ಕರುಣಾಜನಕ ಸಂಗತಿ: ಪುತ್ರನ ಶಿವಗಣಾರಾಧನೆ ದಿನವೇ ತಾಯಿ ಕೊನೆಯುಸಿರು, ಅದ ನೋಡಿ ಮತ್ತೊಬ್ಬ ಪುತ್ರ-ತಹಸೀಲ್ದಾರ್​ ಅಸ್ವಸ್ಥ

Kushtagi: 9 ದಿನಗಳ ಅಂತರದಲ್ಲಿ ತಾಯಿ-ಮಗ (Son-Mother) ಸಾವಿಗೀಡಾಗಿರುವ ಸುದ್ದಿ ಕೇಳಿ ಮತ್ತಿಬ್ಬರು ಮಕ್ಕಳೂ ಸಹ ಅಸ್ವಸ್ಥಗೊಂಡಿದ್ದಾರೆ. ಬಿ.ಪಿ. ಏರುಪೇರಾಗಿ ತಹಶೀಲ್ದಾರ್ ಆಗಿರುವ ಮತ್ತೊಬ್ಬ ಪುತ್ರ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕರುಣಾಜನಕ ಸಂಗತಿ: ಪುತ್ರನ ಶಿವಗಣಾರಾಧನೆ ದಿನವೇ ತಾಯಿ ಕೊನೆಯುಸಿರು, ಅದ ನೋಡಿ ಮತ್ತೊಬ್ಬ ಪುತ್ರ-ತಹಸೀಲ್ದಾರ್​ ಅಸ್ವಸ್ಥ
ಪುತ್ರನ ಶಿವಗಣಾರಾಧನೆ ದಿನವೇ ತಾಯಿ ಕೊನೆಯುಸಿರು, ಅದ ನೋಡಿ ಮತ್ತೊಬ್ಬ ಪುತ್ರ ತಹಸೀಲ್ದಾರ್​ ಅಸ್ವಸ್ಥ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 18, 2022 | 2:57 PM

ಕೊಪ್ಪಳ‌: ಪುತ್ರನ ಶಿವಗಣಾರಾಧನೆ ದಿನವೇ ತಾಯಿ ಕೊನೆಯುಸಿರೆಳೆದಿದ್ದಾರೆ. ಕೊಪ್ಪಳ‌ ಜಿಲ್ಲೆ ಕುಷ್ಟಗಿಯಲ್ಲಿ (Kushtagi) ಈ ಕರುಣಾಜನಕ/ ಹೃದಯವಿದ್ರಾವಕ ಘಟನೆ ನಡೆದಿದೆ. ಆಗಸ್ಟ್​ 9ರಂದು ಲೋ ಬಿ.ಪಿ.‌ಯಿಂದಾಗಿ (Low BP) ರವಿಕುಮಾರ್ ಸಾವನ್ನಪ್ಪಿದ್ದರು. ಆದರೆ ನಿನ್ನೆ ಬುಧವಾರ ಶಿವಗಣಾರಾಧನೆ ವೇಳೆ ತಾಯಿಗೆ ಹೃದಯಾಘಾತವಾಗಿದೆ (Heart Attack). ಅದರಿಂದ ತಾಯಿ ಮಾಬಮ್ಮ‌ ಕೆಂಗಾರಿ ನಿಧನ ಹೊಂದಿದ್ದಾರೆ.

ಕೇವಲ 9 ದಿನಗಳ ಅಂತರದಲ್ಲಿ ತಾಯಿ-ಮಗ (Son-Mother) ಸಾವಿಗೀಡಾಗಿರುವ ಸುದ್ದಿ ಕೇಳಿ ಮತ್ತಿಬ್ಬರು ಮಕ್ಕಳೂ ಸಹ ಅಸ್ವಸ್ಥಗೊಂಡಿದ್ದಾರೆ. ಬಿ.ಪಿ. ಏರುಪೇರಾಗಿ ಪುತ್ರ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಜನಿಕಾಂತ್, ಗಜೇಂದ್ರಗಡ ತಹಶೀಲ್ದಾರ್ ಆಗಿ (Tahsildar), ಸರ್ಕಾರಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು, ರಜನಿಕಾಂತ್ ಸಹೋದರ ನಾಗರಾಜ್ ಅವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಇಬ್ಬರು ಸಹೋದರರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

Crime News: ತನ್ನಿಂದ ದೂರ ಉಳಿದಿದ್ದ ಪತ್ನಿಯ ಶೀಲ ಶಂಕಿಸಿ ಬರ್ಬರವಾಗಿ ಹತ್ಯೆಗೈದ ಪತಿ

ಬೆಳಗಾವಿ: ಶೀಲ ಶಂಕಿಸಿ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ. ಶಬಾನಾ ಗೋರವನಕೊಳ್ಳ(28) ಕೊಲೆಯಾದ ಮಹಿಳೆ. ಪತಿ ಮೆಹಬೂಬ್ ಸಾಬ್ನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 10 ವರ್ಷಗಳ ಹಿಂದೆ ಶಬಾನಾ ಮತ್ತು ಮೆಹಬೂಬ್ ಮದುವೆಯಾಗಿದ್ದರು. ದಂಪತಿಗೆ 2 ಮಕ್ಕಳಿದ್ದರೂ ಪತಿ ತನ್ನ ಪತ್ನಿಯ ಮೇಲೆ ಸಂಶಯ ಪಡುತ್ತಿದ್ದ. ಪತಿಯ ಕಿರುಕುಳಕ್ಕೆ ಬೇಸತ್ತು ಶಬಾನಾ ಗಂಡನ ಮನೆ ಬಿಟ್ಟು 2 ಮಕ್ಕಳೊಂದಿಗೆ ಸವದತ್ತಿಯಲ್ಲಿ ವಾಸಿಸುತ್ತಿದ್ದರು. ಹಾಗೂ ಗಂಡನಿಂದ ವಿಚ್ಛೇದನ ಕೂಡ ಕೋರಿದ್ದರು. ಆದ್ರೆ ಇಂದು ಬೆಳಗ್ಗೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಮೆಹಬೂಬ್, ಶಬಾನಾಳ ಕೊಲೆ ಮಾಡಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:33 pm, Thu, 18 August 22

ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್