ನೈಟ್​ ಕರ್ಫ್ಯೂ ಜಾರಿ; ಮೈಸೂರು ಪ್ರವಾಸಿ ತಾಣಗಳು ಜನರಿಲ್ಲದೆ ಖಾಲಿ ಖಾಲಿ

| Updated By: ganapathi bhat

Updated on: Apr 11, 2021 | 5:04 PM

ಮೈಸೂರು ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪ್ರವಾಸಿ ತಾಣಗಳಿಗೆ ಜನರೇ ಇಲ್ಲದಂತಾಗಿದೆ. ನಗರದ ಪ್ರವಾಸಿ ತಾಣಗಳೆಲ್ಲ ಖಾಲಿ ಖಾಲಿ ಅನಿಸುತ್ತಿದೆ.

ನೈಟ್​ ಕರ್ಫ್ಯೂ ಜಾರಿ; ಮೈಸೂರು ಪ್ರವಾಸಿ ತಾಣಗಳು ಜನರಿಲ್ಲದೆ ಖಾಲಿ ಖಾಲಿ
ಮೈಸೂರು ಪ್ರವಾಸಿ ತಾಣ
Follow us on

ಮೈಸೂರು: ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪ್ರವಾಸಿ ತಾಣಗಳಿಗೆ ಜನರೇ ಇಲ್ಲದಂತಾಗಿದೆ. ನಗರದ ಪ್ರವಾಸಿ ತಾಣಗಳೆಲ್ಲ ಖಾಲಿ ಖಾಲಿ ಅನಿಸುತ್ತಿದೆ. ಐತಿಹಾಸಿಕ ಕಾಲದಿಂದ ಪ್ರಸಿದ್ಧತೆಯಲ್ಲಿದ್ದ, ಯಾವಾಗಲೂ ಭಕ್ತರೇ ತುಂಬಿಕೊಳ್ಳುತ್ತಿದ್ದ ಚಾಮುಂಡಿ ಬೆಟ್ಟಕ್ಕೆ ಜನರೇ ಇಲ್ಲದಂತಾಗಿದೆ.

ಮೈಸೂರಿನ ಮೃಗಾಲಯ, ಅರಮನೆಗೆ ಆಗಮಿಸುವವರ ಸಂಖ್ಯೆ ಕಡಿಮೆಯಾಗಿದೆ. ಮೊದಲೆಲ್ಲಾ ವೀಕೆಂಡ್ ಬಂತೆಂದರೆ ಸಾವಿರ ಸಾವಿರ ಜನರು ಅರಮನೆ ನೋಡಲು ಬರುತ್ತಿದ್ದರು. ನೈಟ್​ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪ್ರವಾಸಕ್ಕೆ ಆಗಮಿಸುವವರ ಸಂಖ್ಯೆ ಭಾರೀ ಇಳಿಕೆಯತ್ತ ಸಾಗುತ್ತಿದೆ.

ಚಿಕ್ಕಬಳ್ಳಾಪುರ ನಂದಿಗಿರಿಧಾಮತ್ತ ವಿರಳವಾದ ಪ್ರವಾಸಿಗರು
ಬೆಂಗಳೂರಿನಲ್ಲಿ ಕೊರೊನಾ ಕರ್ಪ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ನಂದಿಗಿರಿಧಾಮತ್ತ ಪ್ರವಾಸಿಗರ ಆಗಮನ ವಿರಳವಾಗಿದೆ. ಮೊದಲೆಲ್ಲಾ ಭಾನುವಾರದ ಬಂತೆಂದರೆ ಪ್ರವಾಸಿಗರ ದಂಡೇ ನಂದಿಗಿರಿಯಲ್ಲಿರುತ್ತಿತ್ತು. ಆದರೀಗ ಕೊರೊನಾ ಕಾಟದಿಂದಾಗಿ ಜನರಿಗೆ ಹಿರಬೀಳಲು ಕಷ್ಟವಾಗುತ್ತಿದೆ. ಜತೆಗೆ ನೈಟ್​ ಕರ್ಫ್ಯೂ ಜಾರಿಯಲ್ಲಿರುವುದರಿಂದ ಜನರ ಸಂಖ್ಯೆ ಬಹಳ ವಿರಳವಾಗಿದೆ.

ಬೆಳಂಬಳಿಗ್ಗೆಯೇ ಸೂರ್ಯೋದಯ ನೋಡಲು ಜನರು ಆಗಮಿಸುತ್ತಿದ್ದರು. ಹಾಗಾಗಿ ಕೊರೊನಾ ನಿಯಂತ್ರಣ ಕ್ರಮವನ್ನು ಪೊಲೀಸರು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ತೋಟಗಾರಿಕೆ ಇಲಾಖೆ ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರಿಗೆ ಮಾಸ್ಕ್ ಕಡ್ಡಾಯಗೊಳಿಸಿದೆ.

ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಬಂದ್​; ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ: ಜಿಲ್ಲಾಡಳಿತದಿಂದ ಆದೇಶ

ಹೆಚ್ಚಿದ ಚಿರತೆ ಹಾವಳಿಗಳು.. ಪ್ರವಾಸಿ ತಾಣಗಳಲ್ಲಿ ಜನ ಸಂಚಾರಕ್ಕೆ ಬ್ರೇಕ್! ಎಲ್ಲೆಲ್ಲಿ?