AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Big Tech Show: ಜಾಗತಿಕ ಮಾರುಕಟ್ಟೆಗೆ ನಿಮ್ಮ ಉದ್ಯಮವನ್ನು ವಿಸ್ತರಿಸಲು ಇಲ್ಲಿದೆ ಅಪೂರ್ವ ಅವಕಾಶ!

ಮೈಸೂರು ಬಿಗ್ ಟೆಕ್ ಶೋ (ಜುಲೈ 22-23) ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಮತ್ತು 'ಮುಂದೆ ಬನ್ನಿ' ಸಹಭಾಗಿತ್ವದಲ್ಲಿ ಉದ್ಯಮಿಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶಕ್ಕೆ ವೇದಿಕೆ ಕಲ್ಪಿಸಲಿದೆ. ಯುವ ಉದ್ಯಮಿಗಳಿಗೆ ಮಾರ್ಗದರ್ಶನ, ಸಂಪರ್ಕ, ಹಾಗೂ ಅಂತರಾಷ್ಟ್ರೀಯ ವ್ಯಾಪಾರ ವಿಸ್ತರಣೆಗೆ ನೆದರ್ ಲ್ಯಾಂಡ್, ಫ್ರಾನ್ಸ್, ಜಪಾನ್ ಪ್ರತಿನಿಧಿಗಳಿಂದ ಮಾಹಿತಿ ಲಭ್ಯ. ಉಚಿತ ಪ್ರವೇಶಕ್ಕೆ ಜುಲೈ 18ರೊಳಗೆ ನೋಂದಾಯಿಸಿ.

Mysore Big Tech Show: ಜಾಗತಿಕ ಮಾರುಕಟ್ಟೆಗೆ ನಿಮ್ಮ ಉದ್ಯಮವನ್ನು ವಿಸ್ತರಿಸಲು ಇಲ್ಲಿದೆ ಅಪೂರ್ವ ಅವಕಾಶ!
ಮೈಸೂರು ಬಿಗ್ ಟೆಕ್ ಶೋ
ಅಕ್ಷತಾ ವರ್ಕಾಡಿ
|

Updated on:Jul 15, 2026 | 12:49 PM

Share

ಮುಖ್ಯಾಂಶಗಳು

  • ಮೈಸೂರು ಬಿಗ್ ಟೆಕ್ ಶೋ: ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಗಮ
  • KDEM ಮತ್ತು ಮುಂದೆ ಬನ್ನಿ ಸಹಭಾಗಿತ್ವ: ಜಾಗತಿಕ ಮಾರುಕಟ್ಟೆ ಪ್ರವೇಶದ ಹೆಬ್ಬಾಗಿಲು
  • ಅಂತರಾಷ್ಟ್ರೀಯ ಮಾರುಕಟ್ಟೆ ಅವಕಾಶಗಳು: ನಿಮ್ಮ ಉದ್ಯಮವನ್ನು ವಿಸ್ತರಿಸಲು ನೋಂದಾಯಿಸಿ

ಕರ್ನಾಟಕದಲ್ಲಿ ಸರ್ಕಾರ ಮತ್ತು ಉದ್ಯಮ ಲೋಕದ ನಡುವೆ ಜ್ಞಾನ ಸೇತುವೆಯಂತೆ ಕೆಲಸ ಮಾಡುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್ ಇದೇ ಜುಲೈ 22 ಮತ್ತು 23ರಂದು ಮೈಸೂರಿನಲ್ಲಿ ನಡೆಯುತ್ತಿರುವ ಮೈಸೂರು ಬಿಗ್ ಟೆಕ್ ಶೋಗೆ ‘ಮುಂದೆ ಬನ್ನಿ’ ಸಂಸ್ಥೆಯನ್ನು ಅಧಿಕೃತ ಕಮ್ಯೂನಿಟಿ ಪಾರ್ಟನರ್ ಆಗಿ ಗುರುತಿಸಿದೆ. ಬೆಂಗಳೂರು ಟೆಕ್ ಸಮ್ಮಿಟ್ ಗೆ ಪೂರ್ವಭಾವಿಯಾಗಿ ಕರ್ನಾಟಕದ ಆರು ನಗರಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇದು ಮೊದಲನೆಯದ್ದು.

ಎರಡು ದಿನಗಳ ಕಾಲ ಉದ್ಯಮ ಲೋಕದ ದಿಗ್ಗಜರು, ಸರ್ಕಾರದ ಪ್ರತಿನಿಧಿಗಳು, ಮೈಸೂರು ಭಾಗದ ಉದ್ಯಮ ವಲಯದ ಇಕೋ ಸಿಸ್ಟಂ ರೂಪಿಸುತ್ತಿರುವ ಎಲ್ಲರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಯುವ ಉದ್ಯಮಿಗಳಿಗೆ ಮಾರ್ಗದರ್ಶನ, ಸಂಪರ್ಕ, ತಿಳಿವು ನೀಡುವ ಹಲವಾರು ಉಪಯುಕ್ತ ಕಾರ್ಯಕ್ರಮಗಳು ಇಲ್ಲಿರಲಿವೆ.

ಕರ್ನಾಟಕದಾದ್ಯಂತ ಆಹಾರ ಉತ್ಪನ್ನಗಳು (ಜೇನು ತುಪ್ಪ, ಮಸಾಲೆ ಪದಾರ್ಥಗಳು, ಆರ್ಗ್ಯಾನಿಕ್ ಉತ್ಪನ್ನಗಳು, ಸುಸ್ಥಿರ ಆರ್ಥಿಕತೆಗೆ ಪೂರಕವಾದ ಉತ್ಪನ್ನಗಳು (ಅಡಿಕೆ ಹಾಳೆಯ ಪ್ಲೇಟು, ಚಮಚ ಇತ್ಯಾದಿ), ಟೆಕ್ನಾಲಜಿ, ಐಟಿ ಸೇವೆ ಹೀಗೆ ಯಾವುದೇ ವಲಯದಲ್ಲಿ ಉತ್ಪನ್ನ ಇಲ್ಲವೇ ಸೇವೆ ಕಲ್ಪಿಸುತ್ತಿರುವ ಉದ್ಯಮಿಗಳು ತಮ್ಮ ಉದ್ಯಮವನ್ನು ಭಾರತದ ಆಚೆ ಹರಡಲು ಬಯಸುತ್ತಿದ್ದಲ್ಲಿ ಮುಂದೆ ಬನ್ನಿ ಮತ್ತು KDEM ಜೊತೆಗೂಡಿ ಹಮ್ಮಿಕೊಳ್ಳುತ್ತಿರುವ Global Market Access ಸೆಶನ್ ಅಲ್ಲಿ ಪಾಲ್ಗೊಳ್ಳಬಹುದು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ನೆದರ್ ಲ್ಯಾಂಡ್, ಫ್ರಾನ್ಸ್ ಮತ್ತು ಜಪಾನ್ ದೇಶದ ಪ್ರತಿನಿಧಿಗಳು ಈ ಸೆಶನ್ ಅಲ್ಲಿ ಭಾಗವಹಿಸಿ ನಿಮ್ಮ ಉತ್ಪನ್ನಗಳನ್ನು ಆ ದೇಶದ ಮಾರುಕಟ್ಟೆಗೆ ಒಯ್ಯುವ ಬಗೆಯನ್ನು ವಿವರಿಸಲಿದ್ದಾರೆ. ನಿಮ್ಮ ಕಂಪನಿಯನ್ನು ಭಾರತದ ಆಚೆಗೆ ಒಯ್ಯಬೇಕು ಅನ್ನುವ ಆಸಕ್ತಿ ಇದ್ದಲ್ಲಿ ನೀವು ಪಾಲ್ಗೊಳ್ಳಬಹುದು. ಆಯ್ಕೆಯಾದ 30 ಜನರಿಗೆ ಮುಂದೆ ಬನ್ನಿ ವತಿಯಿಂದ ಉಚಿತ ಪ್ರವೇಶ ಕಲ್ಪಿಸಲಾಗುವುದು. ಆಸಕ್ತ ಉದ್ಯಮಿಗಳು ರಿಜಿಸ್ಟರ್ ಮಾಡಿಕೊಳ್ಳಿ. 18ನೇ ತಾರೀಕು ಕೊನೆಯ ದಿನ.

ಆಸಕ್ತ ಉದ್ಯಮಿಗಳು ರೆಜಿಸ್ಟರ್ ಮಾಡಿಕೊಳ್ಳಿ: forms.gle/r51hiUjhdQ6azELH9

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:04 pm, Wed, 15 July 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ