ಇಡೀ ರಾತ್ರಿ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರು ಮಾತ್ರವೇ ಕಾರ್ಯನಿರ್ವಹಿಸಿದರು! ಯಾಕೆ ಗೊತ್ತಾ?

| Updated By: preethi shettigar

Updated on: Nov 26, 2021 | 1:13 PM

ಮೊದಲು ಕೇವಲ ಮಹಿಳಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸಬೇಕು ಎಂದಾಗ ಆತಂಕವಾಗಿತ್ತು. ಆದರೆ ಈಗ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಮಹಿಳಾ ಹೆಡ್ ಕಾನ್‌ಸ್ಟೆಬಲ್ ಪಿ.ಚಂಪಕಾ ಹೇಳಿದ್ದಾರೆ.

ಇಡೀ ರಾತ್ರಿ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರು ಮಾತ್ರವೇ ಕಾರ್ಯನಿರ್ವಹಿಸಿದರು! ಯಾಕೆ ಗೊತ್ತಾ?
ಮಹಿಳಾ ಸಿಬ್ಬಂದಿ
Follow us on

ಮೈಸೂರು: ಜಿಲ್ಲೆಯ ನಂಜನಗೂಡು ಉಪವಿಭಾಗದ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ಪಾಳಿಯಲ್ಲಿ  ಮಹಿಳಾ ಪೊಲೀಸ್ (Woman police) ಅಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸಿದ್ದಾರೆ. ಆ ಮೂಲಕ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ರಾಷ್ಟ್ರೀಯ ಐಕ್ಯತಾ ಸಪ್ತಾಹ ಹಿನ್ನೆಲೆ ಒಟ್ಟು 50 ಮಹಿಳಾ ಸಿಬ್ಬಂದಿ(ಡಬ್ಲ್ಯುಪಿಸಿ – WPC) ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕದಾದ್ಯಂತ ಇದೇ ಮೊದಲ ಬಾರಿಗೆ ಕೇವಲ ಮಹಿಳಾ ಸಿಬ್ಬಂದಿಗಳು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸದ್ದಾರೆ. ಈ ಬಗ್ಗೆ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಪಿ.ಚಂಪಕಾ ಅಭಿಪ್ರಾಯ ಹಂಚಿಕೊಂಡಿದ್ದು, ಮೊದಲು ಕೇವಲ ಮಹಿಳಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸಬೇಕು ಎಂದಾಗ ಆತಂಕವಾಗಿತ್ತು. ಆದರೆ ಈಗ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಉಪ ಪೊಲೀಸ್ ವರಿಷ್ಠಾಧಿಕಾರಿ ಜಿ. ನಿಖಿತಾ ನೇತೃತ್ವದಲ್ಲಿ ಮಹಿಳಾ ಅಧಿಕಾರಿಗಳು ಈ ವಿಚಾರದೊಂದಿಗೆ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿದ್ದು, ಮೈಸೂರು ಎಸ್​ಪಿ ಆರ್. ಚೇತನ್ ಅವರು ಒಪ್ಪಿಗೆ ನೀಡಿದ್ದಾರೆ. ಮಹಿಳಾ ಹೆಡ್ ಕಾನ್ಸ್‌ಟೇಬಲ್‌ ಪಿ. ಚಂಪಕಾ ಈ ಮೊದಲು ಪುರುಷ ಪೊಲೀಸ್ ಸಿಬ್ಬಂದಿಗಳ ಜತೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಮಹಿಳಾ ಸಿಬ್ಬಂದಿಗಳ ಜತೆ ರಾತ್ರಿ ಪಾಳಿ ಮಾಡಿದ್ದಾರೆ. ಆ ಮೂಲಕ ಪಿ. ಚಂಪಕಾ ಅಧಿಕಾರವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

17 ವರ್ಷಗಳ ಪೊಲೀಸ್ ಸೇವೆಯಲ್ಲಿ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಪಿ. ಚಂಪಕ ಎಂದೂ ಎಲ್ಲಾ ಬೀಟ್ ಪಾಯಿಂಟ್‌ಗಳನ್ನು ಅಂದರೆ ರೌಡಿಶೀಟರ್​ಗಳ ಚಲನವಲನ, ವಾಹನಗಳ ಉಸ್ತುವಾರಿ, ಅಪರಾಧಿಗಳ ಪಟ್ಟಿ ಮಾಡುವಿಕೆ, ಅನುಮಾಸ್ಪದವಾಗಿ ಓಡಾಡುವವರ ಪರಿಶೀಲನೆ ಒಟ್ಟಿಗೆ ಮಾಡಿಲ್ಲ. ಏಕೆಂದರೆ ಮಹಿಳಾ ಪೇದೆಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳು ವಿಶೇಷ ಸಂದರ್ಭಗಳಲ್ಲಿ ಮಾತ್ರ ರಾತ್ರಿ ಪಾಳಿಯ ಕೆಲಸದಲ್ಲಿ ತೊಡಗುತ್ತಾರೆ.

ಬುಧವಾರ ರಾತ್ರಿ 9 ಗಂಟೆಗೆ ಪ್ರಾರಂಭವಾದ ಬೀಟ್ ಸತತ ಎಂಟು ಗಂಟೆಗಳ ಕಾಲ ನಡೆಯಿತು. ಒಂಬತ್ತು ಸ್ಥಳಗಳಿಗೆ ಭೇಟಿ ಮಾಡುತ್ತಾ ಪಿ. ಚಂಪಕ, ತಮ್ಮ ದ್ವಿಚಕ್ರ ವಾಹನವನ್ನು ಓಡಿಸಿದ್ದಾರೆ. ತಮ್ಮ ಫೋನ್‌ನಲ್ಲಿ ಇ-ಬೀಟ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತಮ್ಮ ಉಪಸ್ಥಿತಿಯನ್ನು ನೋಂದಾಯಿಸಿದ್ದರು. ಎಂಟು ಪೊಲೀಸ್ ಠಾಣೆಗಳ 25 ಮಹಿಳಾ ಪೇದೆಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳಿಗೂ ಇದು ಹೊಸ ಅನುಭವವಾಗಿತ್ತು ಎನ್ನುವುದು ವಿಶೇಷ.

ಮಹಿಳಾ ಸಬಲೀಕರಣದ ಕಾರ್ಯಕ್ರಮವೊಂದರಲ್ಲಿ ತಮಗೆ ಈ ಹೊಸ ಅವಕಾಶ ಸಿಕ್ಕಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ನಿಕಿತಾ ಹೇಳಿದ್ದಾರೆ.

ಇದನ್ನೂ ಓದಿ:
Video: ಸ್ಮಶಾನದಲ್ಲಿ ಎಚ್ಚರವಿಲ್ಲದೆ ಬಿದ್ದಿದ್ದವನ ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಪೊಲೀಸ್​ ಅಧಿಕಾರಿ; ಚೆನ್ನೈ ಮಳೆ ಮಧ್ಯೆ ಮನಕಲಕುವ ದೃಶ್ಯ

ಮಹಿಳಾ ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಎಫ್​ಐಆರ್ ದಾಖಲು

Published On - 12:57 pm, Fri, 26 November 21