ಲಸಿಕೆ ಪಡೆಯಲು ಹಿಂದೇಟು ಹಾಕಿದ ಜನ; ಮುಸ್ಲಿಂ ಧರ್ಮಗುರುಗಳಿಗೆ ಮನವೊಲಿಸಿ ಲಸಿಕೆ ನೀಡಿದ ಜಿಲ್ಲಾಡಳಿತ

ಲಸಿಕೆಯ ಕುರಿತಾಗಿ ಸಾಕಷ್ಟು ಅನುಮಾನವಿದ್ದ ಕಾರಣ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದರು. ಈ ಕುರಿತಂತೆ ಜಿಲ್ಲಾಡಳಿತ ಮನವೊಲಿಸಿ ಧರ್ಮಗುರುಗಳಿಗೆ ಲಸಿಕೆ ನೀಡಿದೆ. ನಂತರ ಮಸೀದಿಯಲ್ಲಿ ಪ್ರಚಾರ ಮಾಡಲು ಧರ್ಮಗುರುಗಳು ಒಪ್ಪಿಗೆ ನೀಡಿದ್ದಾರೆ.

ಲಸಿಕೆ ಪಡೆಯಲು ಹಿಂದೇಟು ಹಾಕಿದ ಜನ; ಮುಸ್ಲಿಂ ಧರ್ಮಗುರುಗಳಿಗೆ ಮನವೊಲಿಸಿ ಲಸಿಕೆ ನೀಡಿದ ಜಿಲ್ಲಾಡಳಿತ
ಲಸಿಕೆ ಪಡೆಯುವಂತೆ ಮನವೊಲಿಸಿದ ಜಿಲ್ಲಾಡಳಿತ
Edited By:

Updated on: Apr 09, 2021 | 1:04 PM

ಮೈಸೂರು: ಕೊರೊನಾ ಪ್ರಕರಣಗಳ ಸಂಖ್ಯೆ ಪ್ರತಿ ದಿನ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಹೆಚ್ಚೆಚ್ಚು ಲಸಿಕೆ ಪಡೆದು ಕೊರೊನಾ ಸೋಂಕಿನಿಂದ ಪಾರಾಗಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಪ್ರೋತ್ಸಾಹಿಸುತ್ತಿದೆ. ಆದರೆ, ಮೈಸೂರಿನಲ್ಲಿ ಮಾತ್ರ ಲಸಿಕೆ ಪಡೆಯಲು ಜನರನ್ನು ಒಪ್ಪಿಸುವುದಿಕ್ಕೆ ಜಿಲ್ಲಾಡಳಿತ ಹರಸಾಹಸಪಡುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಎನ್.ಆರ್ ಕ್ಷೇತ್ರದ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಸ್ಲಿಂ ಧರ್ಮ ಗುರುಗಳ ಮೊರೆಹೋಗಿದೆ. ನಿನ್ನೆ ಧರ್ಮಗುರುಗಳಿಗೆ ಲಸಿಕೆ ನೀಡಿ, ಇತರರು ಲಸಿಕೆ ಪಡೆಯುವಂತೆ ಸೂಚಿಸಲು ಹೇಳಿಕೆ ನೀಡಲಾಗಿದೆ.

ಜಿಲ್ಲಾಡಳಿತ ಧರ್ಮ ಗುರುಗಳ ಜೊತೆ ಸಭೆ ನಡೆಸಿ ಮನವಿ ಮಾಡಿಕೊಂಡಿದೆ. ಲಸಿಕೆಯ ಕುರಿತಾಗಿ ಸಾಕಷ್ಟು ಅನುಮಾನವಿದ್ದ ಕಾರಣ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದರು. ಈ ಕುರಿತಂತೆ ಜಿಲ್ಲಾಡಳಿತ ಮನವೊಲಿಸಿ ಧರ್ಮಗುರುಗಳಿಗೆ ಲಸಿಕೆ ನೀಡಿದೆ. ನಂತರ ಮಸೀದಿಯಲ್ಲಿ ಪ್ರಚಾರ ಮಾಡಲು ಧರ್ಮಗುರುಗಳು ಒಪ್ಪಿಗೆ ನೀಡಿದ್ದಾರೆ.

ನಾಳೆಯಿಂದ ನೈಟ್​ ಕರ್ಫ್ಯೂ
ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಜಿಲ್ಲೆಯಲ್ಲಿ ನೈಟ್​ಕರ್ಫ್ಯೂ ಜಾರಿಗೊಳಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ಕೈಗೊಳ್ಳಲಾಗುತ್ತದೆ. ಅನಗತ್ಯ ಸಂಚಾರಕ್ಕೆ ಅವಕಾಶ ನಿರ್ಬಂಧಿಸಲಾಗಿದೆ.

ಕೊರೊನಾ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಸದ್ಯ ಮೈಸೂರಿ‌ನಲ್ಲಿ ಕಳೆದ 10 ದಿನಗಳಿಂದ ಸೋಂಕಿತರ ಸಂಖ್ಯೆ ಪ್ರತಿನಿತ್ರ 200 ಗಡಿ ದಾಟುತ್ತಿದೆ. ಫುಡ್ ಸ್ಟ್ರೀಟ್, ಬಾರ್ ರೆಸ್ಟೋರೆಂಟ್ , ಮಲ್ಟಿಪ್ಲೆಕ್ಸ್ ಥಿಯೇಟರ್ ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಈ‌ ಹಿಂದೆ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದ ಕೊರೊನಾ‌ ನಿಯಂತ್ರಣ ಸಾಧ್ಯವಾಗಿತ್ತು. ಹೀಗಾಗಿ ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

YouTube video player

ಇದನ್ನೂ ಓದಿ: 

ಸರ್ಕಾರಿ/ ಖಾಸಗಿ ಕಚೇರಿಯ, 45 ವರ್ಷ ಮೇಲ್ಪಟ್ಟ ಉದ್ಯೋಗಿಗಳಿಗೆ ಕೊರೊನಾ ಲಸಿಕೆ; 100 ಕ್ಕೂ ಹೆಚ್ಚು ಫಲಾನುಭವಿಗಳಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯ

ಕೊರೊನಾ ಹೆಚ್ಚಳದ ಮಧ್ಯೆ ರಾಜ್ಯಕ್ಕೆ ಗುಡ್ ನ್ಯೂಸ್: ಕರ್ನಾಟಕಕ್ಕೆ ತುರ್ತಾಗಿ 15.25 ಲಕ್ಷ ಕೊರೊನಾ ಲಸಿಕೆ ರವಾನೆ

shruti hegde
Loading...
Unable to load recommendations.
Follow Us