ಸರ್ಕಾರಿ/ ಖಾಸಗಿ ಕಚೇರಿಯ, 45 ವರ್ಷ ಮೇಲ್ಪಟ್ಟ ಉದ್ಯೋಗಿಗಳಿಗೆ ಕೊರೊನಾ ಲಸಿಕೆ; 100 ಕ್ಕೂ ಹೆಚ್ಚು ಫಲಾನುಭವಿಗಳಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯ

45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ವಿತರಣೆ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ, 100ಕ್ಕೂ ಹೆಚ್ಚು ಫಲಾನುಭವಿಗಳು (45ವರ್ಷ ಮೇಲ್ಪಟ್ಟವರು)ಇರುವ ಕಾರ್ಯಸ್ಥಳಗಳಲ್ಲಿ (ಸಾರ್ವಜನಿಕ ಮತ್ತು ಖಾಸಗಿ) ಏಪ್ರಿಲ್​ 11ರಿಂದ ಲಸಿಕೆ ವಿತರಣೆ ನಡೆಯಲಿದೆ.

ಸರ್ಕಾರಿ/ ಖಾಸಗಿ ಕಚೇರಿಯ, 45 ವರ್ಷ ಮೇಲ್ಪಟ್ಟ ಉದ್ಯೋಗಿಗಳಿಗೆ ಕೊರೊನಾ ಲಸಿಕೆ; 100 ಕ್ಕೂ ಹೆಚ್ಚು ಫಲಾನುಭವಿಗಳಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 07, 2021 | 10:49 PM

ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಮಿತಿಮೀರುತ್ತಿರುವ ಬೆನ್ನಲ್ಲೇ, ಲಸಿಕೆ ವಿತರಣೆಯ ವೇಗವನ್ನೂ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇಷ್ಟು ದಿನ 65ವರ್ಷ ಮೇಲ್ಪಟ್ಟ ಎಲ್ಲರಿಗೂ ಮತ್ತು 45 ವರ್ಷ ಮೇಲ್ಪಟ್ಟು, ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರ ಇನ್ನೊಂದು ಆದೇಶ ಹೊರಡಿಸಿದೆ. ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ, 45 ವರ್ಷ ಮೇಲ್ಪಟ್ಟ ನೌಕರರು ಏಪ್ರಿಲ್​ 11ರಿಂದ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದೆ. ಅಂದರೆ ಯಾವುದೇ ಸಂಸ್ಥೆ 100 ಮತ್ತು ಅದಕ್ಕಿಂತಲೂ ಹೆಚ್ಚು, 45 ವರ್ಷ ಮೇಲ್ಪಟ್ಟ ನೌಕರರನ್ನು ಹೊಂದಿದ್ದರೆ ಈ ಹಂತದ ಲಸಿಕೆ ವಿತರಣೆಯಲ್ಲಿ ಒಳಗೊಳ್ಳಬಹುದಾಗಿದೆ.

45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ವಿತರಣೆ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ, 100ಕ್ಕೂ ಹೆಚ್ಚು ಫಲಾನುಭವಿಗಳು (45ವರ್ಷ ಮೇಲ್ಪಟ್ಟವರು)ಇರುವ ಕಾರ್ಯಸ್ಥಳಗಳಲ್ಲಿ (ಸಾರ್ವಜನಿಕ ಮತ್ತು ಖಾಸಗಿ) ಏಪ್ರಿಲ್​ 11ರಿಂದ ಲಸಿಕೆ ವಿತರಣೆ ನಡೆಯಲಿದ್ದು, ಅರ್ಹರು ತಮ್ಮ ಸಮೀಪ ವ್ಯಾಪ್ತಿಯ ಕೊವಿಡ್​-19 ಲಸಿಕಾ ಕೇಂದ್ರಗಳಿಗೆ ತೆರಳಿ ವ್ಯಾಕ್ಸಿನೇಶನ್​ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​, ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸರ್ಕಾರಿ/ಖಾಸಗಿ ಕಚೇರಿಗಳ ಉದ್ಯೋಗಿಗಳು, ಮ್ಯಾನೇಜ್​ಮೆಂಟ್​ನ್ನು ರಾಜ್ಯಸರ್ಕಾರದ ವತಿಯಿಂದ ಸಂಪರ್ಕಿಸುವ ಕೆಲಸ ಆಗಬೇಕು. 100 ಕ್ಕೂ ಹೆಚ್ಚು ಫಲಾನುಭವಿಗಳು ಇರುವ ಕಚೇರಿಗಳು ತಮ್ಮಲ್ಲಿ ಕೆಲಸ ಮಾಡುತ್ತಿರುವ 45 ವರ್ಷ ಮೇಲ್ಪಟ್ಟ ಉದ್ಯೋಗಿಗಳಿಗೆ ಲಸಿಕೆ ಹಾಕಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 45 ವರ್ಷ ಮೇಲ್ಪಟ್ಟ ಕೇಂದ್ರ ಸರ್ಕಾರದ ಎಲ್ಲ ನೌಕರರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮಂಗಳವಾರವಷ್ಟೇ ಸರ್ಕಾರ ಸೂಚನೆ ನೀಡಿದೆ.

ಇದನ್ನೂ ಓದಿ:  ವೈರಲ್ ವಿಡಿಯೋ: ಕಿಂಗ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕಾ! ಶಕ್ತಿಮಾನ್ ಅಲ್ಟ್ರಾ ಪ್ರೊ ಮ್ಯಾಕ್ಸ್ ಎಂದ ನೆಟ್ಟಿಗರು

Tamil Nadu Assembly polls: ಸ್ಟಾಲಿನ್ ಪುತ್ರ ಉದಯನಿಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಎರಡೆರಡು ದೂರುಗಳು

Corona vaccination at public private workplaces from April 11

Published On - 7:52 pm, Wed, 7 April 21