Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal Elections 2021: ಪಶ್ಚಿಮ ಬಂಗಾಳದ ರಿಕ್ಷಾವಾಲಾನ ಮನೆಯಲ್ಲಿ ಊಟ ಮಾಡಿದ ಅಮಿತ್ ಶಾ

Amit Shah in West Bengal: ಬಿಜೆಪಿ ಬಂಗಾಳದಲ್ಲಿ ಅಧಿಕಾರಕ್ಕೇರಿದರೆ ಕೈಗಾರಿಕಾ ವಲಯಕ್ಕೆ ಉತ್ತೇಜನ ನೀಡಲಾಗುವುದು. ಈ ಪ್ರದೇಶದಲ್ಲಿ ಕೈಗಾರಿಕೆಯನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.

West Bengal Elections 2021: ಪಶ್ಚಿಮ ಬಂಗಾಳದ ರಿಕ್ಷಾವಾಲಾನ ಮನೆಯಲ್ಲಿ ಊಟ ಮಾಡಿದ ಅಮಿತ್ ಶಾ
ಅಮಿತ್ ಶಾ
Follow us
ರಶ್ಮಿ ಕಲ್ಲಕಟ್ಟ
|

Updated on: Apr 07, 2021 | 8:10 PM

ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 10ಕ್ಕೆ ನಾಲ್ಕನೇ ಹಂತದ ಮತದಾನ ನಡೆಯಲಿದ್ದು, ಹೌರಾ ಜಿಲ್ಲೆಯ ದೊಮಜೂರ್​ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಕ್ಷಾವಾಲಾನ ಮನೆಯಲ್ಲಿ ಊಟ ಮಾಡಿದ್ದಾರೆ. ದೊಮಜೂರ್​ನಲ್ಲಿ ಬಿಜೆಪಿಯ ರಜಿಬ್ ಬ್ಯಾನರ್ಜಿ  ಸ್ಪರ್ಧಿಸುತ್ತಿದ್ದು,ಬಿಜೆಪಿ ಭರ್ಜರಿ ಪ್ರಚಾರ ನಡೆಸಿದೆ. ರಜಿಬ್ ಅವರು ಬಂಗಾಳದ ಮಾಜಿ ಅರಣ್ಯ ಸಚಿವರಾಗಿದ್ದು ಕೆಲವು ತಿಂಗಳ ಹಿಂದೆಯಷ್ಟೇ ಟಿಎಂಸಿಯಿಂದ ಬಿಜೆಪಿಗೆ ಸೇರಿದ್ದರು. ನಾನು ಒಂದೇ ಒಂದು ಗ್ರಾಮ ಪಂಚಾಯತ್ ಗೆ ಮಾತ್ರ ಭೇಟಿ ನೀಡಿದ್ದೆ ಆದರೆ ಅಲ್ಲಿನ ಉತ್ಸಾಹ ನೋಡಿದರೆ ರಜಿಬ್ ಬ್ಯಾನರ್ಜಿ ಬಹುಮತದಿಂದ ಗೆಲ್ಲುವ ಲಕ್ಷಣಗಳು ಕಾಣುತ್ತಿದೆ. ಮಮತಾ ಬ್ಯಾನರ್ಜಿ ಅವರ ಒತ್ತಡ ಆಕೆಯ ಭಾಷಣ ಮತ್ತು ವರ್ತನೆಯಲ್ಲಿ ಕಾಣಿಸುತ್ತದೆ ಎಂದು ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಅಮಿತ್ ಶಾ ಹೇಳಿದ್ದಾರೆ.

ನೆಲದಲ್ಲಿ ಕುಳಿತು ಊಟ ಮಾಡಿದ ಶಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಅಮಿತ್ ಶಾ ಬುಧವಾರ ಬಂಗಾಳದ ರಿಕ್ಷಾವಾಲಾನ ಮನೆಯಲ್ಲಿ  ಮಧ್ಯಾಹ್ನದೂಟ ಮಾಡಿದ್ದಾರೆ. ನೆಲದಲ್ಲಿ ಕುಳಿತು ಪುಟ್ಟ ಮರದ ಮೇಜಿನಲ್ಲಿರಿಸಿದ ಅನ್ನ, ಬೇಳೆಸಾರು, ತರಕಾರಿಗಳಿರುವ ತಟ್ಟೆಯಿಂದ ಅಮಿತ್ ಶಾ ಊಟ ಮಾಡುತ್ತಿರುವ ದೃಶ್ಯವನ್ನು ಎಎನ್ಐ ಟ್ವೀಟ್ ಮಾಡಿದೆ.

ಅಮಿತ್ ಶಾ ಮತ್ತು ಬ್ಯಾನರ್ಜಿ ಲಾರಿಯೊಂದರ ಮೇಲೆ ನಿಂತು ಮತದಾರರತ್ತ ಕೈ ಬೀಸುತ್ತಿದ್ದು, ಬಿಜೆಪಿ ಧ್ವಜಗಳನ್ನು ಹಿಡಿದು ಬೆಂಬಲಿಗರು ಹೆಜ್ಜೆ ಹಾಕಿದ್ದಾರೆ. ದಾರಿಯುದ್ದಕ್ಕೂ ನಾಯಕರಿಗೆ ಹೂವಿನ ಮಳೆ ಸುರಿಯಲಾಗಿತ್ತು.

2011ರಲ್ಲಿ ಮಮತಾ ಬ್ಯಾನರ್ಜಿ ಗೆಲುವಿಗೆ ಕಾರಣವಾದ ಸಿಂಗೂರ್ ಭೂಸ್ವಾಧೀನ ವಿರುದ್ಧ ಚಳವಳಿ ನಡೆದ ಸಿಂಗೂರ್ ನಲ್ಲಿಯೂ ಅಮಿತ್ ಶಾ ರೋಡ್ ಶೋ ನಡೆಸಿದ್ದಾರೆ. ನಿನ್ನೆ ಪ್ರಧಾನಿ ಮೋದಿಯವರು ಇಲ್ಲಿಗೆ ಭೇಟಿ ನೀಡಿದ್ದರು. ಬಿಜೆಪಿ ಬಂಗಾಳದಲ್ಲಿ ಅಧಿಕಾರಕ್ಕೇರಿದರೆ ಕೈಗಾರಿಕಾ ವಲಯಕ್ಕೆ ಉತ್ತೇಜನ ನೀಡಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.

ನಾವು ಈ ಪ್ರದೇಶಲ್ಲಿ ಕೈಗಾರಿಕೆಯನ್ನು ಅಭಿವೃದ್ಧಿ ಪಡಿಸುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ಈ ಪ್ರದೇಶದಲ್ಲಿ ಆಲೂಗಡ್ಡೆ ಕೃಷಿಗಾಗಿ 500 ಕೋಟಿ ಮಧ್ಯಪ್ರವೇಶಿಕೆ ನಿಧಿಯನ್ನುಘೋಷಿಸಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಮೂರನೇ ಹಂತ ಮುಕ್ತಾಯವಾಗಿದೆ.

ಇದನ್ನೂ ಓದಿ: West Bengal Elections 2021: ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ, ವಿವಿಪ್ಯಾಟ್ ಪತ್ತೆ; ಚುನಾವಣಾ ಅಧಿಕಾರಿ ಅಮಾನತು

West Bengal Election 2021: ‘ದೀದಿ.. ಜನರ ನಂಬಿಕೆಗೆ ದ್ರೋಹ ಮಾಡಿದ ನೀವು ಸೋಲನ್ನು ಒಪ್ಪಿಕೊಳ್ಳಲೇಬೇಕು’-ಹೂಗ್ಲಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!