ಮೈಸೂರು ಜಿಲ್ಲಾಧಿಕಾರಿ- ಮೇಯರ್ ಜಟಾಪಟಿ: ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ ಶಿಲ್ಪಾ ನಾಗ್

| Updated By: ganapathi bhat

Updated on: Jun 04, 2021 | 10:04 PM

ಸೋಂಕು ನಿಯಂತ್ರಣಕ್ಕೆ ಪ್ರಾಮಾಣಿಕವಾಗಿ ಕೆಲಸ‌ ಮಾಡಿದ್ದೇನೆ. ನಾನು ಜಿಲ್ಲಾಡಳಿತದ ವಿರುದ್ಧ ಯಾವುದೇ ರೀತಿ ಹೇಳಿಕೆ ನೀಡಿರುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ- ಮೇಯರ್ ಜಟಾಪಟಿ: ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ ಶಿಲ್ಪಾ ನಾಗ್
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್
Follow us on

ಮೈಸೂರು: ಜಿಲ್ಲಾಡಳಿತದ ವಿರುದ್ದ ಹೇಳಿಕೆ ಆರೋಪ‌ ವಿಚಾರವಾಗಿ ಇಲ್ಲಿನ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಪತ್ರದ ಮೂಲಕ‌ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಪಾಲಿಕೆ ಆಯುಕ್ತೆಯಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಿದ್ದೇನೆ. ಜಿಲ್ಲಾಧಿಕಾರಿಗಳ ಸಭಾ ಸೂಚನೆಗಳಂತೆ ಕೆಲಸ‌ ಮಾಡಿದ್ದೇನೆ. ನಗರದಲ್ಲಿನ ಕೊವಿಡ್-19 ಸೋಂಕನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಯತ್ನಿಸಿದ್ದೇನೆ. ಇದಕ್ಕೆ ಸಾರ್ವಜನಿಕರ ಸಹಕಾರವನ್ನು ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

ವಿವಿಧ ಕಾರ್ಯಕ್ರಮಗಳ ಮೂಲಕ ಕೊರೊನಾ ಬಗ್ಗೆ ಅರಿವು ಮೂಡಿಸಿದ್ದೇನೆ. ಮುಡಾ ಸಹಯೋಗದಲ್ಲಿ 31 ವೈದ್ಯರು, 33 ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ವೇತನವನ್ನು ಸಹ ಪಾಲಿಕೆಯಿಂದ ಪಾವತಿಸಲಾಗಿದೆ. ಸಿ.ಎಸ್.ಆರ್ ಮೂಲಕ ಪಡೆದ ವೈದಕೀಯ ಉಪಕರಣಗಳು ಮತ್ತು ಔಷಧಿಗಳನ್ನು ವಿತರಿಸಲಾಗಿದೆ. ಈ ಮೂಲಕ ಸೋಂಕು ನಿಯಂತ್ರಣಕ್ಕೆ ಪ್ರಾಮಾಣಿಕವಾಗಿ ಕೆಲಸ‌ ಮಾಡಿದ್ದೇನೆ. ನಾನು ಜಿಲ್ಲಾಡಳಿತದ ವಿರುದ್ಧ ಯಾವುದೇ ರೀತಿ ಹೇಳಿಕೆ ನೀಡಿರುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಸಭೆಗೆ ಹಾಜರಾಗುವುದಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ
ಸಭೆಗೆ ಹಾಜರಾಗುವುದಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಮಾನ್ಯ ಜಿಲ್ಲಾಧಿಕಾರಿಗಳು ನಡೆಸುತ್ತಿದ್ದ ಕೊವಿಡ್-19 ರ ಸಭೆಗಳಿಗೆ ಆಗಿಂದ್ದಾಗ ನಾನು ಹಾಜರಾಗಿರುತ್ತೇನೆ. ನಗರ ಪಾಲಿಕೆ ಆಯುಕ್ತರಾಗಿ ಕೊವಿಡ್ ಮಿತ್ರ ಸ್ಥಾಪಿಸುವುದು, ಕೊವಿಡ್ ಪಾಸಿಟಿವ್ ಇರುವವರ ಮನೆ ಮನೆ ಸಮೀಕ್ಷೆ ಕಾರ್ಯ ನಡೆಸುವುದು. ಟೆಲಿ ಮಡಿಸಿನ್, ಮೆಡಿಸಿನ್ ರೋಟರಿ ಸಂಸ್ಥೆಯಲ್ಲಿ ಸ್ಥಾಪಿಸಿ ಪಾಸಿಟಿವ್ ಇರುವವರಿಗೆ ನೆರವಾಗುವುದು ಮಾಡಿದ್ದೇನೆ.

Ward Level Task Force ಸಮಿತಿಗಳಿಗೆ ಮಾರ್ಗದರ್ಶನ ನೀಡುವುದು. ಪ್ರತಿನಿಶ್ಯ ಅವಶ್ಯಕವಿರುವ ಕಡೆ ಅಧಿಕಾರಿ ಸಿಬ್ಬಂದಿ ಸಭೆ ನಡೆಸಿ Home Isolation / Home Quarantine ಮಾಡಿಸುವುದು. CSR ಮೂಲಕ ಪಡೆದ ವೈದ್ಯಕೀಯ ಸಾಮಾಗ್ರಿಗಳನ್ನು ವಾರ್ಡ್‌ವರು ವಿತರಿಸುವುದು. ನಗರಾದ್ಯಾಂತ ಸರ್ಕಾರದ ನಿರ್ದೇಶನದಂತ ಲಸಿಕೆ ಕಾರ್ಯಕ್ರಮ ಅನುಷ್ಠಾನ ಮಾಡುವುದು. ಸಿಬ್ಬಂದಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸುವುದು. ಕೋವಿಡ್‌ನಿಂದ ಮೃತಪಟ್ಟಿ ವ್ಯಕ್ತಿಗಳ ಅಂತ್ಯಸಂಸ್ಕಾರದ ವ್ಯವಸ್ಥೆ, ಹೀಗೆ ಹತ್ತು ಹಲವಾರು ಕೆಲಸ ಕಾರ್ಯಗಳನ್ನು ನಿರ್ವಹಣೆ ಮಾಡಿದ್ದೇನೆ.

ಜೊತೆಗೆ ಸುಮಾರು 10 ರಿಂದ 12 ಲಕ್ಷ ಜನಸಂಖ್ಯೆ ಇರುವ ಮೈಸೂರು ಪಾಲಿಕೆ ಆಯುಕ್ತರಾಗಿ ಜವಾಬ್ದಾರಿಯುತ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದೇನೆ. ಈ ಎಲ್ಲಾ ಕಾರಣದಿಂದ ಪ್ರತಿ ಸಭೆಗೆ ನಾನು ಖುದ್ದು ಹಾಜರಾಗುವುದಕ್ಕೆ ಸಾಧ್ಯವಾಗಿಲ್ಲ. ಈ ಕಾರಣದಿಂದ‌ ನನ್ನ ಪರವಾಗಿ ಅಧಿಕಾರಿಯನ್ನು ಸಭೆಗೆ ಕಳುಹಿಸಿದ್ದೇನೆ. ಅವರು ಪಾಲಿಕೆ ಸಂಬಂಧ ಸಂಪೂರ್ಣ ಮಾಹಿತಿ ಸಭೆಗೆ ನೀಡಿದ್ದಾರೆ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸ್ಪಷ್ಟನೆ ಕೊಟ್ಟಿದ್ದಾರೆ.

ನೀಡುವ ಮಾಹಿತಿ ಪ್ರತಿಗಳಿಗೆ ಸಹಿ ಹಾಕುವುದಿಲ್ಲ ಎಂಬ ವಿಚಾರಕ್ಕೆ ಸ್ಪಷ್ಟನೆ
ನೀಡುವ ಮಾಹಿತಿ ಪ್ರತಿಗಳಿಗೆ ಸಹಿ ಹಾಕುವುದಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ್ದಾರೆ. ಪಾಲಿಕೆ ಸಲ್ಲಿಸುವ ಅಂಕಿ ಅಂಶಗಳು ಎಲ್ಲಾ ಮಾಹಿತಿ, ದಾಖಲಾತಿಗಳಿಗೆ ಸಹಿ ಮಾಡಿಯೇ ಸಲ್ಲಿಸಲಾಗುತ್ತಿದೆ. ಆದರೆ ಕೊವಿಡ್ 19 ಕ್ಕೆ ಸಂಬಂಧಿಸಿದ ಮಾಹಿತಿ War Room ನಿಂದಲೇ ಅಧಿಕೃತವಾಗಿ ಜಿಲ್ಲಾಧಿಕಾರಿಗಳಿಗೆ ಲಭ್ಯವಾಗುತ್ತಿದೆ. ಗಣಕೀಕೃತವಾದ ಪ್ರತಿಗೆ ಆಯುಕ್ತರು ಸಹಿ ಮಾಡಲು ಲಭ್ಯವಿಲ್ಲದಿರುವಾಗ ಆಯುಕ್ತರ ಪರವಾಗಿ ಹೆಚ್ಚುವರಿ ಆಯುಕ್ತರು ಸಹಿ ಮಾಡಿ ಸಲ್ಲಿಸಿರುತ್ತಾರೆ. ಆದುದರಿಂದ ಈ ವಿಚಾರದಲ್ಲಿ ನನ್ನಿಂದ ಲೋಪ ಬರುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದ್ಧಾರೆ.

ನಗರ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿಲ್ಲ ಎಂಬುದಕ್ಕೆ ಪ್ರತಿಕ್ರಿಯೆ
ನಗರ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿಲ್ಲ ಆರೋಪಕ್ಕೆ ಅವರು ಉತ್ತರಿಸಿದ್ದಾರೆ. ಪಾಲಿಕೆ ವ್ಯಾಪ್ತಿಯ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ 9 ಕಡೆ ಕೊವಿಡ್ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 1,122 ಹಾಸಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಕೊವಿಡ್ ಮಿತ್ರ ಕೊವಿಡ್ ಆರೈಕೆ ಕೇಂದ್ರಗಳ ನಿರ್ವಹಣೆಗಾಗಿ ಅವಶ್ಯಕವಿರುವ ವೈದ್ಯರು, ಸ್ಟಾಫ್ ನರ್ಸ್, ಡಿ-ಗ್ರೂಪ್ ನೌಕರ ವ್ಯವಸ್ಥೆ ಮಾಡಲಾಗಿದೆ. ಹಾಸಿಗೆ ಮತ್ತಿಪರ ಪರಿಕರಗಳು ವಿವಿಧ ಔಷಧಿಗಳು ವೈದ್ಯಕೀಯ ಉಪಕರಣಗಳು ಪೂರ್ಣ ಪ್ರಮಾಣದಲ್ಲಿ ಸರಬರಾಜು ಮಾಡಲಾಗಿದೆ ಎಂದು ಹೇಳಿದ್ದಾರೆ.

ಪಾಲಿಕೆ ವ್ಯಾಪ್ತಿಯ ಕೊವಿಡ್ ಮಿತ್ರ ಮತ್ತು ಕೊವಿಡ್ ಕೇರ್ ಆರೈಕೆ ಕೇಂದ್ರಗಳ ವಿಚಾರವಾಗಿ, ಜಿಲ್ಲಾಡಳಿತದಿಂದ ಇಲ್ಲಿಗೆ ಯಾವುದೇ ರೀತಿಯ ಸಾಮಗ್ರಿಗಳು ಸರಬರಾಟು ಮಾಡಿಲ್ಲ. ಹೀಗಾಗಿ ಕಾರ್ಖಾನೆಗಳು, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಂದ CSR ಅಡಿಯಲ್ಲಿ ಸ್ವೀಕೃತಿಯಾಗಿರುವ ಸಾಮಗ್ರಿಗಳ ಪೈಕಿ ಅಗತ್ಯವಿರುವಷ್ಟು ಸಾಮಗ್ರಿಗಳನ್ನು ಕೊವಿಡ್ ಮಿತ್ರ ಮತ್ತು ಕೊವಿಡ್ ಕೇರ್ ಆರೈಕೆ ಕೇಂದ್ರಗಳಿಗೆ ಬಳಕೆ ಮಾಡಲಾಗಿರುತ್ತದೆ. ಸದರಿ ಕೇಂದ್ರ ಆಸ್ಪತ್ರೆಗಳಿಗೆ ವೈದ್ಯರು ಮತ್ತು ಶೂಶ್ರುಷಕರುಗಳ ಸೇವೆಯನ್ನು ಜಿಲ್ಲಾಡಳಿತದಿಂದ ಒದಗಿಸಿಲ್ಲ. ಇದೇ ಕಾರಣಕ್ಕೆ ಪಾಲಿಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ವೈದ್ಯರು ಮತ್ತು ಶೂಶ್ರುಷಕರುಗಳ ಸೇವೆಯ ವೆಚ್ಚವನ್ನು ಭರಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತಿಳಿಸಿದ್ದಾರೆ.

ಇದನ್ನೂ ಓದಿ: ದೂರು ನೀಡದೆ ಸುದ್ದಿಗೋಷ್ಠಿ ನಡೆಸಿದ್ದು ಆಡಳಿತಾತ್ಮಕ ಉಲ್ಲಂಘನೆ ಅಲ್ಲವೇ?: ಶಿಲ್ಪಾ ನಾಗ್​ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಶ್ನೆ

Shilpa Nag Vs Rohini Sindhuri : ಶಿಲ್ಪಾನಾಗ್ ಆರೋಪಗಳಿಗೆ ಡಿಸಿ ರೋಹಿಣಿ ಸಿಂಧೂರಿ ಪ್ರತಿಕ್ರಿಯೇನು..?