ಹುಲಿ ಉಗುರು ವಿವಾದ: ಸಂತೋಷ್ ನೇರವಾಗಿ ಬಿಗ್ ಬಾಸ್ ಮನೆಗೆ ಹೋದರೆ ಸಂತೋಷ ದ್ವಿಗುಣಗೊಳ್ಳುತ್ತದೆ: ಮಂಜುಳಾ ದೇವಿ, ವರ್ತೂರು ಸಂತೋಷ್ ಅಮ್ಮ

ಅರುಣ್​ ಕುಮಾರ್​ ಬೆಳ್ಳಿ

Updated on: Oct 27, 2023 | 6:02 PM

ಅದು ಅವನಿಷ್ಟ ಎಂದು ಹೇಳುವ ಮಂಜುಳಾ, ಅವನು ಮನೆಗೆ ಬಂದರೆ ಸಂತೋಷ, ಆದರೆ ಅವನು ಬಿಗ್ ಬಾಸ್ ಮನೆಗೆ ಹೋದರೆ ಎರಡು ಪಟ್ಟು ಸಂತೋಷವಾಗುತ್ತದೆ ಅನ್ನುತ್ತಾರೆ. ಅವನ ಜನಪ್ರಿಯತೆ ಈಗ ಹೆಚ್ಚಿರುವುದರಿಂದ ಬಿಗ್ ಬಾಸ್ ಗೆ ವಾಪಸ್ಸು ಹೋಗಿ ಗೆದ್ದು ಬರಲಿ ಎಂದು ಮಂಜುಳಾ ಬಯಸುತ್ತಾರೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ (varthur Santosh) ಅವರ ಅಮ್ಮ ಮಂಜುಳಾ ದೇವಿಯವರ (Manjula Devi) ಸಂತೋಷಕ್ಕೆ ಪಾರವಿಲ್ಲ ಮಾರಾಯ್ರೇ. ಯಾಕಾಗಬೇಡ? ಹುಲಿ ಉಗುರು ಪೆಂಡೆಂಟ್ (tiger claw pendant) ಧರಿಸಿದ್ದ ಕಾರಣಕ್ಕಾಗಿ ನ್ಯಾಯಾಲಯ ಅವರನ್ನು 14-ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು, ಇವತ್ತು ಅವರಿಗೆ ಷರತ್ತು ಬದ್ಧ ಜಾಮೀನು ಒದಗಿಸಲಾಗಿದೆ. ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿರುವ ಮಂಜುಳಾ ತಮ್ಮ ಮಗ ಜನರ ಪ್ರೀತಿ ಹಾಗೂ ಬೆಂಬಲದಿಂದ ಜೈಲಿನಿಂದ ಹೊರಬರುತ್ತಿದ್ದಾನೆ ಅಂತ ಹೇಳಿದರು. ಅದು ಸರಿ ಸಂತೋಷ್ ಮನೆಗ ಬರುತ್ತಾರಾ ಅಥವಾ ಅಲ್ಲಿಂದಲೇ ಬಿಗ್ ಬಾಸ್ ಮನೆಗೆ ಹೋಗ್ತಾರಾ? ಅದು ಅವನಿಷ್ಟ ಎಂದು ಹೇಳುವ ಮಂಜುಳಾ, ಅವನು ಮನೆಗೆ ಬಂದರೆ ಸಂತೋಷ, ಆದರೆ ಅವನು ಬಿಗ್ ಬಾಸ್ ಮನೆಗೆ ಹೋದರೆ ಎರಡು ಪಟ್ಟು ಸಂತೋಷವಾಗುತ್ತದೆ ಅನ್ನುತ್ತಾರೆ. ಅವನ ಜನಪ್ರಿಯತೆ ಈಗ ಹೆಚ್ಚಿರುವುದರಿಂದ ಬಿಗ್ ಬಾಸ್ ಗೆ ವಾಪಸ್ಸು ಹೋಗಿ ಗೆದ್ದು ಬರಲಿ ಎಂದು ಮಂಜುಳಾ ಬಯಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.