ಮೈಸೂರು: ಮೊಬೈಲ್ ಬಳಸುವ ವಿಚಾರಕ್ಕೆ ಗಲಾಟೆ: ಮಗನನ್ನೇ ಕೊಂದ ಅಪ್ಪ!

ಮೊಬೈಲ್ ಬಳಸುವ ವಿಚಾರಕ್ಕೆ ತಂದೆ ಮಗನ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಲಾಟೆಯಲ್ಲಿ ತಂದೆಯೇ ಮಗನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಮತ್ತೊಂದೆಡೆ ಆಸ್ತಿ ವಿಚಾರಕ್ಕೆ ಯುವಕನೋರ್ವ ತನ್ನ ಚಿಕ್ಕಪ್ಪನ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಈ ಎರಡೂ ಸುದ್ದಿಗಳ ವಿವರ ಈ ಕೆಳಗಿನಂತಿದೆ.

ಮೈಸೂರು: ಮೊಬೈಲ್ ಬಳಸುವ ವಿಚಾರಕ್ಕೆ ಗಲಾಟೆ: ಮಗನನ್ನೇ ಕೊಂದ ಅಪ್ಪ!
ಪ್ರಾತಿನಿಧಿಕ ಚಿತ್ರ
Updated By: ರಮೇಶ್ ಬಿ. ಜವಳಗೇರಾ

Updated on: Nov 30, 2023 | 7:54 AM

ಮೈಸೂರು, (ನವೆಂಬರ್ 30): ಮಕ್ಕಳಿಗೆ ಮೊಬೈಲ್‌ (Mobile) ಕೊಟ್ಟರೆ ಊಟ, ಮೊಬೈಲ್‌ ಕೊಟ್ಟರೆ ಸುಮನ್ನಿರುವ ಪರಿಸ್ಥಿತಿ ಬಂದೊದಗಿದೆ. ಕಣ್ಣು ಬಿಟ್ಟು ಸರಿಯಾಗಿ ಜಗತ್ತು ನೋಡದ ಒಂದು ವರ್ಷದ ಮಗುವಿನಿಂದ ಹಿಡಿದು ದೊಡ್ಡವರ ವರೆಗೂ ಮೊಬೈಲ್​ಗೆ ಅಡಿಕ್ಟ್ ಆಗ್ಬಿಟ್ಟಿದ್ದಾರೆ. ಅದರಂತೆ ಮೊಬೈಲ್ ಬಳಸುವ ವಿಚಾರದಲ್ಲಿ ತಂದೆ-ಮಗನ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೌದು…ಮೊಬೈಲ್ ಬಳಸುವ ವಿಚಾರಕ್ಕೆ ಶುರುವಾದ ಜಗಳ ಕೊನೆಗೆ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ಮೈಸೂರಿನ (Mysuru) ಬನ್ನಿಮಂಟಪದಲ್ಲಿ ನಡೆದಿದೆ.

ಮೊಬೈಲ್ ಬಳಸುವ ವಿಚಾರದಲ್ಲಿ ತಂದೆ ಮಗನ ನಡುವೆ ಗಲಾಟೆ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನಿಂದ ತಂದೆ ಅಸ್ಲಂಪಾಷ, ತನ್ನ ಮಗ ಉಮೇಜ್‌ಗೆ ಚಾಕುವಿನಿಂದ ಇರಿದಿದ್ದಾಣೆ. ಪರಿಣಾಮ ಉಮೇಜ್‌ ಮೃತಪಟ್ಟಿದ್ದಾನೆ. ಈ ಬಗ್ಗೆ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಸ್ಲಂಪಾಷನನ್ನು ಬಂಧಿಸಿದ್ದಾರೆ.

ಅಣ್ಣನ ಮಗನಿಂದ ಚಿಕ್ಕಪ್ಪನ ಮೇಲೆ ಹಲ್ಲೆ

ಮೈಸೂರು: ಜಮೀನಿನ ವಿಚಾರವಾಗಿ ಯುವಕನೋರ್ವ ತನ್ನ ಚಿಕ್ಕಪ್ಪನ ಮೇಲೆ ಹಲ್ಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮರಳ್ಳಿಪುರ ಗ್ರಾಮದಲ್ಲಿ ನಡೆದಿದೆ. ಪರಶಿವಪ್ಪ ಹಲ್ಲೆಗೊಳಗಾದ ವ್ಯಕ್ತಿ. ಪರಶಿವಪ್ಪರ ಅಣ್ಣನ ಮಗ ಆದೀಶ್ ಎನ್ನುವಾತ ಹಲ್ಲೆ ಮಾಡಿದ್ದಾನೆ. ಸದ್ಯ ಹಲ್ಲೆಗೊಳಗಾಗಿರುವ ಪರಶಿವಪ್ಪನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ