ಅರವತ್ತರ ಅಜ್ಜಿ ಮೈಸೂರು ದಸರಾದಲ್ಲಿ ತಿಂದ ಇಡ್ಲಿಗಳೆಷ್ಟು ಗೊತ್ತಾ!?

|

Updated on: Sep 30, 2019 | 5:58 PM

ವಿಶ್ವವಿಖ್ಯಾತ ಮೈಸೂರು ದಸರಾ 2019ರ ಆಹಾರ ಮೇಳದಲ್ಲಿ ಮಹಿಳೆಯರಿಗೆ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಒಂದು ನಿಮಿಷದಲ್ಲಿ ಆರು ಇಡ್ಲಿ ತಿಂದು ಮುಗಿಸುವ ಮೂಲಕ 60 ವರ್ಷದ ಅಜ್ಜಿ ಮೊದಲ ಬಹುಮಾನವನ್ನು ಬಾಜಿಕೊಂಡಿರುವುದು ವಿಶೇಷವಾಗಿತ್ತು. ಆಹಾರ ಮೇಳ ಉಪಸಮಿತಿಯಿಂದ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಮಹಿಳಾ ಮಣಿಗಳು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಸಾಂಬರಿನ ಜೊತೆ ಇಂಡ್ಲಿಗಳನ್ನು ಗಬಗಬನೆ ತಿಂದು ಮುಗಿಸಿದ್ರು, ಒಂದೇ ನಿಮಿಷದಲ್ಲಿ ಆರು ಇಡ್ಲಿ ತಿಂದು 60 […]

ಅರವತ್ತರ ಅಜ್ಜಿ ಮೈಸೂರು ದಸರಾದಲ್ಲಿ ತಿಂದ ಇಡ್ಲಿಗಳೆಷ್ಟು ಗೊತ್ತಾ!?
Follow us on

ವಿಶ್ವವಿಖ್ಯಾತ ಮೈಸೂರು ದಸರಾ 2019ರ ಆಹಾರ ಮೇಳದಲ್ಲಿ ಮಹಿಳೆಯರಿಗೆ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಒಂದು ನಿಮಿಷದಲ್ಲಿ ಆರು ಇಡ್ಲಿ ತಿಂದು ಮುಗಿಸುವ ಮೂಲಕ 60 ವರ್ಷದ ಅಜ್ಜಿ ಮೊದಲ ಬಹುಮಾನವನ್ನು ಬಾಜಿಕೊಂಡಿರುವುದು ವಿಶೇಷವಾಗಿತ್ತು.

ಆಹಾರ ಮೇಳ ಉಪಸಮಿತಿಯಿಂದ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಮಹಿಳಾ ಮಣಿಗಳು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಸಾಂಬರಿನ ಜೊತೆ ಇಂಡ್ಲಿಗಳನ್ನು ಗಬಗಬನೆ ತಿಂದು ಮುಗಿಸಿದ್ರು, ಒಂದೇ ನಿಮಿಷದಲ್ಲಿ ಆರು ಇಡ್ಲಿ ತಿಂದು 60 ವರ್ಷದ ಅಜ್ಜಿ ಸರೋಜಮ್ಮ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಮಹಿಳಾಮಣಿಗಳನ್ನ ಹಿಂದಿಕ್ಕಿದ್ದಾರೆ. ಈ ಇಡ್ಲಿ ತಿನ್ನುವ ಸ್ಪರ್ಧೆ ಆಹಾರ ಮೇಳಕ್ಕೆ ಮತ್ತಷ್ಟು ರಂಗು ತಂದುಕೊಡ್ತು.

Published On - 5:56 pm, Mon, 30 September 19