ ಹಬ್ಬ ಆಚರಿಸೋಕೆ ಅವಕಾಶ ಕಲ್ಪಿಸಲಾಗಿದೆ. ಹಾಗಿದ್ರೆ ಡಬಲ್ ಸಂಭ್ರಮ ಸೆಲೆಬ್ರೇಷನ್ ಯಾವ ರೀತಿ ಇರುತ್ತೆ?. ಜನ ಏನೆಲ್ಲಾ ರೂಲ್ಸ್ ಫಾಲೋ ಮಾಡಬೇಕು ಅಂತ ಇಲ್ಲಿ ಓದಿ ತಿಳಿದುಕೊಳ್ಳಿ.
ಬೆಂಗಳೂರು: ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ. ಹೀಗಾಗಿ ಬೆಂಗಳೂರಿನ ವೈಯಾಲಿಕಾವಲ್ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಡಗರ ಜೋರಾಗಿದೆ. ಇಂದಿನಿಂದ ಜನವರಿ 3 ರ ವರೆಗೆ ವೈಕುಂಠ ಏಕಾದಶಿ ಪೂಜೆ ನಡೆಯಲಿದೆ.
ತಿರುಪತಿಯಲ್ಲಿ ಆಯೋಜನೆ ಮಾಡಿರುವಂತೆ ಈ ಟಿಟಿಡಿ ದೇವಸ್ಥಾನದಲ್ಲಿ 10 ದಿನಗಳ ಕಾಲ ವೈಕುಂಠ ಏಕಾದಶಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಗರ್ಭಿಣಿಯರು, ವಿಕಲಚೇತನರು, 70 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ವಿಶೇಷ ವಿಐಪಿ ಪಾಸ್ ವಿತರಣೆ ಮಾಡಲಾಗಿದೆ. ಭದ್ರತೆಗಾಗಿ 150 ಪೊಲೀಸರ ನಿಯೋಜನೆ ಆಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರ ವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ್ಶನದ ವೇಳೆ ಮಾಸ್ಕ್ ಧರಿಸೋದು, ದೈಹಿಕ ಅಂತರ ಕಾಯ್ದುಕೊಳ್ಳೋದು ಕಡ್ಡಾಯವಾಗಿದೆ.
ಇಸ್ಕಾನ್ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧ: ಇನ್ನು ಕೊರೊನಾ ಭೀತಿ ಹಿನ್ನೆಲೆ ಇಸ್ಕಾನ್ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಇಸ್ಕಾನ್ ವೆಬ್‌ಸೈಟ್‌ನಲ್ಲಿ ಪೂಜೆ ವೀಕ್ಷಣೆ ಮಾಡಬಹುದು. ಹಾಗೂ K.R.ಮಾರ್ಕೆಟ್ ಬಳಿಯಿರುವ ಕೋಟೆ ವೆಂಕಟರಮಣ ದೇಗುಲದಲ್ಲೂ ದರ್ಶನ ಇಲ್ಲ.
ಇನ್ನು ಇಂದು ವೈಕುಂಠ ಏಕಾದಶಿ ಜತೆ ಕ್ರಿಸ್‌ಮಸ್ ಹಬ್ಬದ ಸಂಭ್ರಮವೂ ಇದೆ. ಕ್ರೈಸ್ತರು ಚರ್ಚ್ ಗೆ ಹೋಗಿ ಯೇಸುವಿನ ದರ್ಶನ ಪಡೆಯಲಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕ್ರಿಸ್‌ಮಸ್ ಸೆಲೆಬ್ರೇಟ್ ಮಾಡೋಕೆ ಅವಕಾಶ ಇದೆ. ಆದ್ರೆ ಚರ್ಚ್‌ನ ಆವರಣದಲ್ಲಿ ಹಸ್ತಲಾಘವ ಮತ್ತು ಆಲಿಂಗನಕ್ಕೆ ಬ್ರೇಕ್ ಹಾಕಲಾಗಿದೆ. ಕೊರೊನಾ ಮಾರ್ಗಸೂಚಿಗಳ ಅನುಗುಣವಾಗಿ ಕ್ರೈಸ್ತರು ಕ್ರಿಸ್‌ಮಸ್ ಸೆಲೆಬ್ರೇಟ್ ಮಾಡಬಹುದು. ಕೊರೊನಾ ಇರೋದ್ರಿಂದ ಸರಳವಾಗಿ ಯೇಸುವಿನ ಸ್ಮರಣೆ ಮಾಡೋಕೆ ಸಜ್ಜಾಗಿದ್ದಾರೆ.
ಒಟ್ನಲ್ಲಿ ಕ್ರೂರಿ ಕೊರೊನಾದಿಂದ ಅದ್ಧೂರಿಯಾಗಿ ನಡೆಯುತ್ತಿದ್ದ ಹಬ್ಬಗಳಿಗೆ ಬ್ರೇಕ್ ಬಿದ್ದಿದ್ದು, ಜನ ಸರಳವಾಗಿ ಹಬ್ಬವನ್ನ ಆಚರಿಸಿ ಖುಷಿ ಪಡಬೇಕಾಗಿದೆ.
ಹೊಸ ವರ್ಷಕ್ಕೆ ಸಿದ್ಧವಾಗ್ತಿವೆ ಸಾಲು ಸಾಲು ಸಿನಿಮಾಗಳು.. 2021ಕ್ಕೆ ಸ್ಯಾಂಡಲ್ವುಡ್ ರಸದೌತಣ
Published On - 7:16 am, Fri, 25 December 20