AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu Assembly polls: ಸ್ಟಾಲಿನ್ ಪುತ್ರ ಉದಯನಿಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಎರಡೆರಡು ದೂರುಗಳು

ಉದಯನಿಧಿ ತಮ್ಮ ಭಾಷಣದಲ್ಲಿ ಹೇಳಿರುವ ಮಾತುಗಳು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಯೋಗ ಹೇಳಿದೆ.

Tamil Nadu Assembly polls: ಸ್ಟಾಲಿನ್ ಪುತ್ರ ಉದಯನಿಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಎರಡೆರಡು ದೂರುಗಳು
ಉದಯನಿಧಿ ಸ್ಟಾಲಿನ್
ಅರುಣ್​ ಕುಮಾರ್​ ಬೆಳ್ಳಿ
|

Updated on:Apr 07, 2021 | 8:17 PM

Share

ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಪಕ್ಷದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಆಧ್ಯಕ್ಷ ಎಂ.​ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ತೊಂದರೆ ಎದುರಾಗಿದೆ. ಉದಯನಿಧಿ ಅವರು ಬಿಜೆಪಿಯ ದಿವಂಗತ ನಾಯಕರಾದ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರ ವಿರುದ್ಧ ಮಾಡಿರುವ ಟೀಕೆಗಳಿಗೆ ಚುನಾವಣಾ ಅಯೋಗವು ವಿವರಣೆ ಕೇಳಿದೆ. ಹಾಗೆಯೇ ಎಐಎಡಿಎಮ್​ಕೆ ಪಕ್ಷ ಸಹ ಚುನಾವಣಾ ಅಯೋಗಕ್ಕೆ ದೂರೊಂದನ್ನು ಸಲ್ಲಿಸಿ, ಮಂಗಳವಾರದಂದು ತಮಿಳುನಾಡು ವಿಧಾನಸಭೆಗೆ ನಡೆದ ಮತದಾನದ ಸಂದರ್ಭದಲ್ಲಿ ಉದಯನಿಧಿ ಅವರು ತಮ್ಮ ಪಕ್ಷದ ಚಿಹ್ನೆ ಇರುವ ಟಿ-ಶರ್ಟ್ ಧರಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದರಿಂದ ಅವರನ್ನು ಅನರ್ಹಗೊಳಿಸಬೇಕೆಂದು ಹೇಳಿದೆ.

ಭಾರತೀಯ ಜನತಾ ಪಕ್ಷ ದಿವಂಗತ ನಾಯಕರು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಉದಯನಿಧಿ ಅವರು ಅಗೌರವದಿಂದ ಮಾತಾಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಪಕ್ಷದ ನಾಯಕರು ಏಪ್ರಿಲ್ 2ರಂದು ದೂರು ಸಲ್ಲಿಸಿದ ನಂತರ ಅಯೋಗವು ಅವರಿಂದ ವಿವರಣೆಯನ್ನು ಕೇಳಿದ್ದು ಬುಧವಾರದೊಳಗೆ ಅದನ್ನು ಸಲ್ಲಿಸುವಂತೆ ತಿಳಿಸಿದೆ. ಮಾರ್ಚ್ 31 ರಂದು ಧಾರಾಪುರಮ್ ಎಂಬಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಉದಯನಿಧಿ ಅವರು, ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಿರುಕುಳ ಮತ್ತು ಒತ್ತಡ ತಾಳಲಾರದೆ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಸಾವನ್ನಪ್ಪಿದರು,’ ಅಂತ ಹೇಳಿದ್ದರು.

ಉದಯನಿಧಿ ತಮ್ಮ ಭಾಷಣದಲ್ಲಿ ಹೇಳಿರುವ ಮಾತುಗಳು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಯೋಗ ಹೇಳಿದೆ. ರಾಜಕೀಯ ಧುರೀಣ ಮತ್ತು ಕಾರ್ಯಕರ್ತರ ಸಾರ್ವಜನಿಕ ಚಟುವಟಿಕಗಳಿಗೆ ಹೊರತಾಗಿ ಅವರ ವೈಯಕ್ತಿಕ ಬದುಕಿನ ಯಾವುದೇ ಅಂಶವನ್ನು ಒಂದು ಪಕ್ಷವಾಗಲೀ ಅಥವಾ ಅದರ ನಾಯಕರಾಗಲೀ ಖಂಡಿಸಬಾರದು ಮತ್ತು ಟೀಕೆಯನ್ನೂ ಮಾಡಬಾರದು,’ ಎಂದು ಹೇಳಿರುವ ಆಯೋಗವು, ‘ಬೇರೆ ಪಕ್ಷಗಳ ಅಥವಾ ಆ ಪಕ್ಷಗಳ ನಾಯಕರ ವಿರುದ್ಧ ಆಧಾರರಹಿತ ಆರೋಪ ಮಾಡಬಾರದು,’ ಎಂದಿದೆ.

ಏತನ್ಮಧ್ಯೆ, ಎಐಎಡಿಎಮ್​ಕೆ ಪಕ್ಷವು ತಮಿಳುನಾಡು ಮುಖ್ಯ ಚುನಾವಣಾಧಿಕಾರಿಗೆ ದೂರೊಂದನ್ನು ಸಲ್ಲಿಸಿ ಉದಯನಿಧಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದರಿಂದ ಅವರನ್ನು ಚುನಾವಣಾ ಕಣದಿಂದ ಅನರ್ಹಗೊಳಿಸಬೇಕು ಎಂದು ಹೇಳಿದೆ. ಎಐಎಡಿಎಂ​ಕೆ ಪಕ್ಷದ ಕಾನೂನು ವಿಂಗ್​ನ ಜಂಟಿ ಕಾರ್ಯದರ್ಶಿಯಾಗಿರುವ ಆರ್ ಎಮ್​ ಬಾಬು ಮುರುಗವೇಲ್ ಅವರು ಡಿಎಮ್​ಕೆ ಪಕ್ಷದ ಚುನಾವಣಾ ಚಿಹ್ನೆಯಾಗಿರುವ ಉದಯಿಸುವ ಸೂರ್ಯ ಮತ್ತು ಪಕ್ಷದ ಧ್ವಜದ ಚಿತ್ರಗಳಲ್ಲಿ ಹೊಂದಿದ್ದ ಶರ್ಟ್​ ಅನ್ನು ಮಂಗಳವಾರದಂದು ತಾವು ವೋಟು ಚಲಾಯಿಸುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಧರಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಎಐಎಡಿಎಮ್​ಕೆ ನೀಡಿರುವ ದೂರಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಉದಯನಿಧಿ ಅವರಿಗೆ ಇನ್ನೂ ಯಾವುದೇ ನೋಟಿಸ್ ನೀಡಿಲ್ಲ. ಒಂದು ಪಕ್ಷ ಈ ದೂರನ್ನು ಕೂಡ ಅಯೋಗ ಗಂಭೀರವಾಗಿ ಪರಿಗಣಿಸಿದರೆ ಸ್ಟಾಲಿಮ್ ಪುತ್ರನಿಗೆ ತೊಂದರೆ ತೊಂದರೆ ಎದುರಾಗೋದು ನಿಶ್ಚಿತವೆನಿಸುತ್ತಿದೆ. ಇದೇ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಉದಯನಿಧಿ ಅವರು ಡಿಎಮ್​ಕೆ ಪಕ್ಷದ ಪ್ರಮುಖ ಧುರೀಣ ಮತ್ತು ಮಾಜಿ ಮುಖ್ಯಮಂತ್ರಿ ಎಮ್​ ಕರುಣಾನಿಧಿ ಅವರು ಪ್ರತಿನಿಧಿಸುತ್ತಿದ್ದ ಚೆಪಾಕ್-ಟ್ರಿಪ್ಲಿಕೇನ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ತಮಿಳುನಾಡಿನ ವಿಧಾನಸಭೆಗೆ ಒಂದು ಹಂತದ ಚುನಾವಣೆಗೆ ಮಂಗಳವಾರದಂದು ಮತದಾನ ನಡೆಯಿತು.

ಇದನ್ನೂ ಓದಿ: Tamil Nadu Elections 2021: ತಮಿಳುನಾಡಿನಲ್ಲಿ ಚುನಾವಣೆಗೆ ಮುನ್ನ ಹಣ ಹಂಚಲಾಗಿತ್ತು: ಕಮಲ್ ಹಾಸನ್ ಆರೋಪ

ಇದನ್ನೂ ಓದಿ: Tamil Nadu Assembly Elections 2021: ಮತದಾರರ ಪಟ್ಟಿಯಲ್ಲಿ ಶಶಿಕಲಾ ಹೆಸರು ನಾಪತ್ತೆ; ಇದು ಎಐಎಡಿಎಂಕೆ ಸಂಚು ಎಂದ ಎಎಂಎಂಕೆ

Published On - 5:57 pm, Wed, 7 April 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ