West Bengal Election 2021: ‘ದೀದಿ.. ಜನರ ನಂಬಿಕೆಗೆ ದ್ರೋಹ ಮಾಡಿದ ನೀವು ಸೋಲನ್ನು ಒಪ್ಪಿಕೊಳ್ಳಲೇಬೇಕು’-ಹೂಗ್ಲಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

West Bengal Election 2021: ‘ದೀದಿ.. ಜನರ ನಂಬಿಕೆಗೆ ದ್ರೋಹ ಮಾಡಿದ ನೀವು ಸೋಲನ್ನು ಒಪ್ಪಿಕೊಳ್ಳಲೇಬೇಕು’-ಹೂಗ್ಲಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ

ಇಲ್ಲಿನ ಜನರು ಹಣ ತೆಗೆದುಕೊಂಡು ಬಿಜೆಪಿ ರ‍್ಯಾಲಿಗೆ ಹೋಗುತ್ತಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ರಾಜ್ಯದ ಜನರಿಗೆ ಅವಮಾನ ಮಾಡುತ್ತಿದ್ದಾರೆ. ನಂದಿಗ್ರಾಮದಲ್ಲಿ ಏನಾಗುತ್ತದೆ ಎಂಬುದನ್ನು ಮೇ 2ರವರೆಗೆ ಕಾದು ನೋಡಿ ಎಂದು ನರೇಂದ್ರ ಮೋದಿ ಹೇಳಿದರು.

Lakshmi Hegde

|

Apr 03, 2021 | 5:08 PM

ಕೋಲ್ಕತ್ತ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಬ್ಬರೂ ಒಂದೇ ಗಂಟೆಯ ಅಂತರಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಏಪ್ರಿಲ್​ 6ರಂದು ಮೂರನೇ ಹಂತದ ಮತದಾನ ಇರುವ ಹಿನ್ನೆಲೆಯಲ್ಲಿ ಇಂದು ತಾರಕೇಶ್ವರ ವಿಧಾಣಸಭಾ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಮತಾ ಬ್ಯಾನರ್ಜಿ ವಿರುದ್ಧ ತೀಕ್ಷ್ನವಾಗಿ ವಾಗ್ದಾಳಿ ನಡೆಸಿದರು. ಪದೇಪದೆ ಚುನಾವಣಾ ಆಯೋಗ, ಇವಿಎಂ ಮೇಲೆ ಆರೋಪ ಮಾಡುವ ಮಮತಾ ಬ್ಯಾನರ್ಜಿಯವರಿಗೆ ತಿರುಗೇಟು ನೀಡಿದರು.

ಕ್ರೀಡೆಯಲ್ಲಿ ಯಾವುದೇ ಆಟಗಾರ ಪದೇಪದೆ ಅಂಪೈರ್​​ನ ನಿರ್ಧಾರಗಳನ್ನು ಅನುಮಾನಸಿ, ಪ್ರಶ್ನಿಸಿದರೆ ಆ ಆಟಗಾರನಲ್ಲೇ ಏನೋ ಸಮಸ್ಯೆ ಇದೆ ಎಂದರ್ಥ. ಹಾಗೇ, ರಾಜಕೀಯದಲ್ಲಿ ಯಾರು ಪದೇಪದೆ ಇವಿಎಂ, ಚುನಾವಣಾ ಆಯೋಗವನ್ನು ಅನುಮಾನಿಸುವುದು, ಸೋಲಿಗೆ ಇವಿಎಂ, ಇಸಿಗಳೇ ಕಾರಣ ಎಂದು ದೂಷಿಸುತ್ತಾರೋ, ಅವರ ಆಟ ಮುಗಿದಿದೆ. ರಾಜಕೀಯದಲ್ಲಿ ಇರಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದೇ ನಾವು ಭಾವಿಸಬೇಕು ಎಂದು ನರೇಂದ್ರ ಮೋದಿ ಹೇಳಿದರು.

ಪಶ್ಚಿಮ ಬಂಗಾಳಕ್ಕೆ ಏನು ಬೇಕು ಎಂಬುದು ಇಲ್ಲಿನ ಜನರಿಗೆ ಸ್ಪಷ್ಟವಾಗಿ ಗೊತ್ತು. ಅದರಲ್ಲಿ ಅವರಿಗೆ ಯಾವುದೇ ಗೊಂದಲವೂ ಇಲ್ಲ. ಹಾಗಾಗಿ ಇಲ್ಲಿನ ಜನರು ಇದುವರೆಗೂ ಬಹುಮತದೊಂದಿಗೇ ಸರ್ಕಾರವನ್ನು ತರುತ್ತಿದ್ದಾರೆ. ಇಲ್ಲಿನ ಜನರು ಬುದ್ಧಿಜೀವಿಗಳಾಗಿದ್ದು, ಆಲೋಚನೆಗಳು ಸ್ಪಷ್ಟವಾಗಿರುತ್ತದೆ ಎಂದು ತಿಳಿಸಿದರು.

ಜನರ ಸ್ವಾಭಿಮಾನಕ್ಕೆ ಧಕ್ಕೆ ಇಲ್ಲಿನ ಜನರು ಹಣ ತೆಗೆದುಕೊಂಡು ಬಿಜೆಪಿ ರ‍್ಯಾಲಿಗೆ ಹೋಗುತ್ತಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ರಾಜ್ಯದ ಜನರಿಗೆ ಅವಮಾನ ಮಾಡುತ್ತಿದ್ದಾರೆ. ನಂದಿಗ್ರಾಮದಲ್ಲಿ ಏನಾಗುತ್ತದೆ ಎಂಬುದನ್ನು ಮೇ 2ರವರೆಗೆ ಕಾದು ನೋಡಿ. ನೀವು ನೋಡುತ್ತಿರಿ.. ಚುನಾವಣೆಯ ಒಂದೊಂದೇ ಹಂತ ಬರುತ್ತಿದ್ದಂತೆ ದೀದಿಯ ಹತಾಶೆಯೂ ಹೆಚ್ಚುತ್ತ ಹೋಗುತ್ತದೆ. ನನ್ನನ್ನು ನಿಂದಿಸುವುದೂ ಜಾಸ್ತಿಯಾಗುತ್ತದೆ ಎಂದು ಹೇಳಿದರು. ಅಷ್ಟೇ ಅಲ್ಲ, ದೀದಿ ನೀವು ಇಲ್ಲಿನ ಜನರ ಜೀವನವನ್ನು ಹಾಳು ಮಾಡಿದ್ದೀರಿ.. ಹಾಗಾಗಿ ಸೋಲನ್ನು ಒಪ್ಪಿಕೊಳ್ಳಲೇಬೇಕು ಎಂದು ಕುಟುಕಿದರು.

ಇದನ್ನೂ ಓದಿ: West Bengal Elections 2021: ಹೂಗ್ಲಿಯಲ್ಲಿ ಇಂದು ಮೋದಿ-ದೀದಿ ಮುಖಾಮುಖಿ !- ತಾರಕೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರಿಂದಲೂ ಚುನಾವಣಾ ರ‍್ಯಾಲಿ

ಎಲ್ಲ ಖಾತೆಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿರೋದಾಗಿ ಆರೋಪಿಸಿದ ಯತ್ನಾಳ್

Follow us on

Related Stories

Most Read Stories

Click on your DTH Provider to Add TV9 Kannada