ಮೈಸೂರು, ಜುಲೈ 22: ಪಿರಿಯಾಪಟ್ಟಣ (Piriyapattana) ತಾಲೂಕಿನ ಬೈಲುಕುಪ್ಪೆ (Bailukuppe) ಟಿಬೆಟಿಯನ್ ಕ್ಯಾಂಪ್ನಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಮ್ಸ್) ಉಚಿತ ಆರೋಗ್ಯ ಶಿಬಿರ ಆಯೋಜಿಸಿದೆ. ಮಂಗಳವಾರ ಜುಲೈ 23 ರಿಂದ ಶುಕ್ರವಾರ 26ರ ಸಾಯಂಕಾಲದವರೆಗೂ ಶಿಬಿರ ನಡೆಯಲಿದೆ. ಉಚಿತ ಆರೋಗ್ಯ ಶಿಬಿರಕ್ಕೆ ಸಾರ್ವಜನಿಕರೂ ಬರಹುದಾಗಿದೆ. ಶಿಬಿರದಲ್ಲಿ ಪಲ್ಮನರಿ ಮೆಡಿಸಿನ್ ಶ್ವಾಸಕೋಶ, ರುಮಟಾಲಜಿ, ನೆಫ್ರಾಲಜಿಸ್ಟ್ (ಮೂತ್ರಪಿಂಡ ತಜ್ಞ), ಸ್ತ್ರೀರೋಗ ತಜ್ಞ,ನರ ಚಿಕಿತ್ಸಾ ತಜ್ಞ, ಆಂಕೊಲಾಜಿ ಸೇರಿದಂತೆ ವಿವಿಧ ವೈದ್ಯರು ಮತ್ತು ತಜ್ಞನರು ಪಾಲ್ಗೊಂಳ್ಳಲಿದ್ದಾರೆ.
ಉಚಿತ ಶಿಬಿರದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೋನಮ್, ಮೂರು ದಿನಗಳ ಕಾಲ ಏಮ್ಸ್ ವತಿಯಿಂದ ನಾಲ್ಕು ದಿನಗಳ ಕಾಲ ಉಚಿತ ಶಿಬಿರ ಆಯೋಜಿಸಲಾಗಿದೆ. ನುರಿತ ವೈದ್ಯರು ಮತ್ತು ತಜ್ಞರು ಶಿಬಿರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
23ರ ಬಳಗ್ಗೆ 11 ಗಂಟೆಗೆ ಆರಂಭವಾಗಿ 26ರ ಸಾಯಂಕಾಲ ಕೊನೆಗೊಳ್ಳುತ್ತಾರೆ. ನಮ್ಮ ವೈದ್ಯರು 27 ರಂದು ಅಲ್ಲಿಂದ ಹೊರಡಲಿದ್ದಾರೆ. ಈ ಶಿಬಿರಕ್ಕೆ ಸಾರ್ವಜನಿಕರು ಆಗಮಿಸಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬಹುದಾಗಿದೆ. ಶಿಬಿರಕ್ಕೆ ಯಾವುದೇ ದಾಖಲೆಗಳನ್ನು ತರುವ ಅವಶ್ಯಕತೆ ಇಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ