ಮೈಸೂರು: ಹುಣಸೂರು ನಗರ ಠಾಣೆಯಲ್ಲಿ ಮಹಿಳಾ ಪೇದೆಗೆ ಸಂಭ್ರಮದ ಸೀಮಂತ
ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಗರ್ಭಿಣಿಯಾಗಿರುವ ಮಹಿಳಾ ಸಿಬ್ಬಂದಿಗೆ ಸೀಮಂತ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದೀಗ, ಮೈಸೂರು ಜಿಲ್ಲೆಯ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯೊಬ್ಬರಿಗೆ ಸಹೋದ್ಯೋಗಿಗಳ ಸಂಭ್ರಮದ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಮಹಿಳಾ ಸಹೋದ್ಯೋಗಿಗಳಿಂದ ಅರಶಿನ, ಕುಂಕುಮ ಹಚ್ಚಿ, ಹಸಿರುಬಳೆ ತೊಡಿಸಿ ಸೀಮಂತ ಮಾಡಲಾಯಿತು.
ಮೈಸೂರು, ಡಿ.21: ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಗರ್ಭಿಣಿಯಾಗಿರುವ ಮಹಿಳಾ ಸಿಬ್ಬಂದಿಗೆ ಸೀಮಂತ (Baby Shower) ಕಾರ್ಯಕ್ರಮ ನಡೆಸಲಾಗುತ್ತಿದೆ. ಇದೀಗ, ಮೈಸೂರು (Mysuru) ಜಿಲ್ಲೆಯ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ಹೇಮಾವತಿ ಅವರಿಗೆ ಸಹೋದ್ಯೋಗಿಗಳ ಸಂಭ್ರಮದ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಮಹಿಳಾ ಸಹೋದ್ಯೋಗಿಗಳಿಂದ ಅರಶಿನ, ಕುಂಕುಮ ಹಚ್ಚಿ, ಹಸಿರುಬಳೆ ತೊಡಿಸಿ ಸೀಮಂತ ಮಾಡಲಾಯಿತು. ರೇಷ್ಮೆ ಸೀರೆ, ಅಕ್ಕಿ, ಫಲ ತಾಂಬೂಲ ಸಹಿತ ಉಡಿ ತುಂಬಿ ಆರತಿ ಬೆಳಗಿ ಅಕ್ಷತೆ ಹಾಕಿ ಶುಭ ಹಾರೈಸಲಾಯಿತು. ಆ ಮೂಲಕ ಹೆರಿಗೆ ರಜೆ ತೆರಳಿದ ಹೇಮಾವತಿ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ