Muslim Area: ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ -ಅಪ್ಪ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿಕೊಂಡ ಪುತ್ರ ಯತೀಂದ್ರ!

| Updated By: ಸಾಧು ಶ್ರೀನಾಥ್​

Updated on: Aug 18, 2022 | 4:50 PM

MLA Dr Yatheendra: ಮುಸ್ಲಿಂ ಏರಿಯಾಗಳಲ್ಲಿ ಫೋಟೋ ಹಾಕಿದ್ರೆ ಕೋಪ ಬರುತ್ತೆ. ಸಾವರ್ಕರ್ ಫೋಟೋ ಹಾಕಿದಾಗ ಪ್ರಚೋದನಕಾರಿಯಾಗುತ್ತೆ. ಹಿಂದೂ ಏರಿಯಾಗಳಲ್ಲಿ ಮುಸ್ಲಿಂ ನಾಯಕರ ಫೋಟೋ ಹಾಕಿದರೆ ಹಿಂದುಗಳಿಗೆ ಕೋಪ ಕೋಪ ಬರುವುದಿಲ್ಲವೇ? ಎಂದು ಡಾ. ಯತೀಂದ್ರ ಇದೇ ವೇಳೆ ಪ್ರಶ್ನಿಸಿದ್ದಾರೆ.

Muslim Area: ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ -ಅಪ್ಪ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿಕೊಂಡ ಪುತ್ರ ಯತೀಂದ್ರ!
ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕು -ಅಪ್ಪ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಪುತ್ರ ಯತೀಂದ್ರ!
Follow us on

ಮೈಸೂರು: ಇತ್ತೀಚೆಗೆ ಶಿವಮೊಗ್ಗದಲ್ಲಿ ವೀರ್ ಸಾವರ್ಕರ್ (Veer Savarkar) ಫೋಟೋ ಹಾಕುವ ವಿಚಾರದಲ್ಲಿ SDPI ಬೆಂಬಲದಲ್ಲಿ ಮುಸ್ಲಿಮರು ಹಿಂಸಾಚಾರ ನಡೆಸಿದ್ದರು. ಆ ವೇಳೆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕು’ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು. ಅದು #MuslimArea ಟ್ರೆಂಡ್​ ಆಗುವಷ್ಟು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅದಕ್ಕೆ ಸಿದ್ದರಾಮಯ್ಯ (CLP leader Siddaramaiah) ಸಮಜಾಯಿಷಿ ನೀಡಿದ್ದರಾದರೂ ಅದು ಪೇಲವವಾಗಿತ್ತು ಎಂದು ಬಿಜೆಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳು ಆಕ್ರೋಶಗೊಂಡಿದ್ದವು. ಇದೀಗ ಕಾಂಗ್ರೆಸ್​ ಶಾಸಕಾಂಗ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ (MLA Son Dr Yatheendra) ಅವರು ಅಪ್ಪನನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದಾರೆ.

ಡಾ. ಯತೀಂದ್ರ ಎತ್ತಿದರು ಮತ್ತೊಂದು ಪ್ರಶ್ನೆಯಾ…

ಮುಸ್ಲಿಂ ಏರಿಯಾಗಳಲ್ಲಿ ಫೋಟೋ ಹಾಕಿದ್ರೆ ಕೋಪ ಬರುತ್ತೆ. ಸಾವರ್ಕರ್ ಫೋಟೋ ಹಾಕಿದಾಗ ಪ್ರಚೋದನಕಾರಿಯಾಗುತ್ತೆ. ಹಿಂದೂ ಏರಿಯಾಗಳಲ್ಲಿ ಮುಸ್ಲಿಂ ನಾಯಕರ ಫೋಟೋ ಹಾಕಿದರೆ ಹಿಂದುಗಳಿಗೆ ಕೋಪ ಕೋಪ ಬರುವುದಿಲ್ಲವೇ? ಎಂದು ಡಾ. ಯತೀಂದ್ರ ಇದೇ ವೇಳೆ ಪ್ರಶ್ನಿಸಿದ್ದಾರೆ.

ಟಿ.ನರಸೀಪುರದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೋಮುದ್ವೇಷ ಹೆಚ್ಚಾಗುತ್ತಿದೆ. ಒಬ್ಬರನೊಬ್ಬರು ಸಾಯಿಸುವುದು, ಕೊಲೆ ಮಾಡುವುದು ಹೆಚ್ಚಾಗುತ್ತಿದೆ. ಇದಕೆಲಾ ಪರೋಕ್ಷವಾಗಿ ಸಿಎಂ ಬೊಮ್ಮಾಯಿ ಕೂಡ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಯ ವೈಫಲ್ಯ ಮುಚ್ಚಿ ಹಾಕಲು ಅನಗತ್ಯ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಜರಿದಿದ್ದಾರೆ.

ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ, ಅವರೊಬ್ಬ ಮೂಲಭೂತವಾದಿ. ಮುಸ್ಲಿಮರನ್ನು ಸಾವರ್ಕರ್ ಭಾರತೀಯರೆಂದು ಒಪ್ಪಿಕೊಂಡಿರಲಿಲ್ಲ. ಮುಸ್ಲಿಂ ಮತ್ತು ಕ್ರಿಶ್ಚಿಯನ್ 2ನೇ ದರ್ಜೆಯ ಪ್ರಜೆಗಳಾಗಿ ಇರಬೇಕು. ಹಿಂದೂ ರಾಷ್ಟ್ರವನ್ನು ಒಪ್ಪಿಕೊಂಡು ಇರಬೇಕೆಂದು ಹೇಳಿದವರು. ಸಾವರ್ಕರ್ ಅನ್ಯಮತದ ದ್ವೇಷಿ ಎಂದು ಡಾ. ಯತೀಂದ್ರ ವಾಗ್ದಾಳಿ ನಡೆಸಿದ್ದಾರೆ.

Published On - 3:11 pm, Thu, 18 August 22