AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಮಾರಕಾಸ್ತ್ರಗಳಿಂದ ಬರ್ಬರ ಹತ್ಯೆ

ಹಾಸನ: ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ನಗರದ ಬೀರನಹಳ್ಳಿ ಕೆರೆ ಬಡಾವಣೆಯಲ್ಲಿ ನಡೆದಿದೆ. ಹಾಸನ ತಾಲೂಕಿನ ಚಿಕ್ಕಗೇಣಗೆರೆಯ ರಮೇಶ್ ಎಂಬಾತನನ್ನ ಹಂತಕರು ರಾತ್ರಿ ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದಾರೆ. ಘಟನೆ ಹಿನ್ನೆಲೆ:  ಆರು ತಿಂಗಳ ಹಿಂದೆ ನಡೆದಿದ್ದ ಘಟನೆಯಲ್ಲಿ ಮೃತಪಟ್ಟ ರಮೇಶ್ ನ ಪತ್ನಿ ತೇಜಾ, ಕೊಟ್ಟ ಹಣ ವಾಪಸ್ ಕೇಳಿದ್ದ ಕಾರಣಕ್ಕೆ ಸೈನಿಕರೊಬ್ಬರ ಪತ್ನಿಯನ್ನ ಕೊಂದು ಜೈಲು ಸೇರಿದ್ದಳು. ಇದಕ್ಕೆ ರಮೇಶ ಸಹ ಕುಮ್ಮಕ್ಕು ನೀಡಿದ್ದ ಎಂದು ಆತನಿಗೆ […]

ಹಾಸನದಲ್ಲಿ ಮಾರಕಾಸ್ತ್ರಗಳಿಂದ ಬರ್ಬರ ಹತ್ಯೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Sep 30, 2019 | 2:58 PM

Share

ಹಾಸನ: ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ನಗರದ ಬೀರನಹಳ್ಳಿ ಕೆರೆ ಬಡಾವಣೆಯಲ್ಲಿ ನಡೆದಿದೆ. ಹಾಸನ ತಾಲೂಕಿನ ಚಿಕ್ಕಗೇಣಗೆರೆಯ ರಮೇಶ್ ಎಂಬಾತನನ್ನ ಹಂತಕರು ರಾತ್ರಿ ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದಾರೆ.

ಘಟನೆ ಹಿನ್ನೆಲೆ:  ಆರು ತಿಂಗಳ ಹಿಂದೆ ನಡೆದಿದ್ದ ಘಟನೆಯಲ್ಲಿ ಮೃತಪಟ್ಟ ರಮೇಶ್ ನ ಪತ್ನಿ ತೇಜಾ, ಕೊಟ್ಟ ಹಣ ವಾಪಸ್ ಕೇಳಿದ್ದ ಕಾರಣಕ್ಕೆ ಸೈನಿಕರೊಬ್ಬರ ಪತ್ನಿಯನ್ನ ಕೊಂದು ಜೈಲು ಸೇರಿದ್ದಳು. ಇದಕ್ಕೆ ರಮೇಶ ಸಹ ಕುಮ್ಮಕ್ಕು ನೀಡಿದ್ದ ಎಂದು ಆತನಿಗೆ ಸಾರ್ವಜಕನಿಕರು ಈ ಹಿಂದೆ ಥಳಿಸಿದ್ದರು.

ಆದರೆ ರಮೇಶ್ ಮೇಲಿನ ಆರೋಪ ಸಾಬೀತಾಗಿರಲಿಲ್ಲ. ಘಟನೆ ನಡೆದ ಆರು ತಿಂಗಳ ಬಳಿಕ ಈಗ ರಮೇಶ್ ಭೀಕರವಾಗಿ ಕೊಲೆಯಾಗಿದ್ದಾನೆ. ರಮೇಶ್ ಪತ್ನಿ ಕೊಲೆ ಆರೋಪದಲ್ಲಿ ಇನ್ನೂ ಜೈಲಲ್ಲೇ ಇದ್ದಾಳೆ. ಈ ಸಂಬಂಧ ಹಾಸನ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 2:54 pm, Mon, 30 September 19

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು